ಹಾಯ್ ಭೂಮಿ
ನಿಂಗೊತ್ತಾ.. ಮಳೆ (Rain) ಅಂದ್ರೆ ನಂಗೆಷ್ಟು ಇಷ್ಟ ಅಂತ. ನನ್ನನ್ನು ಪ್ರೇಮದಲ್ಲಿ ಮೀಯಿಸಿದ್ದು ಇದೇ ಮುಂಗಾರು. ಇದೇ ಮಿಂಚು! ನನಗೆ ನಿನ್ನನ್ನು ಪರಿಚಯಿಸಿದ ಈ ಮಿಂಚು ನಮ್ಮಿಬ್ಬರ ಹೃದಯ ಮೋಡಗಳ ಸೆಳೆತವೇ ಇರಬೇಕು. ಈ ರೀತಿ ನನಗಂತೂ ತುಂಬಾ ಸಲ ಅನ್ಸಿದೆ. ಅದಕ್ಕೆ ನಿನ್ನನ್ನು ಕಂಡಾಗಿನಿಂದ ವರ್ಷ ಪೂರ್ತಿ ಪ್ರೇಮದ ಮಳೆಯಲ್ಲೇ ಕಾಲ ಕಳಿತಿರೋದು ನಾನು.
ನಿಷ್ಕಲ್ಮಶ ಪ್ರೇಮವನ್ನ (Love) ಪ್ರಕೃತಿ, ಯುನಿವರ್ಸ್ ಹುಟ್ಟುಹಾಕಿ ಜೋಡಿ ಮಾಡ್ಬಿಡತ್ತಂತೆ. ನಮ್ಮ ಬದುಕಲ್ಲೂ ಹಾಗೇ ಆಗಿದ್ದು ಅಲ್ವಾ? ನೀನು ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ನಿನಗೂ ನಾನ್ಯಾರು ಅಂತ ಗೊತ್ತೇ ಇರಲಿಲ್ಲ. ಆ ಒಂದು ಮಿಂಚು ಬರುವ ತನಕ! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

ಪಾಪಣ್ಣನ ಶಾಪಲ್ಲಿ ಟೀ ಕುಡ್ಕೊಂಡು ಅವತ್ತು ಸಂಜೆ ಹೋಗ್ತಿರ್ಬೇಕಾದ್ರೆ ಸಣ್ಣ ಮಳೆ ಆಗ್ತಿತ್ತು. ಒಂದೇ ಸಲ ಯಾರೋ ಫೋಟೋ ಕ್ಲಿಕ್ ಮಾಡಿದಂತೆ ಫ್ಲಾಶ್.. ಭಯಾನಕ ಮಿಂಚು ಗುಡುಗು.. ನನಗೆ ಬಂದು ಬಡಿದ ಹಾಗಾಯ್ತು. ಒಂದು ಕ್ಷಣ ನನ್ನ ಕೈಕಾಲು ಅಲುಗಾಡಿಸೋಕೂ ಆಗಲಿಲ್ಲ. ಅದೆಷ್ಟು ಬಿಗಿಯಾಗಿ ಹಿಡಿದಿದ್ದೆ ನನ್ನನ್ನ ನೀನು! ಅದೇ ಮೊದಲ ಭೇಟಿ! ಆ ಆಕಸ್ಮಿಕ ಹಿಡಿತದ ಬಿಗಿ ನನ್ನನ್ನ ಅಷ್ಟೇ ಗಟ್ಟಿಯಾಗಿ ಈಗಲೂ ಹಿಡಿದಿದೆ. ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!
ಆ ದಿನ ನಾನು ತೊಟ್ಟಿದ್ದ ಬಿಳಿ ಅಂಗಿಯ ಎದೆಯ ಬಳಿ ನಿನ್ನ ತುಟಿಯ ರಂಗು. ನಿನ್ನ ಮುಡಿಯ ಮಲ್ಲಿಗೆಯ ಘಮ ಇವತ್ತಿಗೂ ಹಾಗೇ ಇದೆ. ಅದೊಂದು ಪ್ರೇಮದ ಗುರುತಾಗಿ ಹಾಗೇ ತೆಗೆದಿಟ್ಟಿದ್ದೇನೆ. ಆ ದಿನ ಎದೆಗಂಟಿದ ನಿನ್ನ ನಂಟು ಪ್ರತಿ ಜನ್ಮಕ್ಕೂ ಉಳಿಯುವಂತಹದ್ದು. ಅದೆಷ್ಟೇ ಮಳೆ ಮಿಂಚು ಬಂದ್ರೂ ಮತ್ತೆ ಮತ್ತೆ ಹಸಿರಾಗಿ ಜೀವ ಪಡೆಯುತ್ತಲೇ ಇದೆ. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ನಿನ್ನನ್ನು ನೋಡಿದಾಗೆಲ್ಲ ನಿನಗೆ ಭಯ ಆಗೋ ಹಾಗೆ ಗುಡುಗು ಬರಬೇಕು ಅಂತ ಅನ್ಸುತ್ತೆ. ಆ ಭಯದಲ್ಲಿ ನೀನು ನನ್ನನ್ನ ತಬ್ಬಿಕೊಂಡು ಬಿಡ್ತಿಯಲ್ಲ.. ಆಗೆಲ್ಲ ಪ್ರೇಮದ ಮಳೆಯಲ್ಲಿ ಒದ್ದೆ ಮುದ್ದೆ ಆಗ್ಬಿಡ್ಬೇಕು! ಆ ಪ್ರೇಮ ಅದೆಷ್ಟು ಗಾಢವಾಗಿ ಎದೆಗೆ ಇಳಿಬೇಕು ಅಂದ್ರೆ ಅದೆಷ್ಟೋ ಅಡೆ ತಡೆಗಳಿದ್ರೂ ನದಿ ಕಡಲನ್ನು ಸೇರುವಷ್ಟು ಸಲೀಸಾಗಿರಬೇಕು. ಇದನ್ನೂ ಓದಿ: ಪ್ರೇಮದೂರಿಗೆ ನೀನೇ ದಾರಿ ತೋರಿಸಬೇಕು!
ಇಂತಿ
ನಿನ್ನ ತೋಳುಗಳಲ್ಲಿ ಸದಾ ಬಂಧಿಯಾಗಲು ಕಾತರಿಸುವ ನಾನು!
