ಮೈಸೂರು: ಆಷಾಢ ಮಾಸದ (Ashada Maasa) ಮೊದಲ ಶುಕ್ರವಾರ ಹಿನ್ನೆಲೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಪತ್ನಿ ಉಷಾ (Usha Shivakumar) ಚಾಮುಂಡಿ ತಾಯಿಯ ಮೂಲ ವಿಗ್ರಹಕ್ಕೆ ಸೀರೆ ಕೊಟ್ಟು ಹರಕೆ ತೀರಿಸಿದ್ದಾರೆ.
ಪತಿ ಸಿಎಂ ಆದರೆ ಆಷಾಢ ಶುಕ್ರವಾರದಂದು (Ashada Shukravara) ಚಾಮುಂಡಿಗೆ ತಾಯಿಗೆ (Chamundeshwari) ಸೀರೆ ಉಡಿಸುತ್ತೇನೆ ಎಂದು ಡಿಕೆಶಿ ಪತ್ನಿ ಉಷಾ ಹರಕೆ ಹೊತ್ತಿದ್ದರು. ಪತಿ ಸಿಎಂ ಆಗುತ್ತಿದಂತೆ ಮೊದಲ ಆಷಾಢ ಶುಕ್ರವಾರದಂದೇ ಉಷಾ ಗುಲಾಬಿ ಮತ್ತು ಸಿಮೆಂಟ್ ಬಣ್ಣದ ರೇಷ್ಮೆ ಸೀರೆಯನ್ನು ತಾಯಿ ಚಾಮುಂಡೇಶ್ವರಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಇದನ್ನೂ ಓದಿ: ಸದ್ಯಕ್ಕಿಲ್ಲ GBA ಎಲೆಕ್ಷನ್; ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯಾವಕಾಶ ನೀಡಿದ ಸುಪ್ರೀಂ
ಸಿಎಂ ಪತ್ನಿ ಕಾಣಿಕೆಯಾಗಿ ಕೊಟ್ಟಿರುವ ಸೀರೆಯನ್ನು ಬೆಟ್ಟದ ಆಡಳಿತ ಮಂಡಳಿ ಚಾಮುಂಡಿ ತಾಯಿಗೆ ಉಡಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿಯ ದರ್ಶನ ಪಡೆದ ಉಷಾ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಆರೋಪಿ ಅರೆಸ್ಟ್
ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಮುಂಜಾನೇಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ನಾಗಲಕ್ಷ್ಮೀ ಅಲಂಕಾರದಿಂದ ಚಾಯಿ ಚಾಮುಂಡಿ ಕಂಗೊಳಿಸುತ್ತಿದ್ದಾಳೆ. ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಇದನ್ನೂ ಓದಿ: ನೀರಿನ ಸಂಪ್ ವಿಚಾರಕ್ಕೆ ಮನೆ ಮಾಲೀಕನಿಂದ ಗಾರೆ ಮೇಸ್ತ್ರಿ ತಮ್ಮನ ಕೊಲೆ
ಈ ಬಾರಿ 2 ಸಾವಿರ ಟಿಕೆಟ್ ಪಡೆದವರಿಗೆ ನೇರ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೇ 5:30ರಿಂದ ಬೆಳಗ್ಗೆ 10 ಗಂಟೆಯವರೆಗೆ ವಿವಿಐಪಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಚಾಮುಂಡಿ ಬೆಟ್ಟದ ದೇವಾಲಯದ ಸುತ್ತ ವಿಶೇಷ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಹಿಟ್ & ರನ್ – ಮನೆಮುಂದೆ ಆಟವಾಡುತ್ತಿದ್ದ 2 ವರ್ಷದ ಬಾಲಕ ಸಾವು
ಇನ್ನು ಚಾಮುಂಡಿ ಬೆಟ್ಟಕ್ಕೆ ಯತ್ನಾಳ್ ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಜೊತೆ ಬೆಟ್ಟಕ್ಕೆ ಆಗಮಿಸಿದ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಆಷಾಢ ಶುಕ್ರವಾರ | ಚಾಮುಂಡಿ ತಾಯಿ ದರ್ಶನ ಪಡೆದ ದರ್ಶನ್ ಪತ್ನಿ
