ಐಪಿಎಲ್ ಸೀಸನ್ 19ರಿಂದ (IPL 2026) ಪಂಜಾಬ್ ಕಿಂಗ್ಸ್ (PBKS) ತಂಡ ಹೊರಬೀಳುತ್ತಿದ್ದಂತೆ ತಂಡದ ಪ್ರಮುಖವೇಗಿ ಅರ್ಷದೀಪ್ ಸಿಂಗ್ (Arshdeep Singh) ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಿಂದ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಕೊಹ್ಲಿ ಜೊತೆಗಿನ ರೀಲ್ಸ್ ಕೂಡ ಅರ್ಷದೀಪ್ ಡಿಲೀಟ್ ಮಾಡಿದ್ದಾರೆ.
ಐಪಿಎಲ್ 2026ರಲ್ಲಿ ಅರ್ಷದೀಪ್ ಅಷ್ಟೇನು ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಪ್ರತೀ ಪಂದ್ಯದಲ್ಲೂ 10ಕ್ಕೂ ಅಧಿಕ ಸರಾಸರಿಯಲ್ಲಿ ಬೌಲಿಂಗ್ ಮಾಡುವುದರ ಜೊತೆಗೆ 14 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಅರ್ಷದೀಪ್ ಪಡೆದಿದ್ದಾರೆ.
ಅರ್ಷದೀಪ್ ಡಿಲೀಟ್ ಮಾಡಿದ ಪೋಸ್ಟ್‌ಗಳ ಪೈಕಿ ವಿರಾಟ್ ಕೊಹ್ಲಿ ಜೊತೆಗಿನ ರೀಲ್ಸ್ ಕೂಡ ಸೇರಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿರಾಟ್ ಕೊಹ್ಲಿ ತಮಾಷೆ ಮಾಡುತ್ತಿದ್ದ ರೀಲ್ಸ್ ಒಂದನ್ನು ಅರ್ಷದೀಪ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ರೀಲ್ಸ್ ಬರೋಬ್ಬರಿ 1.5 ಕೋಟಿ ವೀಕ್ಷಣೆ ಪಡೆದುಕೊಂಡಿತ್ತು.
ಅರ್ಷದೀಪ್ ಯಾವ ಕಾರಣಕ್ಕೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಅರ್ಷದೀಪ್ ಇನ್ಸ್ಟಾ ಖಾತೆಯಲ್ಲಿ ಕೇವಲ 44 ಪೋಸ್ಟ್‌ಗಳು ಬಾಕಿ ಇವೆ.
