ಬ್ಯಾಂಕಾಕ್: ಥಾಯ್ಲೆಂಡ್ ರಾಜಮನೆತನದ ಹಿರಿಯ ರಾಜಕುಮಾರಿ ಬಜ್ರಕಿಟಿಯಾಭಾ ನರೇಂದಿರಾ ದೇಬ್ಯಾವತಿ (47) ಅವರು ಗುರುವಾರ ಸಂಜೆ ಬ್ಯಾಂಕಾಕ್‌ನಲ್ಲಿ ನಿಧನರಾಗಿದ್ದಾರೆ. ನಿಧನರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋಮಾದಲ್ಲಿದ್ದ ಅವರು ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
2022ರ ಡಿಸೆಂಬರ್‌ನಲ್ಲಿ ತಮ್ಮ ಸಾಕು ನಾಯಿಗಳೊಂದಿಗೆ ವ್ಯಾಯಾಮ ಮಾಡುತ್ತಿದ್ದ ವೇಳೆ ರಾಜಕುಮಾರಿ ಏಕಾಏಕಿ ಕುಸಿದು ಬಿದ್ದಿದ್ದರು. ಹೃದಯದಲ್ಲಿ ಉಂಟಾದ ಮೈಕೋಪ್ಲಾಸ್ಮಾ ಸೋಂಕಿನಿಂದ ಅವರಿಗೆ ತೀವ್ರ ಹೃದಯ ಬಡಿತದ ಸಮಸ್ಯೆ ಕಾಣಿಸಿಕೊಂಡಿತ್ತು. ಅಂದಿನಿಂದ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಅವರಿಗೆ ಪ್ರಜ್ಞೆ ಮರಳಿ ಬರಲಿಲ್ಲ. ವೈದ್ಯಕೀಯ ತಂಡ ಸಾಧ್ಯವಾದ ಎಲ್ಲಾ ರೀತಿಯ ಚಿಕಿತ್ಸೆಯನ್ನು ನೀಡಿದರೂ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಡುತ್ತಲೇ ಹೋಯಿತು.
ಬಜ್ರಕಿಟಿಯಾಭಾ ಅವರನ್ನು ಥಾಯ್ಲೆಂಡ್‌ನಲ್ಲಿ “ಲಾಯರ್ ಪ್ರಿನ್ಸೆಸ್” ಎಂದೇ ಕರೆಯಲಾಗುತ್ತಿತ್ತು. ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯಯಲ್ಲಿ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಬಳಿಕ ವಕೀಲರಾಗಿ ಸೇವೆ ಸಲ್ಲಿಸಿದ ಅವರು, ಕೆಲಕಾಲ ಯುನೈಟೆಡ್ ವಿಶ್ವಸಂಸ್ಥೆಯಲ್ಲಿ ಥಾಯ್ಲೆಂಡ್ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು.ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಸೆಕ್ಸ್ ವಿಡಿಯೋ ಮಾರಾಟ – 27 ನೀಲಿ ತಾರೆಯರಿಗೆ ತಲಾ 10 ವರ್ಷ ಜೈಲು ಶಿಕ್ಷೆ
2012 ರಿಂದ 2014 ರವರೆಗೆ ಆಸ್ಟ್ರಿಯಾಗೆ ಥಾಯ್ಲೆಂಡ್ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮಹಿಳಾ ಕೈದಿಗಳ ಹಕ್ಕುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಜೈಲಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮಹಿಳಾ ಕೈದಿಗಳಿಗೆ ನೆರವಾಗುವ ಉದ್ದೇಶದಿಂದ “ಕಮ್ಲಾಂಗ್‌ಜೈ” ಯೋಜನೆ ಆರಂಭಿಸಿದ್ದರು. ಮಹಿಳಾ ಕೈದಿಗಳ ಜೀವನಮಟ್ಟ ಸುಧಾರಣೆಗೆ ಸಂಬಂಧಿಸಿದ “ಬ್ಯಾಂಕಾಕ್ ರೂಲ್ಸ್” ಜಾರಿಗೆ ಬರಲು ಸಹ ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಮತ್ತು ಸಾಮಾಜಿಕ ಸೇವೆಗಳ ಜೊತೆಗೆ ಅವರು ಕ್ರೀಡಾ ಪ್ರಿಯರಾಗಿದ್ದರು. ದೂರದ ಓಟಗಳಲ್ಲಿ ಭಾಗವಹಿಸುವ ಮೂಲಕ ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಥಾಯ್ಲೆಂಡ್ ರಾಜವಂಶದಲ್ಲಿ ಮುಂದಿನ ನಾಯಕತ್ವದ ಪ್ರಮುಖ ಮುಖವೆಂದು ಪರಿಗಣಿಸಲಾಗುತ್ತಿದ್ದ ಬಜ್ರಕಿಟಿಯಾಭಾ ಅವರ ನಿಧನದಿಂದ ಉತ್ತರಾಧಿಕಾರದ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಆಹಾರ ಸಿಗುವ ನಗರಗಳ ಪಟ್ಟಿಯಲ್ಲಿ ಏಕೈಕ ಭಾರತೀಯ ನಗರ – ಬೆಂಗಳೂರಿಗೆ 13ನೇ ಸ್ಥಾನ
