ವಾಷಿಂಗ್ಟನ್: ಈ ವಾರಾಂತ್ಯದಲ್ಲಿ ಶಾಂತಿ ಒಪ್ಪಂದಕ್ಕೆ ಇರಾನ್ ಸಹಿ ಹಾಕಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಶಯ ವ್ಯಕ್ತಪಡಿಸಿದ್ದಾರೆ.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗಿನ ಯುದ್ಧ ಕೊನೆಗಾಣಿಸಲು ನಾವು ಉತ್ತಮ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂಓದಿ: ಇಂದು ರಾತ್ರಿ ಅಮೆರಿಕದಿಂದ ಭೀಕರ ದಾಳಿ – ಇರಾನಿನ ಖಾರ್ಗ್ ದ್ವೀಪ ವಶ ಪಡೆಯುತ್ತೇವೆ: ಟ್ರಂಪ್ ಗುಡುಗು
ನಾವು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಹಾರ್ಮುಜ್ ಜಲಸಂಧಿ ಅಧಿಕೃತವಾಗಿ ತೆರೆಯುತ್ತದೆ. ಅದು ಶೀಘ್ರದಲ್ಲೇ ಬಹಳ ಬೇಗ ಯುರೋಪ್‌ನಲ್ಲಿ ಈ ವಾರಂತ್ಯದಲ್ಲಿ ಆಗಲಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಬಹ್ರೇನ್, ಕುವೈತ್ ಮತ್ತು ಇತರ ನಾಯಕರೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರೊಂದಿಗೆ ಮಾತನಾಡುವುದಾಗಿ ಟ್ರಂಪ್ ಮಾಹಿತಿ ನೀಡಿದ್ದಾರೆ.
ಈ ಒಪ್ಪಂದವು ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ಮುಂದುವರಿಸುವ ಸಮಸ್ಯೆಯನ್ನು ಪರಿಹರಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಗುರುವಾರ ಮುಂಜಾನೆ ಇರಾನ್ ಮೇಲಿನ ಹೊಸ ದಾಳಿಗಳನ್ನು ಟ್ರಂಪ್ ರದ್ದುಗೊಳಿಸಿದ್ದಾರೆ. ಆರಂಭಿಕ ಶಾಂತಿ ಒಪ್ಪಂದದ ಅಂತಿಮ ಅಂಶಗಳನ್ನು ಅನುಮೋದಿಸಲಾಗಿದೆ. ಸಹಿ ಸಭೆಯ ಕುರಿತು ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಇರಾನ್ ಒಪ್ಪಂದವನ್ನು ಅನುಮೋದಿಸುವ ಸಾಧ್ಯತೆಯಿದೆ. ಆದರೆ, ಅದು ಇನ್ನೂ ಔಪಚಾರಿಕ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಇರಾನ್ ಸುದ್ದಿಸಂಸ್ಥೆಗಳು ತಿಳಿಸಿವೆ. ಇದನ್ನೂ ಓದಿ: ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಅಮೆರಿಕ ಸಮರ್ಥನೆ – `ಜಲವೀರ್’ ಮೇಲಿನ ದಾಳಿ ವೀಡಿಯೋ ರಿಲೀಸ್
ಮಾರ್ಚ್ ಮಧ್ಯಭಾಗದಿಂದಲೂ ಯುದ್ಧವನ್ನು ಕೊನೆಗೊಳಿಸಲು ಇರಾನ್ ಜೊತೆಗಿನ ಒಪ್ಪಂದವು ಪೂರ್ಣಗೊಂಡಿದೆ ಎಂದು ಟ್ರಂಪ್ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ. ಎರಡೂ ಕಡೆಯವರು ವಾರವಿಡೀ ಪರಸ್ಪರ ದಾಳಿ ನಡೆಸಿದ್ದು, ಏಪ್ರಿಲ್‌ನಲ್ಲಿ ಘೋಷಿಸಲಾದ ಕದನ ವಿರಾಮವನ್ನು ದುರ್ಬಲಗೊಳಿಸಿದೆ.
