ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ದಂತಕಥೆ ಕೇನ್ ವಿಲಿಯಮ್ಸನ್ (Kane Williamson) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ (Retirement) ಘೋಷಿಸಿದ್ದಾರೆ. ಈ ಮೂಲಕ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
35 ವರ್ಷದ ವಿಲಿಯಮ್ಸನ್ ಅವರು ಹಠಾತ್ ವಿದಾಯ ಘೋಷಿಸಿರುವುದರಿಂದ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಕಳೆದ ವರ್ಷವೇ ಅವರು ಅಂತಾರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಇದೀಗ ಎಲ್ಲಾ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ನಿವೃತ್ತಿ ಘೋಷಿಸಿದ್ದಾರೆ. ಇದನ್ನೂ ಓದಿ: ಅಫ್ಘಾನ್ ವಿರುದ್ಧ ಮೊದಲ ಏಕದಿನ ಪಂದ್ಯ – ಸಂಭಾವ್ಯ ಆಡುವ ಬಳಗ ಹೇಗಿದೆ?
ONE OF THE FINEST MOMENTS UNDER KANE WILLIAMSON. ❤️ pic.twitter.com/tfwSFIDAiU
— Mufaddal Vohra (@mufaddal_vohra) June 12, 2026
ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಲಿಯಮ್ಸನ್, ನಾನು ವಿದಾಯ ಘೋಷಿಸಲು ಸಾಕಷ್ಟು ಸಮಯದಿಂದ ಯೋಚಿಸುತ್ತಿದ್ದೆ. ಆದರೆ ಕಳೆದ ಕೆಲವು ದಿನಗಳಿಂದ ನಿವೃತ್ತಿ ಹೇಳಲು ಇದೇ ಸರಿಯಾದ ಸಮಯ ಎನ್ನುವುದು ನನಗೆ ಸ್ಪಷ್ಟವಾಯಿತು. ನ್ಯೂಜಿಲೆಂಡ್ ಪರ ಆಡಿದ ಪ್ರತಿ ಪಂದ್ಯದಲ್ಲೂ ಶೇ.100 ರಷ್ಟು ಶ್ರಮ ಹಾಕಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದಿದ್ದಾರೆ.
ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲಿನ ಹಸಿವು ಮತ್ತು ಉತ್ಸಾಹ ತುಂಬಾ ಇತ್ತು. ಆದರೆ ಈಗ ಆ ಶ್ರಮ ಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದುವರೆಯುವುದು ಸರಿಯಲ್ಲ ಎಂದು ಭಾವಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ಪ್ರಸ್ತುತ ನ್ಯೂಜಿಲೆಂಡ್ ತಂಡವು ಸಾಗುತ್ತಿರುವ ಹಾದಿಯ ಬಗ್ಗೆ ನನಗೆ ತುಂಬಾ ಭರವಸೆ ಇದೆ. ತಂಡದಲ್ಲಿ ಬಹಳಷ್ಟು ಯುವ ಪ್ರತಿಭೆಗಳಿದ್ದು, ವಿಶೇಷ ಸಾಧನೆ ಮಾಡುವ ತುಡಿತ ಅವರಲ್ಲಿದೆ. ನಾನು ಸುದೀರ್ಘವಾಗಿ ಈ ತಂಡದ ಭಾಗವಾಗಿದ್ದಕ್ಕೆ ನನ್ನಲ್ಲಿ ಧನ್ಯತಾ ಭಾವವಿದೆ ಎಂದು ಹೇಳಿದ್ದಾರೆ.
