ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ (Midterm Elections) ಮುಗಿಯುವವರೆಗೂ ಇರಾನ್ ವಿರುದ್ಧದ ಯುದ್ಧ (Iran War) ಕೊನೆಗೊಳ್ಳುವ ಸಾಧ್ಯತೆಯಿಲ್ಲ ಮತ್ತು ಅಲ್ಲಿಯವರೆಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟೆಕ್ಸಾಸ್‌ನಲ್ಲಿ ನಡೆಯಲಿರುವ ಪಕ್ಷದ ಮೊದಲ ಸಮ್ಮೇಳನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ ತಕ್ಷಣವೇ ಯುದ್ಧ ಅಂತ್ಯಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇರಾನ್ ಇನ್ನು ಮುಂದೆ ಹೆಚ್ಚು ದಿನ ತಡೆದುಕೊಳ್ಳಲು ಸಾಧ್ಯವಿಲ್ಲ. ಚುನಾವಣೆ ಮುಗಿದ ಬೆನ್ನಲ್ಲೇ ತೈಲ ಬೆಲೆಗಳು ಗಣನೀಯವಾಗಿ ಕುಸಿಯಲಿವೆ ಎಂದು ತಿಳಿಸಿದರು.
.@POTUS: “I think the war will end immediately after the election… They’re desperate to try and affect the election so that we could get a nice, weak group of people in there and leave them alone and let them have their nuclear weapon.” https://t.co/MV7GDA8e4q pic.twitter.com/fOuJfUpohm
— Rapid Response 47 (@RapidResponse47) September 9, 2026
ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟ್‌ಗಳಂತಹ ‘ದುರ್ಬಲ ಆಡಳಿತ’ ಅಧಿಕಾರಕ್ಕೆ ಬಂದರೆ ತನಗೆ ಪರಮಾಣು ಅಸ್ತ್ರ ಹೊಂದುವ ಹಾದಿ ಸುಲಭವಾಗುತ್ತದೆ ಎಂಬ ಉದ್ದೇಶದಿಂದ ಇರಾನ್ ಚುನಾವಣೆಯ ಮೇಲೆ ಪ್ರಭಾವ ಬೀರಲು ಹತಾಶ ಪ್ರಯತ್ನ ನಡೆಸುತ್ತಿದೆ ಎಂದು ಟ್ರಂಪ್ ಆರೋಪಿಸಿದರು. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ
ಪ್ರಸ್ತುತ ಇರಾನ್ ಜತೆಗಿನ ಮಾತುಕತೆಯ ಸಾಧ್ಯತೆಗಳನ್ನು ಅಮೆರಿಕ ತಳ್ಳಿಹಾಕಿದ್ದು, ಸದ್ಯಕ್ಕೆ ಯಾವುದೇ ಸಂಧಾನದ ಬಗ್ಗೆ ಯೋಚಿಸುತ್ತಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಅಮೆರಿಕದಲ್ಲಿ ಹಣದುಬ್ಬರ ಹಾಗೂ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

