Advertisements

ಮುತ್ತಿಡಲು ಹೋದಾಗ ಹಾಯಲು ಬಂದ ಹೋರಿ- ಗಲಿಬಿಲಿಗೊಂಡ ಸಿಎಂ

ವಿಜಯಪುರ: ಮುತ್ತಿಡಲು ಹೋದಾಗ ಹೋರಿ ಹಾಯಲು ಬಂದ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಕೆಲಕಾಲ ಗಲಿಬಿಲಿಗೊಂಡ ಘಟನೆ ಇಂದು ವಿಜಯಪುರದಲ್ಲಿ ನಡೆದಿದೆ.

Advertisements

ಇಂದು ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ಮೊದಲ ಹಂತ ಉದ್ಘಾಟನೆ ಹಾಗೂ ಎರಡನೇ ಹಂತದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮವಿತ್ತು. ಈ ಯೋಜನೆ ಚಾಲನೆಗೆ ಮುನ್ನ ಬಸವರಾಜ ಬೊಮ್ಮಾಯಿಯವರು ಎತ್ತು, ಗೋವಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಚುನಾವಣೆಗೆ ಸಿದ್ಧತೆ – ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಅಮಿತ್‌ ಶಾ

Advertisements

ಅಂತೆಯೇ ಎತ್ತಿನ ಮೈಮೇಲೆ ಕೈಯಾಡಿಸಿ ಮುತ್ತಿಕ್ಕಿದರು. ನಂತರ ಇನ್ನೊಂದು ಹೋರಿಯನ್ನು ಮಟ್ಟಲು ಹೋದಾಗ ಗಲಿಬಿಲಿಗೊಂಡು ಹಾಯಿಲು ಬಂತು. ಈ ವೇಳೆ ಸ್ಥಳೀಯರು ಗೋವಿನಿಂದ ಸಿಎಂ ಅವರನ್ನು ಪಾರು ಮಾಡಿದ ಪ್ರಸಂಗ ನಡೆದಿದೆ. ಏತ ನೀರಾವರಿ ಅನುಷ್ಠಾನ ಮಾಡಿದ್ದಕ್ಕೆ ಬಂಟನೂರ ಗ್ರಾಮದ ರೈತರು ಜೋಡೆತ್ತು ಹಾಗೂ ಹಸು ಕಾಣಿಕೆ ನೀಡಿದರು.

Advertisements
Advertisements
Exit mobile version