ಲಕ್ನೋ: ಐಪಿಎಲ್ 2026ರಲ್ಲಿ (IPL 2026) ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಗೆಲುವಿನ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಾಗೂ ಪತ್ನಿ ಅನುಷ್ಕಾ ಶರ್ಮಾ (Anushka Sharma) ವೃಂದಾವನಕ್ಕೆ ಭೇಟಿ ನೀಡಿದ್ದಾರೆ.
ಸೋಮವಾರ (ಜೂ.1) ವೃಂದಾವನದಲ್ಲಿರುವ (Vrindavan) ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜರ `ರಾಧಾ ಕೇಳಿ ಕುಂಜ್’ ಆಶ್ರಮಕ್ಕೆ ( Premanand Maharaj’s Radha Keli Kunj Ashram) ಭೇಟಿ ನೀಡಿದ್ದಾರೆ. ಈ ವೇಳೆ ಮಹಾರಾಜರ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದ್ದಾರೆ. ಸದ್ಯ ಕೊಹ್ಲಿ ಮತ್ತು ಅನುಷ್ಕಾ ಆಶ್ರಮದಿಂದ ಹೊರಬರುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: One Felt Nice, We Did It Twice – ಆರ್‌ಸಿಬಿಯನ್ನು ಅಭಿನಂದಿಸಿದ ಅನುಷ್ಕಾ
VIRAT KOHLI & ANUSHKA SHARMA AT VRINDAVAN TO TAKD BLESSINGS OF PREMANAND JI MAHARAJ. 🙏
– Virat Kohli chanting “Radhe, Radhe” at Vrindavan. ♥️pic.twitter.com/KirpYKZZvt
— Tanuj (@ImTanujSingh) June 2, 2026
ಕೊಹ್ಲಿ ಮತ್ತು ಅನುಷ್ಕಾ ವೃಂದಾವನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಹಲವು ಬಾರಿ ಭೇಟಿ ನೀಡಿದ್ದಾರೆ. ಎಂದಿನಂತೆ ಸರಳ ಉಡುಪಿನಲ್ಲಿ ಆಗಮಿಸಿ, ಮಹಾರಾಜರ ಆಶೀರ್ವಾದ ಪಡೆದುಕೊಂಡಿದ್ದಾರೆ.
View this post on Instagram
ಆಟದ ಮೈದಾನದಲ್ಲಿ ಅಬ್ಬರಿಸಿದ ಕೊಹ್ಲಿ, ವೃಂದಾವನ ಆಶ್ರಮದಲ್ಲಿ ವಿನಮ್ರರಾಗಿ ಕೈಮುಗಿದು ನಿಂತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಇನ್ನೂ ನಿನ್ನೆಯಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಅನುಷ್ಕಾ ಶರ್ಮಾ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆರ್‌ಸಿಬಿ ತಂಡದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಅವರು, ವಿರಾಟ್ ಹಣೆಗೆ ಅನುಷ್ಕಾ ಇಬ್ಬರೂ ಒಟ್ಟಿಗೆ ಟ್ರೋಫಿ ಹಿಡಿದು ನಿಂತಿರುವ ಫೋಟೋ ಪೋಸ್ಟ್ ಮಾಡಿದ್ದರು.ಇದನ್ನೂ ಓದಿ: ಅಂದು ಕಪ್‌ಗೆ ಕೊಹ್ಲಿ ಕಿಸ್… ಇಂದು ಕೊಹ್ಲಿಗೆ ಅನುಷ್ಕಾ ಕಿಸ್..!
