Bengaluru CityDistrictsKarnatakaLatestLeading NewsMain Post

ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಉಂಟಾಗಿದ್ದ ಗೊಂದಲಗಳು, ವಿವಾದಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತೆರೆ ಎಳೆದಿದ್ದಾರೆ.

ಒಂದು ಗಂಟೆಗೂ ಹೆಚ್ಚು ಸಮಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ನಾರಾಯಣ ಗೌಡರಿಗೆ ಕೈ ಪಾಲಿಕೆ ಸದಸ್ಯರಿಂದ ಫುಲ್ ಕ್ಲಾಸ್

siddaramaiah bc nagesh

ಕಾಂಗ್ರೆಸ್ ಅವಧಿಯಲ್ಲಿ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಪಠ್ಯಕ್ಕೆ ವಿರೋಧ ಮಾಡಿದ್ದ ಸಾಹಿತಿಗಳು, ಕಾಂಗ್ರೆಸ್ ನಾಯಕರ ವಿರುದ್ಧ ದಾಖಲೆ ಸಮೇತ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ನಾರಾಯಣ ಗುರು, ಭಗತ್ ಸಿಂಗ್ ಪಠ್ಯಗಳನ್ನು ಕೈ ಬಿಟ್ಟಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಹೆಡ್ಗೆವಾರ್ ಪಠ್ಯ ಸೇರ್ಪಡೆ, ಕೆಂಪೇಗೌಡರ ಜೀವನ ಚರಿತ್ರೆ, ಟಿಪ್ಪು ವೈಭವೀಕರಣದ ಬಗ್ಗೆ ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

bc nagesh
ಸಾಂದರ್ಭಿಕ ಚಿತ್ರ

ಪಠ್ಯದಲ್ಲಿ ಏನಿದೆ, ಏನಿಲ್ಲ? – ಸಚಿವರು ಹೇಳಿದ್ದೇನು?

