-ಮೋದಿ, ಜಿನ್‌ಪಿಂಗ್ ಭೇಟಿ, ದ್ವಿಪಕ್ಷೀಯ ಮಾತುಕತೆ ಸಾಧ್ಯತೆ
ನವದೆಹಲಿ: ಏಳು ವರ್ಷಗಳ ಬಳಿಕ ಚೀನಾ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಭಾರತಕ್ಕೆ (India) ಭೇಟಿ ನೀಡಲಿದ್ದಾರೆ.
2020ರ ಗಲ್ವಾನ್ ಸಂಘರ್ಷದ (Galwan Clash) ಬಳಿಕ ಇದೇ ಮೊದಲ ಬಾರಿಗೆ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ (India) ಆಗಮಿಸಲಿದ್ದಾರೆ. ಈ ಬಾರಿಯ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS) ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಕೇಂದ್ರದಿಂದ 2186 ಕೋಟಿ ರೂ. ಬಾಕಿ – ಕೋರ್ಟ್ ಮೊರೆ: ಈಶ್ವರ ಖಂಡ್ರೆ
ಸೆಪ್ಟೆಂಬರ್ 12 ಹಾಗೂ 13ರಂದು ದೆಹಲಿಯಲ್ಲಿ (Newdelhi) ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆ ಶನಿವಾರ (ಸೆ.12) ಜಿನ್‌ಪಿಂಗ್ ಅವರು ದೆಹಲಿಗೆ ಆಗಮಿಸಲಿದ್ದಾರೆ.
ಗಲ್ವಾನ್ ಸಂಘರ್ಷದ ಬಳಿಕ ಹಲವು ವರ್ಷಗಳ ಕಾಲ ಗಡಿ ಉದ್ವಿಗ್ನತೆ, ರಾಜತಾಂತ್ರಿಕ ಅಂತರದ ಬಳಿಕ ಭಾರತ-ಚೀನಾ ಸಂಬಂಧದಲ್ಲಿ ಸುಧಾರಣೆಯಾಗಿದೆ. ಈ ಬಾರಿಯ 18ನೇ ಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದೆ.ಇದನ್ನೂ ಓದಿ: ಮುವಾಫಕ್ ಸಾಲ್ಟಿ ವಾಯುನೆಲೆ ಮೇಲೆ ಇರಾನ್ ದಾಳಿ – ಅಮೆರಿಕದ ಯುದ್ಧ ವಿಮಾನಗಳಿಗೆ ಹಾನಿ
2019ರಲ್ಲಿ ಭಾರತಕ್ಕೆ ಆಗಮಿಸಿದ್ದ ಜಿನ್‌ಪಿಂಗ್:
ಜೂನ್ 2020ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಭಾರತ-ಚೀನಾ ಸಂಬಂಧ ತೀವ್ರ ಹದಗೆಟ್ಟಿತ್ತು. ಭಾರತವು ಚೀನಾ ಹೂಡಿಕೆಗಳು ಮತ್ತು ಆ್ಯಪ್‌ಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಇತ್ತೀಚೆಗೆ ಮಾತನಾಡಿ, 2020 ರಿಂದ 2024 ರವರೆಗೆ ಗಡಿ ಪರಿಸ್ಥಿತಿಯಿಂದಾಗಿ ಸಂಬಂಧಗಳು ಕಠಿಣ ಹಂತದಲ್ಲಿದ್ದವು. ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳಲು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ಅತ್ಯಂತ ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ನವೆಂಬರ್‌ನಲ್ಲಿ ಚುನಾವಣೆ ಮುಗಿದ ತಕ್ಷಣವೇ ಇರಾನ್ ಯುದ್ಧ ಅಂತ್ಯ: ಟ್ರಂಪ್

ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಮರುಹೆಸರಿಡಲು ನಡೆಸಿದ ಪ್ರಯತ್ನಗಳನ್ನು ಭಾರತ ತಳ್ಳಿಹಾಕಿದ್ದು, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದೆ. 2025 ರಲ್ಲಿ ಬ್ರೆಜಿಲ್ ಬ್ರಿಕ್ಸ್ ಶೃಂಗಸಭೆಗೆ ಗೈರಾಗಿದ್ದ ಕ್ಸಿ ಜಿನ್‌ಪಿಂಗ್ ಈ ಬಾರಿ ದೆಹಲಿಗೆ ಆಗಮಿಸಿದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಾಗಲಿದೆ.
ಈ ಹಿಂದೆ 2019 ರಲ್ಲಿ ಚೀನಿ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ್ದರು. ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಅವರ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯು ಅಕ್ಟೋಬರ್ 11 ಮತ್ತು 12 ರಂದು ತಮಿಳುನಾಡಿನ ಐತಿಹಾಸಿಕ ಕರಾವಳಿ ಪಟ್ಟಣವಾದ ಮಹಾಬಲಿಪುರಂನಲ್ಲಿ ಯಶಸ್ವಿಯಾಗಿ ನಡೆದಿತ್ತು.ಇದನ್ನೂ ಓದಿ: ಆಪಲ್ ಫೋಲ್ಡೆಬಲ್ iPhone Duo ಬಿಡುಗಡೆ – ಭಾರತದಲ್ಲಿ ದರ ಎಷ್ಟು?

