ಬೆಂಗಳೂರು: ಅಣ್ಣನ ಪ್ರೀತಿ (Love) ನಿರಾಕರಿಸಿದ ಯುವತಿಯನ್ನು ಆತನ ತಮ್ಮ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ (Bengaluru) ಕೋಡಿಹಳ್ಳಿಯ ಹೆಚ್‌ಎಎಲ್ ರಸ್ತೆಯಲ್ಲಿ ನಡೆದಿದೆ.
ಅಮೃತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ. ಜು. 13 ರಂದು ಯುವತಿಗೆ ಚಾಕು ಇರಿಯಲಾಗಿತ್ತು. ರಕ್ತದ ಮಡುವಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಕೆ ಜು.15ರ ಸಂಜೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಸಭ್ಯ ವರ್ತನೆ ಆರೋಪ – ಇನ್‌ಫ್ಲೂಯೆನ್ಸರ್ ಅಮುಕು ಡುಮುಕು ವಿರುದ್ಧ FIR
ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯ ಆಗಿತ್ತು. ಬಳಿಕ ಧನುಷ್ ಮತ್ತು ಅಮೃತ ಆತ್ಮೀಯರಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಧನುಷ್‌ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಆತನಿಗೆ ಒಂದು ಮಗು ಕೂಡ ಇತ್ತು. ಈ ವಿಚಾರವನ್ನು ಅಮೃತಳಿಂದ ಮುಚ್ಚಿಟ್ಟಿದ್ದ. ಈ ವಿಚಾರ ಗೊತ್ತಾಗಿ ಆತನಿಂದ ಯುವತಿ ದೂರವಾಗಿದ್ದಳು.

ಅಣ್ಣನ ಪ್ರೀತಿ ನಿರಾಕರಿಸಿದವಳನ್ನ ಉಳಿಸಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಅಂದುಕೊಂಡಂತೆ ಜು.13 ರಂದು ಯುವತಿ ಮನೆಯ ಬಳಿ ತೆರಳಿ ಗಲಾಟೆ ಮಾಡಿದ್ದ. ಈ ವೇಳೆ ಯುವತಿಯ ಬೆನ್ನು ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದ. ಅಮೃತ ಕಾನೂನು ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್‌ನಲ್ಲಿ ಕೆಲಸ ಕೂಡ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಚಾಕು ಇರಿದ ಆರೋಪಿಗಳಾದ ಸೂರ್ಯ ಹಾಗೂ ಧನುಷ್ ವಿರುದ್ಧ ಜೀವನ ಭೀಮಾನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚಾಕು ಇರಿದು ಪತಿಯ ಹತ್ಯೆ, ಮಗನ ಕೊಲೆಗೂ ಯತ್ನ – ಶವದ ಪಕ್ಕದಲ್ಲೇ ರಾಕ್ಷಸಿಯಂತೆ ಮೊಬೈಲ್ ನೋಡ್ತಿದ್ದ ಹಂತಕಿ ಪತ್ನಿ
