– ಟೈಮ್ ಔಟ್ ನಿಯತಕಾಲಿಕೆಯಿಂದ ಪಟ್ಟಿ ಪ್ರಕಟ
ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರು (Bengaluru) ಇದೀಗ ಪಾಕಶಾಲೆಯಲ್ಲಿ ಮತ್ತೊಂದು ಸಾಧನೆ ಮಾಡಿದೆ. ಇದೀಗ ವಿಶ್ವದ 20 ಅತ್ಯುತ್ತಮ ಆಹಾರ ಸಿಗುವ ನಗರಗಳ ಪೈಕಿ 13 ಸ್ಥಾನ ಪಡೆದುಕೊಂಡಿದೆ.
`ಟೈಮ್ ಔಟ್’ (Time Out) ನಿಯತಕಾಲಿಕೆ `ವಿಶ್ವದ ಅತ್ಯುತ್ತಮ ಆಹಾರ ಸಿಗುವ ನಗರಗಳು-2026’ರ (Worlds 20 Best Cities for Food) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು 13ನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಇದನ್ನೂ ಓದಿ: ಕುರುಬ ಸಮುದಾಯಕ್ಕೆ ಅತಿಹೆಚ್ಚು ಅನುದಾನ – ಹಿಂದುಳಿದ ವರ್ಗಗಳ ಇಲಾಖೆಯಿಂದ ತಾರತಮ್ಯ ಆರೋಪ
ಸಾಮಾನ್ಯವಾಗಿ ಭಾರತೀಯ ಆಹಾರದ ಬಗ್ಗೆ ಮಾತನಾಡುವಾಗ ಹೆಚ್ಚಾಗಿ ದೆಹಲಿ, ಮುಂಬೈ, ಕೋಲ್ಕತ್ತಾದಂತಹ ನಗರಗಳ ಹೆಸರುಗಳು ಮುನ್ನೆಲೆಗೆ ಬರುತ್ತವೆ. ಸದ್ಯ ಬಿಡುಗಡೆಯಾಗಿರುವ ಪಟ್ಟಿಯಿಂದಾಗಿ ಜಗತ್ತು ಭಾರತೀಯ ಆಹಾರವನ್ನು ನೋಡುವ ವಿಧಾನವನ್ನು ಬದಲಾಯಿಸುವಂತಾಗಿದೆ
ವಿಶ್ವದಾದ್ಯಂತ ಸುಮಾರು 24,000ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳನ್ನು ಸಮೀಕ್ಷೆ ನಡೆಸಿ ಮತ್ತು ಆಹಾರ ತಜ್ಞರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಬೆಂಗಳೂರಿಗೆ 13ನೇ ಸ್ಥಾನ ದೊರೆತಿದೆ. ಆಹಾರ ತಜ್ಞರ ಸಮಿತಿಯಿಂದ ಶೇ.60ರಷ್ಟು ಅಂಕಗಳು ಮತ್ತು ಸ್ಥಳೀಯರಿಂದ ಶೇ.82ರಷ್ಟು ಗುಣಮಟ್ಟದ ರೇಟಿಂಗ್ ಪಡೆದು ಈ ಸ್ಥಾನ ತನ್ನದಾಗಿಸಿಕೊಂಡಿದೆ.ಇದನ್ನೂ ಓದಿ: ಮದರ್: ನಟಿ ಶ್ರುತಿಯ 175ನೇ ಚಿತ್ರಕ್ಕೆ ಚಾಲನೆ
ಜಾಗತಿಕ ಮಟ್ಟದ ಟಾಪ್ 20 ನಗರಗಳ ಪಟ್ಟಿ:
ಲಿಮಾ
ಬ್ಯಾಂಕಾಕ್
ಮೆಕ್ಸಿಕೊ
ಲಂಡನ್
ಬಾರ್ಸಿಲೋನಾ
ಹೋ ಚಿ ಮಿನ್ಹ್ ಸಿಟಿ
ಮೆಲ್ಬೋರ್ನ್
ಬೀಜಿಂಗ್
ಅಥೆನ್ಸ್
ಲಿಸ್ಬನ್
ಕೇಪ್ ಟೌನ್
ಒಸಾಕಾ
ಬೆಂಗಳೂರು
ನೇಪಲ್ಸ್
ನ್ಯೂಯಾರ್ಕ್
ಹಾಂಗ್ ಕಾಂಗ್
ಬ್ಯೂನಸ್ ಐರಿಸ್
ಮಾರ್ಸಿಲ್ಲೆ
ಕೋಪನ್ ಹೇಗನ್
ಮೆಡೆಲಿನ್
ನಿಯತಕಾಲಿಕೆಯ ಪ್ರಕಾರ, ಶೇ.82ರಷ್ಟು ಜನರು ಬೆಂಗಳೂರಿನ ಊಟವನ್ನು”ಒಳ್ಳೆಯದು” ಅಥವಾ “ಅದ್ಭುತ” ಎಂದು ಬಣ್ಣಿಸಿದ್ದಾರೆ. ಈ ಮೂಲಕ ಬೆಂಗಳೂರಿನ ಪಾಕಪದ್ಧತಿಯು ವೈವಿಧ್ಯಮಯ ಮತ್ತು ಸ್ಥಳೀಯ ಆಹಾರ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಎಂದು ಎತ್ತಿ ತೋರಿಸಿದೆ.ಇದನ್ನೂ ಓದಿ: ಜೂನ್ ತಿಂಗಳಲ್ಲಿ ಸಾಲು ಸಾಲು ಖಗೋಳ ವಿಸ್ಮಯ: ಆಗಸದಲ್ಲಿ ಮೂಡಲಿದೆ ಕೌತುಕ!
