ದಾವಣಗೆರೆ: ಮನೆ ಮಾಲೀಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಮಾಡಬೇಕು. ಸಿದ್ದರಾಮಯ್ಯನವರು ಮೋದಿಯವರಿಗೆ ಸರಿಸಮಾನವಾದ ವ್ಯಕ್ತಿ ಎಂದು ಕಾಗಿನೆಲೆಯ ನಿರಂಜನಾನಂದ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೊಡಿಯಲ್ಲಿ ನಡೆದ ಕನಕ ಪೀಠದ 25 ನೇ ವರ್ಷದ ರಜತ ಮಹೋತ್ಸದಲ್ಲಿ ಮಾತನಾಡಿದ ಅವರು, ನಾವು ಕೆಂಪು ಕೋಟೆಯ ಮೇಲೆ ಕಂಬಳಿ ಬೀಸ ಬೇಕಾದರೆ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರಬೇಕು. ಅವರು ಅಧಿಕಾರಕ್ಕೆ ಬರಬೇಕಾದರೆ ನಿಮ್ಮ ಮತ ಅವರಿಗೆ ಹಾಕಿ ಗೆಲ್ಲಿಸಬೇಕೆಂದು ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡರು.
Advertisement
Advertisement
ಕೋಳಿ ಎಲ್ಲಾ ಕೇರಿಗಳಿಗೆ ಹೋಗಿ ಕಾಳು ಕಡ್ಡಿ ತಿಂದು ಬರುತ್ತದೆ. ಆದ್ರೆ ಮೊಟ್ಟೆ ಮಾತ್ರ ಮಾಲೀಕನ ಮನೆಯಲ್ಲಿ ಇಡುತ್ತದೆ. ಅದೇ ರೀತಿ ಮನೆ ಮಾಲೀಕನಾದ ಸಿದ್ದರಾಮಯ್ಯರನ್ನು ನಾವು ಮತ್ತೆ ಸಿಎಂ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಗೆಲ್ಲಿಸುವಂತೆ ಸ್ವಾಮೀಜಿಯವರು ಕರೆ ನೀಡಿದರು.
Advertisement
ಚುನಾವಣಾ ದಿನ ಹತ್ತಿರ ಬರುತ್ತಿದಂತೆ ಅದರ ಕಾವು ಹೆಚ್ಚಾಗಿದ್ದು, ಇದರ ಪ್ರಚಾರವು ಸಹ ಜೋರಾಗಿ ನಡೆಯುತ್ತಿದೆ.