ಧಾರವಾಡ: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ (Fire Accident) ಹೊತ್ತಿ ಉರಿದ ಪರಿಣಾಮ 12 ಜಾನುವಾರುಗಳು ಸಜೀವ ದಹನಗೊಂಡ ಘಟನೆ ತಾಲೂಕಿನ (Dharwad) ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಂಕಿಗೆ ಆಹುತಿಯಾದ ಜಾನುವಾರುಗಳು (Cows) ಸಾಗರ ಅಸುಂಡಿ, ಧರಣೇಂದ್ರ ಅಸುಂಡಿ ಎಂಬ ರೈತರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅವಘಡದಲ್ಲಿ ಧರಣೇಂದ್ರ ಅಸುಂಡಿಯವರ ಎರಡು ಆಕಳು, ಮೂರು ಎಮ್ಮೆ, ಎರಡು ಆಕಳ ಕರು ಸಾವನ್ನಪ್ಪಿವೆ. ಸಾಗರ ಅಸುಂಡಿಯವರ ಮೂರು ಎಮ್ಮೆ, ಎರಡು ಎಮ್ಮೆ ಕರುಗಳು ಸಾವನ್ನಪ್ಪಿವೆ. ಅಲ್ಲದೇ ನಾಲ್ಕು ಲೋಡ್ ಎರಡು ಕೊಟ್ಟಿಗೆಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಇದನ್ನೂ ಓದಿ: ಆಫ್ರಿಕಾದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಗಳ ಮಾರಾಟ – ಚಿಕ್ಕಮಗಳೂರು ಹಕ್ಕಿಪಿಕ್ಕಿ ದಂಪತಿಯಿಂದ ನೀಚ ಕೃತ್ಯ
ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದ ಕಾನೂನು ವಿದ್ಯಾರ್ಥಿನಿಯ ಹತ್ಯೆ – ವಿಚ್ಛೇದಿತ ಪ್ರಿಯಕರ ಸೇರಿ ಇಬ್ಬರು ಅಂದರ್
