ಮೈಸೂರು: ದಸರಾ ಜಂಬೂ ಸವಾರಿಗೆ(Dasara Jamboo Savari) ಪ್ರಧಾನಿ ನರೇಂದ್ರ ಮೋದಿ(Narendra Modi) ಬರುತ್ತಿದ್ದರೋ ಇಲ್ಲವೋ ಎಂಬುದು ನಿಖರವಾಗಿ ತಿಳಿದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ(Pratap Simha) ತಿಳಿಸಿದ್ದಾರೆ.
ಯೋಗ ದಿನಕ್ಕೆ ಬಂದಾಗಲೇ ಮೋದಿ ಅವರು ಮೈಸೂರು ದಸರಾ(Mysuru Dasara) ನೋಡುವ ಆಸೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ದಸರಾ ಕಾರ್ಯಕ್ರಮ ಬಗ್ಗೆ ತಿಳಿಯಲು ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗೆ ಫೋನ್ ಕರೆ ಬಂದಿತ್ತು ಎಂದು ಹೇಳಿದರು. ಇದನ್ನೂ ಓದಿ: ವಿಶ್ವಕಪ್ ಬಳಿಕ T20 ಆವೃತ್ತಿಗೆ ಕಿಂಗ್ ಕೊಹ್ಲಿ ವಿದಾಯ?
Advertisement
Advertisement
ಮೈಸೂರಿಗೆ ಬಂದಾಗ ತಾಯಿ ಚಾಮುಂಡಿ ದರ್ಶನ ಮಾಡಿದ್ದರು. ಆಗ ಮತ್ತೊಮ್ಮೆ ದರ್ಶನಕ್ಕೆ ಬರುವ ಇಚ್ಚೆ ವ್ಯಕ್ತಪಡಿಸಿದ್ದರು. ದಸರಾ ವೇಳೆ ತಾಯಿ ದರ್ಶನ ಇನ್ನೂ ವಿಶೇಷ. ಹೀಗಾಗಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಪಡೆಯಲಾಗಿದೆ. ದಸರಾ ಸಿದ್ಧತೆ ಹೇಗಿದೆ? ಪ್ರಧಾನಿಗಳು ದಸರಾಗೆ ಬರುವುದಾದರೆ ಯಾವಾಗ ಬಂದರೆ ಉತ್ತಮ ಎಂಬ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು
Advertisement
ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಉದ್ಘಾಟನೆಗೆ ಆಗಮಿಸುತ್ತಿರುವ ಕಾರಣ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.