Bengaluru CityDistrictsKarnatakaLatestMain Post

ಚುನಾವಣೆಗೆ ಸಿದ್ಧತೆ – ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಅಮಿತ್‌ ಶಾ

ಬೆಂಗಳೂರು: ಚುನಾವಣೆಗೆ ವರ್ಷವಿರುವಾಗಲೇ ಗೃಹ ಸಚಿವ ಅಮಿತ್‌ ಶಾ ರಾಜ್ಯದತ್ತ ತನ್ನ ದೃಷ್ಟಿಯನ್ನು ನೆಟ್ಟಿದ್ದು ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಏಪ್ರಿಲ್ 1 ರಂದು ರಾಜ್ಯಕ್ಕೆ ಬಂದು ಹೋಗಿದ್ದ ಅಮಿತ್‌ ಶಾ ಈಗ ಮೇ 3ಕ್ಕೆ ಮತ್ತೆ ಬರಲಿದ್ದಾರೆ. ಖೇಲೋ ಇಂಡಿಯಾ ಸಮಾರೋಪದ ನೆಪದಲ್ಲಿ ಮತ್ತೆ ಬೆಂಗಳೂರಿಗೆ ಶಾ ಆಗಮಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ – ಹಳೆ ಮೈಸೂರು ಭಾಗ ಟಾರ್ಗೆಟ್

ಈ ವೇಳೆ ಮೂರು, ನಾಲ್ಕು ಕಾರ್ಯಕ್ರಮದಲ್ಲಿ ಅಮಿತ್‌ ಶಾ ಭಾಗವಹಿಸುವ ಸಾಧ್ಯತೆಯಿದೆ. ಮೇ 3 ರಂದು ಬಸವ ಜಯಂತಿ ಇದ್ದು ಈ ವೇಳೆ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಭಾಗಿಯಾಗಲಿದ್ದಾರೆ.

ಕಳೆದ ಬಾರಿಯ ಭೇಟಿಯಲ್ಲಿ ಸಿದ್ದಗಂಗಾ ಕ್ಷೇತ್ರದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published.

Back to top button