ಖ್ಯಾತ ನಟ ದಳಪತಿ ವಿಜಯ್ (Thalapathy Vijay) ರಾಜಕೀಯ ಪ್ರವೇಶ ಬೆನ್ನಲ್ಲೇ ಮತ್ತೋರ್ವ ನಟ, ನಿರ್ದೇಶಕ ರಾಘವ್ ಲಾರೆನ್ಸ್ (Raghav Lawrence) ಕೂಡ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ ಅನ್ನುವ ಗುಲ್ಲಿತ್ತು. ಅದರಲ್ಲೂ ದಳಪತಿ ವಿಜಯ್ ಅವರು ಟಿವಿಕೆ ಪಕ್ಷ ಸೇರುತ್ತಾರೆ ಎಂದು ಹೇಳಲಾಗಿತ್ತು. ದಳಪತಿ ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅದರಲ್ಲಿ ತಿರುಚ್ಚಿ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ, ಆ ಕ್ಷೇತ್ರದಲ್ಲಿ ರಾಘವ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ಇತ್ತು.
ಇನ್ನು ರಾಜಕೀಯ ಪ್ರವೇಶ ಕುರಿತಂತೆ ರಾಘವ ಲಾರೆನ್ಸ್ ಅವರೇ ಸುದೀರ್ಘವಾಗಿ ಮಾತಾಡಿದ್ದಾರೆ. ರಜನಿಕಾಂತ್ (Rajinikanth) ಅವರು ಪಕ್ಷ ಕಟ್ಟುತ್ತೇನೆ ಅಂದಾಗ ನಾನು ಅವರ ಜೊತೆ ನಿಲ್ಲುತ್ತೇನೆ ಅಂತ ಹೇಳಿದ್ದೆ. ಆದರೆ, ಅವರು ರಾಜಕಾರಣ ಪ್ರವೇಶ ಮಾಡಲಿಲ್ಲ. ಹಾಗಾಗಿ ಆ ಕನಸು ಅಲ್ಲಿಗೆ ಬಿಟ್ಟಿದ್ದೇನೆ. ಇದೀಗ ಮತ್ತೆ ನನ್ನ ಹೆಸರು ಕೇಳಿ ಬರುತ್ತಿದೆ. ನಾನು ಸಂಸ್ಥೆಯೊಂದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ. ನನ್ನಂಥವರಿಗೆ ರಾಜಕೀಯ ಅಲ್ಲ ಅಂತ ಅಮ್ಮ ಹೇಳುತ್ತಿದ್ದಾರೆ. ಹಾಗಾಗಿ ಯೋಚಿಸುತ್ತಿದ್ದೇನೆ ಅಂದಿದ್ದಾರೆ ರಾಘವ್.ಇದನ್ನೂ ಓದಿ: ರಿಟೈರ್ಮೆಂಟ್‌ಗೆ ರೆಡಿಯಾದ್ರಾ ಅಕ್ಷಯ್? ನಿವೃತ್ತಿ ಬಗ್ಗೆ ನಟ ಹೇಳಿದ್ದೇನು?
ತಮ್ಮ ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳ ಅಭಿಪ್ರಾಯವನ್ನೂ ಅವರು ಕೇಳಿದ್ದಾರೆ. ನಾನು ರಾಜಕೀಯಕ್ಕೆ ಬರಬೇಕೋ ಅಥವಾ ಬೇಡವೋ ಅನ್ನುವುದನ್ನು ಅಭಿಮಾನಿಗಳು ನಿರ್ಧಾರ ತಗೆದುಕೊಳ್ಳಲಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಒಂದು ವೇಳೆ ಅಭಿಮಾನಿಗಳು ಒತ್ತಾಯ ಮಾಡಿದರೆ, ಬಹುಶಃ ರಾಘವ್ ರಾಜಕಾರಣ ಪ್ರವೇಶ ಮಾಡಬಹುದು.ಇದನ್ನೂ ಓದಿ: ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ನೆ ಬಿಡಲ್ಲ – ದೊಡ್ಡಣ್ಣ ರಿಯಾಕ್ಷನ್
