ಬೆಂಗಳೂರು: ಇಲ್ಲಿನ ಬಾಣಸವಾಡಿಯ (Banasawadi) ಇಂದಿರಾ ಸ್ಟ್ರೀಟ್‌ನಲ್ಲಿ (Indira Street) 2 ವರ್ಷದ ಮಗು ಅನುಮಾನಾಸ್ಪದ ಸಾವನ್ನಪ್ಪಿದ್ದು, ಲಿವ್ ಇನ್‌ನಲ್ಲಿದ್ದ ತಂದೆ, ತಾಯಿ ಮೇಲೆ ಶಂಕೆ ವ್ಯಕ್ತವಾಗಿದೆ.
ಲಿವ್ ಇನ್‌ನಲ್ಲಿದ್ದ ಜೇಸನ್ ಆಂಥೋನಿ ಮತ್ತು ರೋಸ್ಲಿನ್‌ಯ ಮಗಳು 2 ವರ್ಷದ ಕಾರ್ಲೆಟ್ ಡೈಸಿ ಮೃತ ಕಂದಮ್ಮ. ಮೊನ್ನೆ ಇದ್ದಕ್ಕಿದ್ದಂತೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿರೋದಾಗಿ ಪೋಷಕರು ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತನ ಭೀಕರ ಹತ್ಯೆ
ಈ ಸಂಬಂಧ ಮಗುವಿನ ತಾಯಿಯ ಸ್ನೇಹಿತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ತಾಯಿ ಹೊಡೆಯುತ್ತಿದ್ದರು, ಅದನ್ನು ನಾನು ನೋಡಿದ್ದೆ. ಮಗುವಿನ ಮೈಮೇಲೆ ಕೆಲವೆಡೆ ಗಾಯದ ಗುರುತುಗಳು ಪತ್ತೆಯಾಗಿದೆ. ಹೀಗಾಗಿ ಮಗು ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಗುವಿನ ತಂದೆ ಜೇಸನ್ ಆಂಥೋನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಗುವಿಗೆ ಹುಟ್ಟಿದಾಗಿನಿಂದ ಉಸಿರಾಟದ ಸಮಸ್ಯೆ ಇತ್ತು. ನನಗೂ ಉಸಿರಾಟದ ಸಮಸ್ಯೆ ಇದ್ದು, ಅದು ಮಗುವಿಗೆ ಕ್ಯಾರಿ ಆಗಿದೆ. ಊಟ ಮಾಡಿಸುವಾಗ ಉಸಿರಾಟದ ಪೈಪ್ ಒಳಗೆ ಫುಡ್ ಹೋಗಿ ಮಗುವಿಗೆ ಸಮಸ್ಯೆ ಆಗಿ ಸತ್ತಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ ಅಂದಿದ್ದಾರೆ. ಇನ್ನು ಮಗುವಿನ ಕೈ ಹಾಗೂ ಮೈ ಮೇಲಿರುವ ಗಾಯ ತಾಯಿ ಹೊಡೆದಿದ್ದು ಎಂದು ಹೇಳಿದ್ದಾರೆ.
ಇನ್ನು ಮಗುವಿನ ಸಾವಿನ ಬಗ್ಗೆ ತಾಯಿ ರೋಸ್ಲಿನ್ ವಿಭಿನ್ನ ಹೇಳಿಕೆ ನೀಡಿದ್ದಾರೆ. ದೂರುದಾರೆ ಸಮೃದ್ಧಿ ನನ್ನ ಜೊತೆ ಜಗಳ ಆಡಿದ್ರು. ಮಗುವಿಗೆ ಮೆಡಿಸನ್ ನೀಡಿದಾಗ ಮಗು ಗಾಬರಿಯಾಯ್ತು. ಮಗುವಿಗೆ ಪ್ಯಾನಿಕ್ ಅಟ್ಯಾಕ್ ಆಯ್ತು. ಮೊದಲಿಂದಲೇ ಉಸಿರಾಟ ಸಮಸ್ಯೆ ಇದ್ದಿದ್ದರಿಂದ ಈ ರೀತಿಯಾಯ್ತು ಎಂದು ದೂರಿದ್ದಾರೆ.
ಸದ್ಯ ದೂರಿನನ್ವಯ ಬಿಎನ್‌ಎಸ್‌ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಇದನ್ನೂ ಓದಿ: ಹಿಂದೂ ಹೆಸರೇಳಿ 15ಕ್ಕೂ ಹೆಚ್ಚು ಮಹಿಳೆಯರು ಬಲೆಗೆ – ದಾವಣಗೆರೆ ಜಿಮ್ ಟ್ರೇನರ್ ಕಾಮದಾಸೆ ಬಿಚ್ಚಿಟ್ಟ ಸಂತ್ರಸ್ತೆ

