– ಪ್ಲೇಆಫ್‌ನಲ್ಲೇ ಅತ್ಯಧಿಕ ಸಿಕ್ಸ್,
ಚಂಡೀಗಢ: ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೋತು 19ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯಿಂದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಹೊರಬಿದ್ದಿದೆ. ಆದ್ರೆ ಈ ಪಂದ್ಯದಲ್ಲಿ ಆರ್‌ಆರ್ (RR) ಪರ ಮತ್ತೊಮ್ಮೆ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ 15ರ ಬಾಲಕ ವೈಭವ್ ಸೂರ್ಯವಂಶಿ (Vaibhav Suryavanshi) ಹಲವು ದಾಖಲೆಗಳನ್ನ ಧೂಳೀಪಟ ಮಾಡಿದ್ದಾರೆ.
ಎಲಿಮಿನೇಟರ್, ಕ್ವಾಲಿಫೈಯರ್-2 ನಲ್ಲಿ 2 ಬಾರಿ ಶತಕ ಕೈತಪ್ಪಿದರೂ, ದಿಗ್ಗಜರ ದಾಖಲೆಗಳನ್ನ ಧೂಳಿಪಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿ, ಗಮನ ಸೆಳೆದಿದ್ದ ವೈಭವ್, ತಮ್ಮ 2ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಕ್ರಿಕೆಟ್ ಜಗತ್ತು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅತಿ ವೇಗವಾಗಿ 1000 ರನ್ ಹಾಗೂ ಪ್ಲೇಆಫ್‌ನಲ್ಲೇ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ವೈಭವ್ ಸೂರ್ಯವಂಶಿ ಆಟಕ್ಕೆ ಪಾಕಿಸ್ತಾನದಿಂದಲೂ ಭಾರಿ ಮೆಚ್ಚುಗೆ
ಅತಿ ವೇಗದ 1000 ರನ್:
ಶುಕ್ರವಾರ (ಮೇ 29) ಜಿಟಿ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ 96 ರನ್ ಬಾರಿಸಿದ್ದು, ಈ ಮೂಲಕ ಕೇವಲ 440 ಎಸೆತಗಳಲ್ಲಿ 1000 ರನ್ ಬಾರಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಅತಿವೇಗವಾಗಿ 1000 ರನ್ ಪೂರೈಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕೆಕೆಆರ್ ಆಟಗಾರ ರಸ್ಸೆಲ್ ಅವರ ಹೆಸರಿನಲ್ಲಿತ್ತು, ರಸ್ಸೆಲ್ 545 ಎಸೆತಗಳಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದ್ದರು.
ಪ್ಲೇ ಆಫ್‌ನಲ್ಲೇ ಅತ್ಯಧಿಕ ಸಿಕ್ಸ್:
ವೈಭವ್ ಸೂರ್ಯವಂಶಿ ಐಪಿಎಲ್ 2026ರ ಪ್ಲೇಆಫ್‌ನ ಕೇವಲ ಎರಡು ಪಂದ್ಯಗಳಲ್ಲಿ ಒಟ್ಟು 19 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಮತ್ತೊಂದು ದಾಖಲೆ ಹೆಗಲಿಗೇರಿಸಿಕೊಂಡರು. ಐಪಿಎಲ್ 2026ರ ಪ್ಲೇಆಫ್ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 12 ಸಿಕ್ಸರ್ ಹಾಗೂ ಜಿಟಿ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಒಂದೇ ಆವೃತ್ತಿಯ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿ, ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ದಾಖಲೆ ಮುರಿದಿದ್ದರು. ಕ್ರಿಸ್ ಗೇಲ್ 2012ರಲ್ಲಿ ಆರ್‌ಸಿಬಿ ಪರ 59 ಸಿಕ್ಸರ್‌ಗಳನ್ನ ಸಿಡಿಸಿದ್ದರು. ಇದೀಗ ವೈಭವ್ ಆರ್‌ಆರ್ ಪರ 65 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.ಇದನ್ನೂ ಓದಿ: New Six Machine – ಸೂರ್ಯವಂಶಿಯನ್ನು ಹಾಡಿ ಹೊಗಳಿದ ಕ್ರಿಸ್ ಗೇಲ್
