ಅಂಕಾರ: ಆನ್‌ಲೈನ್‌ನ ವಿವಿಧ ವೇದಿಕೆಗಳಲ್ಲಿ ತಮ್ಮ ಅಶ್ಲೀಲ ವಿಡಿಯೋ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದ 27 ನೀಲಿ ತಾರೆಯರು (Ault Stars) & ಕಂಟೆಂಟ್ ಕ್ರಿಯೆಟರ್ಸ್‌ಗೆ ಇಸ್ತಾನ್‌ಬುಲ್ ಕೋರ್ಟ್ (Istanbul Court) ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸೈಬರ್ ಅಪರಾಧಗಳ (Cyber Crime) ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಆನ್‌ಲೈನ್ ವೇದಿಕೆಗಳಲ್ಲಿ ಲೈಂಗಿಕ ವಿಷಯಗಳ ಪ್ರಸಾರ ಮಾಡುತ್ತಿದ್ದ ನೀಲಿ ತಾರೆಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: 12 ಗಂಟೆಯಲ್ಲಿ 1,113 ಪುರುಷರೊಂದಿಗೆ ಸೆಕ್ಸ್ – ವಿಶ್ವದಾಖಲೆ ಬರೆದ ನೀಲಿ ತಾರೆ

ಶಿಕ್ಷೆಗೆ ಗುರಿಯಾದ ನೀಲಿ ತಾರೆಯರು, ನಿರ್ದಿಷ್ಟ ವೆಬ್‌ಸೈಟ್ (Adult Website) ಮತ್ತು ಚಂದಾದಾರಿಕೆ ಆಧರಿತ ಆನ್‌ಲೈನ್ ವೇದಿಕೆಗಳ ಮೂಲಕ ಲೈಂಗಿಕ, ಅಶ್ಲೀಲ ವಿಷಯಗಳನ್ನ ಪ್ರಸಾರ ಮಾಡುತ್ತಿದ್ದರು. ತಮ್ಮದೇ ಲೈಂಗಿಕ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಹಾಗೂ ಇತರ ಲೈಂಗಿಕ ಸೇವೆಗಳನ್ನು ನೀಡುವ ಮೂಲಕ ಹಣ ಗಳಿಸುತ್ತಿದ್ದರು ಎಂದು ಕೋರ್ಟ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇಬ್ಬರು ಪುರುಷರೊಟ್ಟಿಗೆ ಸೆಕ್ಸ್ – ಶೂಟಿಂಗ್ ಮಾಡುವಾಗಲೇ ಹೋಟೆಲ್ ಬಾಲ್ಕನಿಯಿಂದ ಬಿದ್ದು ನೀಲಿ ತಾರೆ ಸಾವು

ಟರ್ಕಿಯಲ್ಲಿ 2023 ರಲ್ಲೇ ವಯಸ್ಕ ತಾರೆಗಳ ಸೈಟ್ ಅನ್ನು ನಿರ್ಬಂಧಿಸಲಾಗಿದೆ. ಆದಾಗ್ಯೂ ಕೆಲವರು ಐಪಿ ವಿಳಾಸಗಳನ್ನ ಬದಲಾಯಿಸಿ, ಇತರ ಆನ್‌ಲೈನ್ ವೇದಿಕೆಗಳ ಮೂಲಕ ತಮ್ಮ ಕೆಲಸಗಳನ್ನ ಮುಂದುವರಿಸಿದ್ದರು. ಈ ಮೂಲಕ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದರು. ಈ ಬಗ್ಗೆ ದೂರುಗಳನ್ನ ಪಡೆದಿದ್ದ ಇಸ್ತಾನ್‌ಬುಲ್‌ನ ಮುಖ್ಯ ಸಾರ್ವಜನಿಕ ಅಭಿಯೋಜಕರ ಕಚೇರಿ ತನಿಖೆ ಪ್ರಾರಂಭಿಸಿತ್ತು. ಸದ್ಯ 27 ನೀಲಿ ತಾರೆಯರಿಗೆ ತಲಾ 10 ವರ್ಷ ಜೈಲು ಶಿಕ್ಷೆ ಪ್ರಕಟ ಮಾಡಿದೆ. ಅಲ್ಲದೇ ದೇಶಾದ್ಯಂತ ವಯಸ್ಕರ ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್ – ವಿಶ್ವದಾಖಲೆ ಬರೆದ ನೀಲಿ ತಾರೆ
