– ಜನರು ತಮ್ಮ ಆತ್ಮಸಾಕ್ಷಿಯನ್ನು ಮಾರಾಟ ಮಾಡಿದ್ದಾರೆ
ಇಸ್ಲಾಮಾಬಾದ್: ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ಆಗಿ ಬಳಸಿಕೊಂಡು ಎಸೆಯಲಾಗುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಉತ್ತಮ ಸಂಬಂಧವನ್ನು ಹೊಂದಿಲ್ಲ ಎಂದು ಒಪ್ಪಿಕೊಂಡರು.
Advertisement
ಶುಕ್ರವಾರ ರಾಷ್ಟ್ರೀಯ ಭಾಷಣದಲ್ಲಿ ಮಾತನಾಡಿದ ಅವರು, ಭಾರತೀಯರು ಬಹಳ ಸ್ವಾಭಿಮಾನದ ಜನರು. ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಆರ್‌ಎಸ್‍ಎಸ್ ಸಿದ್ದಾಂತ ಮತ್ತು ಅವರು ಕಾಶ್ಮೀರದ ಮೇಲೆ ಏನು ಮಾಡುತ್ತಿದ್ದಾರೆ ಎಂಬ ಕಾರಣದಿಂದಾಗಿ ನಮಗೆ ಅವರೊಂದಿಗೆ ಉತ್ತಮ ಸಂಬಂಧವಿಲ್ಲ ಅದಕ್ಕೆ ನಾನು ನಿರಾಶೆಗೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಇಮ್ರಾನ್‌ಗೆ ಸೋಲು- ಅವಿಶ್ವಾಸ ನಿರ್ಣಯ ಮತಕ್ಕೆ ಹಾಕಲು ಸೂಚನೆ
Advertisement
ನಾವು ಮತ್ತು ಭಾರತ ಒಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಆದರೆ ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ಆಗಿ ಬಳಸಿಕೊಂಡು ಎಸೆಯಲಾಗುತ್ತಿದೆ. ನಾನು ವಿದೇಶಿ ವಿರೋಧಿಯಲ್ಲ. ಆದರೆ ವಿದೇಶಿ ಪಿತೂರಿಯಿಂದ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
Advertisement
Advertisement
ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಡೆಪ್ಯುಟಿ ಸ್ಪೀಕರ್ ಅವರ ತೀರ್ಪನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದ್ದರಿಂದ ಇಮ್ರಾನ್ ಖಾನ್ ಸರ್ಕಾರವು ಹಿನ್ನಡೆ ಅನುಭವಿಸಿತು. ನ್ಯಾಯಾಲಯವು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದು. ಅವರ ಎಲ್ಲ ನಿರ್ಧಾರಗಳನ್ನು ರದ್ದುಗೊಳಿಸಿತು. ಇದನ್ನೂ ಓದಿ: ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ
ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡಿದ್ದೇನೆ. ಉಪಸಭಾಪತಿಯವರು ತನಿಖೆ ನಡೆಸಿದಾಗ ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕಿತ್ತು. ಪಾಶ್ಚಿಮಾತ್ಯ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಘಟನೆಯನ್ನು ನಾನು ನೋಡಿಲ್ಲ. ಜನರು ತಮ್ಮ ಆತ್ಮಸಾಕ್ಷಿಯನ್ನು ಮಾರಾಟ ಮಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಇಂತಹ ಚಟುವಟಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಗಮನಹರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.