ಬೆಂಗಳೂರು: ಖಗೋಳ(Astronomy) ಆಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಜೂನ್ ತಿಂಗಳು (June Month) ವಿಶೇಷ ರಸದೌತಣ ನೀಡಲು ಸಜ್ಜಾಗಿದೆ. ಈ ತಿಂಗಳಲ್ಲಿ ಬ್ಯಾಕ್-ಟು-ಬ್ಯಾಕ್ ಎಂಬಂತೆ ಸಾಲು ಸಾಲು ಖಗೋಳ ವಿಸ್ಮಯಗಳು ಜರುಗಲಿದ್ದು, ಆಕಾಶದಲ್ಲಿ ಅಪರೂಪದ ಕೌತುಕಗಳು ಸೃಷ್ಟಿಯಾಗಲಿವೆ.
ವಿಶೇಷವೆಂದರೆ, ಈ ಅದ್ಭುತ ವಿದ್ಯಮಾನಗಳನ್ನು ಯಾವುದೇ ವಿಶೇಷ ಉಪಕರಣಗಳಿಲ್ಲದೆ ಬರಿಗಣ್ಣಿನಿಂದಲೇ ವೀಕ್ಷಿಸಿ ಕಣ್ತುಂಬಿಕೊಳ್ಳಬಹುದು. ಇತ್ತೀಚೆಗಷ್ಟೇ ನಡೆದ ‘ಗುರು-ಶುಕ್ರ ಸಂಯೋಗ’ದ ಅಪರೂಪದ ಘಟನೆ ಜನರಲ್ಲಿ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೋಮಾಂಚಕ ವಿದ್ಯಮಾನಗಳು ಸಂಭವಿಸಲಿವೆ.
ಜೂನ್ 15 – ಸೂಪರ್ ಮೂನ್ ಡೇ (Super Moon Day)
ಜೂನ್ 15ರ ಅಮಾವಾಸ್ಯೆಯ ದಿನದಂದು ‘ಸೂಪರ್ ಮೂನ್’ ವಿದ್ಯಮಾನ ಸಂಭವಿಸಲಿದೆ. ಅಂದು ಚಂದಿರನು (Moon) ಎಂದಿಗಿಂತಲೂ ಭೂಮಿಗೆ (Earth) ಕೊಂಚ ಹತ್ತಿರವಾಗಿ, ದೊಡ್ಡ ಗಾತ್ರದಲ್ಲಿ ಗೋಚರಿಸಲಿದ್ದಾನೆ.
ಸಾಮಾನ್ಯವಾಗಿ ಭೂಮಿಯಿಂದ ಚಂದ್ರನಿಗಿರುವ ಸರಾಸರಿ ದೂರ 3,84,000 ಕಿ.ಮೀ. ಆದರೆ ಅಂದು ಈ ದೂರ ಕೇವಲ 3,57,000 ಕಿ.ಮೀ ಗೆ ತಗ್ಗಲಿದೆ. ಈ ಕಾರಣದಿಂದ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಇದನ್ನೂ ಓದಿ: ದುಡ್ಡು ಕೊಟ್ರೆ SSLC, PUC, ಡಿಗ್ರಿ ಮಾರ್ಕ್ಸ್ ಕಾರ್ಡ್ ರೆಡಿ – ಬೆಂಗಳೂರಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ!

ಜೂನ್ 21 – ವರ್ಷದ ದೀರ್ಘ ಹಗಲು (Summer Solstice)
ಜೂನ್ 21ರಂದು ವರ್ಷದ ಅತ್ಯಂತ ಸುದೀರ್ಘವಾದ ಹಗಲು ದಿನ ಸಂಭವಿಸಲಿದೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಪರಿಭ್ರಮಿಸುವಾಗ, ಸೂರ್ಯನ ಕಡೆಗೆ ಹೆಚ್ಚು ವಾಲುವುದರಿಂದ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಅಂದು ಹಗಲಿನ ಅವಧಿ ಹೆಚ್ಚಾಗಿರಲಿದ್ದು, ರಾತ್ರಿಯ ಅವಧಿ ಅತ್ಯಂತ ಕಡಿಮೆಯಿರುತ್ತದೆ.
ಜೂನ್ 29 – ಸ್ಟ್ರಾಬೆರಿ ಮೂನ್ (Strawberry Moon)
ಜೂನ್ 29ರ ಹುಣ್ಣಿಮೆಯ ದಿನದಂದು ಆಕಾಶದಲ್ಲಿ ‘ಸ್ಟ್ರಾಬೆರಿ ಮೂನ್’ ಅನಾವರಣಗೊಳ್ಳಲಿದೆ. ಅಂದು ಚಂದ್ರನ ಪ್ರಕಾಶತೆ (ಬೆಳಕು) ಎಂದಿಗಿಂತಲೂ ಅತ್ಯಂತ ತೇಜಸ್ವಿಯಾಗಿ ಮತ್ತು ಆಕರ್ಷಕವಾಗಿ ಇರಲಿದೆ.