 • ನಾರಾಯಣಗುರು ಪಠ್ಯವನ್ನ 10ನೇ ತರಗತಿ ಇತಿಹಾಸ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ. ಇತಿಹಾಸ ಪುಸ್ತಕದಲ್ಲಿ ಹೆಚ್ಚು ಪಠ್ಯ ಇತ್ತೆಂಬ ಕಾರಣಕ್ಕೆ ಕನ್ನಡಕ್ಕೆ ಸೇರ್ಪಡೆ ಮಾಡಲಾಗಿದೆ. 6ನೇ ತರಗತಿ ಪಠ್ಯದಲ್ಲಿರೋ ನಾರಾಯಣಗುರು ಪಠ್ಯವೂ ಹಾಗೇ ಉಳಿಸಿಕೊಳ್ಳಲಾಗಿದೆ.
 • ಭಗತ್ ಸಿಂಗ್ ಪಠ್ಯ ತೆಗೆದಿಲ್ಲ. ಭಗತ್ ಸಿಂಗ್ ಜೊತೆ ಕ್ರಾಂತಿಕಾರಿಗಳಾದ ರಾಜ್‌ಗುರು, ಸುಖ್‌ದೇವ್ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲಿ ಅವರು ಬರೆದಿರು `ತಾಯಿ ಭಾರತೀಯರ ಅಮರಪುತ್ರರು’ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ.
 • ಡಾ.ಜಿ.ರಾಮಕೃಷ್ಣರ ಭಗತ್ ಸಿಂಗ್ ಪಠ್ಯವೂ ಕೈ ಬಿಟ್ಟಿಲ್ಲ. ಮೈಸೂರು ಒಡೆಯರ್ ಪಠ್ಯವನ್ನ ಬರಗೂರು ರಾಮಚಂದ್ರಪ್ಪ ಸಮಿತಿ ಕೈ ಬಿಟ್ಟಿತ್ತು. 5 ಪುಟದ ಪಠ್ಯವನ್ನ 4 ಪುಟಕ್ಕೆ ಇಳಿಸಿತ್ತು. ಇದನ್ನ ಸರಿ ಮಾಡಿದ್ದೇವೆ.
 • ಬರಗೂರು ಸಮಿತಿ ಒಂದು ಪುಟ ಇದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು 6 ಪುಟಕ್ಕೆ ಹೆಚ್ಚಿಸಿತ್ತು. ಓಟ್ ಬ್ಯಾಂಕ್‌ಗಾಗಿ ಒಡೆಯರ್ ಪಠ್ಯ ಕೈ ಬಿಟ್ಟು ಟಿಪ್ಪು ಸುಲ್ತಾನ್ ಪಠ್ಯ ಸೇರ್ಪಡೆ ಮಾಡಿತ್ತು. ಟಿಪ್ಪು ವೈಭವೀಕರಣವನ್ನು, ಅದರಲ್ಲಿದ್ದ ತಪ್ಪುಗಳನ್ನು ತಪ್ಪು ಸರಿ ಮಾಡಲಾಗಿದೆ. ಟಿಪ್ಪುವಿನ ನಿಜವಾದ ಮುಖವಾಡವನ್ನ ಪಠ್ಯದಲ್ಲಿ ಸೇರಿಸಿದ್ದೇವೆ.
 • ಪೆರಿಯಾರ್ ಪಠ್ಯ ಮುಂದುವರಿಸಲಾಗಿದೆ. ರಾಮನ ಬಗ್ಗೆ ಆಕ್ಷೇಪಾರ್ಹ ಮತ್ತು ರಾವಣನ ಪರ ಇದ್ದ ಸಾಲುಗಳನ್ನ ತೆಗೆಯಲಾಗಿದೆ. ಕುವೆಂಪು ಪಠ್ಯವನ್ನ ನಾವು ಬದಲಾವಣೆ ಮಾಡಿಯೇ ಇಲ್ಲ. ಬರಗೂರು ಸಮಿತಿ ಕುವೆಂಪು ಪಠ್ಯವನ್ನು ಕೈ ಬಿಟ್ಟಿತ್ತು. ನಾವು ಹೆಚ್ಚುವರಿಯಾಗಿ 2 ಪಠ್ಯ ಸೇರ್ಪಡೆ ಮಾಡಿದ್ದೇವೆ.
 • ಕುವೆಂಪು ಅವರ `ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಇತಿಹಾಸದ ಬಗ್ಗೆ ಬರಗೂರು ರಾಮಚಂದ್ರಪ್ಪ ತಪ್ಪು ಮಾಹಿತಿ ಕೊಟ್ಟಿದ್ದರು. ಅದನ್ನೂ ಸರಿ ಮಾಡಿದ್ದೇವೆ.
 • ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರು, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಪಠ್ಯ ಬರಗೂರು ಸಮಿತಿ ಕೈ ಬಿಟ್ಟಿತ್ತು. ಅವರ ಪಠ್ಯ ಸೇರ್ಪಡೆ ಮಾಡಿದ್ದೇವೆ.
 • ಹಿಂದೂ ಮಹಾ ಸಾಗರವನ್ನು ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಿದ್ರು. ಅದನ್ನು ಸರಿ ಮಾಡಿದ್ದೇವೆ. ಬರಗೂರು ರಾಮಚಂದ್ರಪ್ಪ ಸಮಿತಿ ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಪಠ್ಯವನ್ನು ತೆಗೆದು ಹಾಕಿತ್ತು. ಅದನ್ನ ಸೇರಿಸಲಾಗಿದೆ. ಜೊತೆಗೆ ಬರಗೂರು ಸಮಿತಿ ವಿವೇಕಾನಂದರ ಬಗ್ಗೆಯಿದ್ದ ವಿಕೃತಿಯನ್ನು ಸರಿ ಮಾಡಿದ್ದೇವೆ.
 • `ಏರುತಿಹುದು, ಹಾರುತಿಹುದು ನಮ್ಮ ಬಾವುಟ’ ಹಾಗೂ ನಾಡಪ್ರಭು ಕೆಂಪೇಗೌಡರ ಪಠ್ಯವನ್ನು ಸೇರಿಸಿದ್ದೇವೆ. ಚರ್ಚ್‌ಗಳು, ದೇವಾಲಯಗಳ ಬಗ್ಗೆ ಪಠ್ಯ ಇತ್ತು. ಇದ್ರಲ್ಲಿ ದೇವಾಲಯ ಫೋಟೋವೇ ಇರಲಿಲ್ಲ. ಅದನ್ನ ಸರಿ ಮಾಡಿದ್ದೇವೆ. ಸಿಂಧೂ ನಾಗರಿಕತೆ ಪಠ್ಯ ಸೇರ್ಪಡೆ ಮಾಡಿದ್ದೇವೆ. ಮೊಘಲರು, ಬ್ರಿಟಿಷರ ವಿರುದ್ಧ ಹೋರಾಡಿದ ವೀರರ ಬಗ್ಗೆಯೂ ಪಠ್ಯ ಸೇರ್ಪಡೆ ಮಾಡಲಾಗಿದೆ.
 • ಹೆಡ್ಗೆವಾರ್ ಬಗ್ಗೆ ಈಗ ಮಾತಾಡೋರು ಯಾರು ಹುಟ್ಟಿರಲಿಲ್ಲ. ಅದಕ್ಕಾಗಿ ಅವರ ಪಠ್ಯ, ಒಂದು ಭಾಷಣ ಸೇರ್ಪಡೆ ಮಾಡಿದ್ದೇವೆ. ದೇಶ ಭಕ್ತಿ ಬಗ್ಗೆ, ದೇಶಕ್ಕೆ ಸಮರ್ಪಣೆ ಭಾವದ ಬಗ್ಗೆ ತಿಳಿಸಲು ಹೆಡ್ಗೆವಾರ್ ಬಗ್ಗೆ ಸೇರಿಸಲಾಗಿದೆ. ಆರ್‌ಎಸ್‌ಎಸ್ ಬಗ್ಗೆ ಸೇರಿಸಿಲ್ಲ.
 • ಪ್ರಸ್ತುತ ಸಾಹಿತಿಗಳಲ್ಲೂ ಜಾತಿ ಬಣ್ಣ ಹುಡುಕುವ ಕೆಲಸ ಮಾಡೋದು ಸರಿಯಲ್ಲ. ಬರಗೂರು ಸಮಿತಿ ಸಂದೇಶ ನಿಡಗುಂಡ, ಶಿವಯೋಗಿ, ಸಾ.ಶಿ.ಮರುಳಯ್ಯ, ಸಿದ್ದಯ್ಯ ಪುರಾಣಿಕರನ್ನ ಪಠ್ಯ ಕೈ ಬಿಟ್ಟಿದ್ದರು. ಅದನ್ನೂ ಈಗ ಸೇರಿಸಲಾಗಿದೆ.

Leave a Reply

Your email address will not be published.

Back to top button