ಕನ್ನಡ ಸಿನಿ ಪ್ರಿಯರಿಗೆ ಅದರಲ್ಲೂ ಡಿಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ (Darshan) ನಟನೆಯ ದಿ ಡೆವಿಲ್ ಚಿತ್ರ (The Devil Movie) ಯಾವಾಗ ಒಟಿಟಿ ಎಂಟ್ರಿ ಕೊಡಲಿದೆ ಎಂಬ ನಿರೀಕ್ಷೆ ದಚ್ಚು ಫ್ಯಾನ್ಸ್ ಗೆ ಇತ್ತು. ಥಿಯೇಟರ್ ನಲ್ಲಿ ಚಿತ್ರ ಮಿಸ್ ಮಾಡಿಕೊಂಡರು, ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು ಎಂದು ಕಾತರದಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಕನ್ನಡ Zee 5 ಸಿಹಿಸುದ್ದಿ ನೀಡಿದೆ.
ಮಿಲನ ಹಾಗೂ ತಾರಕ್ ಸಿನಿಮಾ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶನದ, ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಕನ್ನಡ Zee 5 ನಲ್ಲಿ ಇದೇ ತಿಂಗಳ 17 ರಂದು ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಲು ಆಗದವರು ಈಗ ಮನೆಯಲ್ಲಿಯೇ ಕುಳಿತು ದಿ ಡೆವಿಲ್ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.
ಚಿತ್ರದಲ್ಲಿ ದಚ್ಚು – ಧನುಷ್ ಹಾಗೂ ಕೃಷ್ಣ ಅನ್ನುವ ಎರಡು ವಿಭಿನ್ನ ರೋಲ್ ಅಲ್ಲಿ ಕಾಣಿಸಿಕೊಂಡಿದಾರೆ. ಧನುಷ್ ಅನ್ನುವ ಪಾತ್ರದಲ್ಲಿ ದರ್ಶನ್ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸಿದ್ದಾರೆ.
ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುಧಾಕರ್.ಎಸ್.ರಾಜ್ ಕ್ಯಾಮರಾವರ್ಕ್ ಮಾಡಿದ್ದಾರೆ. ದರ್ಶನ್, ರಚನಾ ರೈ, ಮಹೇಶ್ ಮಾಂಜ್ರೇಕರ್, ವಿನಯ್ ಗೌಡ, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.
