ಬೆಂಗಳೂರು: ಲಿಫ್ಟ್ ಡೋರ್‌ನಲ್ಲಿ (Lift) ತಲೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ಜಯನಗರ (Jayanagar) ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ನಡೆದಿದೆ.
ಧಾರವಾಡ (Dharwad) ಮೂಲದ ರಾಜೇಶ್ (22) ಮೃತ ಯುವಕ. ದಕ್ಷಿಣ ಉಪಹಾರ ಹೋಟೆಲ್‌ನ ಸರಕು ಸಾಗಿಸುವ ಲಿಫ್ಟ್‌ನಲ್ಲಿ ಬೆಳಗ್ಗೆ 8:30ಕ್ಕೆ ಈ ಘಟನೆ ನಡೆದಿದೆ. ಸದ್ಯ ಹೋಟೆಲ್ ಬಂದ್ ಮಾಡಲಾಗಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಧಾರವಾಡ | ಹೊತ್ತಿ ಉರಿದ ಕೊಟ್ಟಿಗೆ – 12 ಜಾನುವಾರುಗಳು ಸಜೀವ ದಹನ
ರಾಜೇಶ್, ಹೋಟೆಲ್ ಮಾಲೀಕ ಅವಿನಾಶ್ ಅವರ ಸ್ನೇಹಿತನಾಗಿದ್ದ. ಹೊಸ ಹೋಟೆಲ್ ತೆರೆಯುವ ಆಲೋಚನೆಯಲ್ಲಿದ್ದ. ಅದಕ್ಕಾಗಿ ಹೋಟೆಲ್ ಕೆಲಸ ಕಲಿಯುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದ. ಈ ವೇಳೆ ಲಿಫ್ಟ್‌ನಲ್ಲಿ ಕತ್ತು ಹೊರಗೆ ಹಾಕಿದ್ದಾಗ ಈ ಅನಾಹುತ ನಡೆದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಫ್ರಿಕಾದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಗಳ ಮಾರಾಟ – ಚಿಕ್ಕಮಗಳೂರು ಹಕ್ಕಿಪಿಕ್ಕಿ ದಂಪತಿಯಿಂದ ನೀಚ ಕೃತ್ಯ
