ಚೆನ್ನೈ: ಹೊಸ ತಮಿಳು ಸಿನಿಮಾಗಳ (Tamil Movies) ಬಿಡುಗಡೆಯ ಮೊದಲ ಏಳು ದಿನಗಳ ಕಾಲ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ ಐದು ಶೋಗಳನ್ನು ಪ್ರದರ್ಶಿಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಜೋಸೆಫ್ ವಿಜಯ್ (Vijay) ಆದೇಶ ಹೊರಡಿಸಿದ್ದಾರೆ.
ತಮಿಳು ಚಿತ್ರರಂಗದ ಪ್ರತಿನಿಧಿಗಳು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ, ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ ಐದು ಶೋಗಳನ್ನು ಪ್ರದರ್ಶಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸರ್ಕಾರ ಇದೀಗ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ವಿರೋಧ – ಮೋದಿಗೆ ಪತ್ರ ಬರೆದು ಮೇಕೆದಾಟು DPR ತಿರಸ್ಕರಿಸುವಂತೆ ವಿಜಯ್ ಒತ್ತಾಯ
ಈ ಹಿಂದೆ ತಮಿಳುನಾಡು ಸಿನಿಮಾ ನಿಯಂತ್ರಣ ನಿಯಮಗಳ ಪ್ರಕಾರ ಚಿತ್ರಮಂದಿರಗಳಲ್ಲಿ ದಿನಕ್ಕೆ ನಾಲ್ಕು ಶೋಗಳಿಗೆ ಮಾತ್ರ ಅನುಮತಿ ಇತ್ತು. ವಿಶೇಷ ಹಬ್ಬಗಳು ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿ ಮಾತ್ರ ಹೆಚ್ಚುವರಿ ಒಂದು ಶೋ ನಡೆಸಲು ಅವಕಾಶ ನೀಡಲಾಗುತ್ತಿತ್ತು.
ಆದರೆ ಹೊಸ ಆದೇಶದ ಅನುಸಾರ, ಹೊಸ ತಮಿಳು ಸಿನಿಮಾಗಳು ಬಿಡುಗಡೆಯಾದ ಮೊದಲ ಏಳು ದಿನಗಳ ಕಾಲ ದಿನಕ್ಕೆ ಐದು ಶೋಗಳನ್ನು ನಡೆಸಬಹುದು. ಜೊತೆಗೆ ಶನಿವಾರ, ಭಾನುವಾರ, ಸಾರ್ವಜನಿಕ ರಜೆ ಹಾಗೂ ಸ್ಥಳೀಯ ಹಬ್ಬಗಳ ದಿನಗಳಲ್ಲೂ ಐದು ಶೋ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಚಿತ್ರಮಂದಿರಗಳು ಸರ್ಕಾರ ಅಥವಾ ಸ್ಥಳೀಯ ಅಧಿಕಾರಿಗಳಿಂದ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಮಿಳುನಾಡಿನ 14 ಲಕ್ಷ ರೈತರ ಸಾಲ ಮನ್ನಾ ಘೋಷಿಸಿದ ವಿಜಯ್