Kane Williamson announcing his retirement. 💔 pic.twitter.com/KpUTavWz1a
— Mufaddal Vohra (@mufaddal_vohra) June 12, 2026
ಕೇನ್ ವಿಲಿಯಮ್ಸನ್ ತಮ್ಮ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 378 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 19,346 ರನ್ ಕಲೆಹಾಕಿದ್ದಾರೆ. ಇದರಲ್ಲಿ 48 ಶತಕಗಳು ಹಾಗೂ 6 ದ್ವಿಶತಕಗಳು ಒಳಗೊಂಡಿವೆ. ನ್ಯೂಜಿಲೆಂಡ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿಲಿಯಮ್ಸನ್ ಅಗ್ರಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ – ಟ್ರೋಫಿಗಾಗಿ 12 ತಂಡಗಳ ನಡುವೆ ಪೈಪೋಟಿ
ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, 2016 ರಿಂದ 2024 ರವರೆಗೆ ನ್ಯೂಜಿಲೆಂಡ್ ತಂಡವನ್ನು ಎಲ್ಲಾ ಮಾದರಿಗಳಲ್ಲಿ ಯಶಸ್ವಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದರು. ಇವರ ನಾಯಕತ್ವದ ಅವಧಿಯಲ್ಲಿ ಕಿವೀಸ್ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಇವರ ನೇತೃತ್ವದಲ್ಲಿ ನ್ಯೂಜಿಲೆಂಡ್ ತಂಡವು ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್ಸ್, 3 ಸೆಮಿಫೈನಲ್ಸ್ ತಲುಪಿದ್ದಲ್ಲದೆ, 2021 ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗರಿಯನ್ನು ಮುಡಿಗೇರಿಸಿಕೊಂಡಿತ್ತು.

ವಿಲಿಯಮ್ಸನ್ ಅವರ ನಿವೃತ್ತಿಯ ಬೆನ್ನಲ್ಲೇ ನ್ಯೂಜಿಲೆಂಡ್‌ನ ಹಲವು ಕ್ರಿಕೆಟ್ ದಿಗ್ಗಜರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕಿವೀಸ್ ತಂಡದ ಮುಖ್ಯ ಕೋಚ್ ರಾಬ್ ವಾಲ್ಟರ್, ಕೇನ್ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅವರು ಎಷ್ಟು ಅದ್ಭುತ ಆಟಗಾರ ಎನ್ನುವುದು ಗೊತ್ತಿದೆ. ಅವರ ಪ್ರಭಾವವು ಕೇವಲ ಅಂಕಿ-ಅಂಶಗಳು ಅಥವಾ ಪಂದ್ಯದ ಫಲಿತಾಂಶಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಈ ತಂಡದ ಸಂಸ್ಕೃತಿ ಮತ್ತು ಗುಣಮಟ್ಟವನ್ನು ಅವರು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರು ಅತ್ಯುತ್ತಮ ಸಹ ಆಟಗಾರ ಜೊತೆಗೆ ಅದ್ಭುತ ನಾಯಕ ಮತ್ತು ಕ್ರಿಕೆಟ್ ಲೋಕದ ಶ್ರೇಷ್ಠ ರಾಯಭಾರಿ ಎಂದು ಕೊಂಡಾಡಿದ್ದಾರೆ.
ಕೇನ್ ವಿಲಿಯಮ್ಸನ್ ಅವರು 2015 ರಲ್ಲಿ ಐಸಿಸಿ ಕ್ರಿಕೆಟರ್ ಆಫ್ ದಿ ಇಯರ್ ಮತ್ತು 2019 ರಲ್ಲಿ ಐಸಿಸಿ ಟೆಸ್ಟ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಪಡೆದಿದ್ದರು. ಜೊತೆಗೆ ನ್ಯೂಜಿಲೆಂಡ್ ಕ್ರಿಕೆಟ್‌ನ ಅತ್ಯುನ್ನತ ಗೌರವವಾದ ಸರ್ ರಿಚರ್ಡ್ ಹ್ಯಾಡ್ಲಿ ಮೆಡಲ್ ಅನ್ನು 4 ಬಾರಿ ಪಡೆದಿದ್ದಾರೆ. ಇದನ್ನೂ ಓದಿ: ODI World Cup 2027 | ಏಕದಿನ ವಿಶ್ವಕಪ್ ವೇಳಾಪಟ್ಟಿ ಬಹಿರಂಗ – ಅ.4 ರಿಂದ ಅಭಿಯಾನ ಶುರು
