ಬೆಂಗಳೂರು: ತಳಮಟ್ಟದ ಹೋರಾಟದಿಂದ ರಾಜ್ಯ ರಾಜಕಾರಣದ ಅತ್ಯುನ್ನತ ಶಿಖರದವರೆಗೆ ಬೆಳೆದು ನಿಂತಿರುವ ನಾಯಕ ಡಿ.ಕೆ. ಶಿವಕುಮಾರ್. ಪಕ್ಷ, ರಾಜ್ಯ ಮತ್ತು ಜನಸಾಮಾನ್ಯರ ಏಳಿಗೆಗಾಗಿ ಕಳೆದ 45 ವರ್ಷಗಳಿಂದ ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ರಾಜಕೀಯ ಜೀವನ ಒಂದು ಅದ್ವಿತೀಯ ಪಯಣ. 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿಕೆಶಿ (DK Shivakumar) ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಅವರ ರಾಜಕೀಯ ಪಯಣದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜೀವನದ ಹಾದಿ ಮತ್ತು ಪ್ರಮುಖ ಘಟ್ಟಗಳು
1980 | ರಾಜಕೀಯ ಪ್ರವೇಶ
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಮೂಲಕ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ
ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ರಾಜಕೀಯ ಬೆಂಬಲ
1985 | ಮೊದಲ ಚುನಾವಣಾ ಸ್ಪರ್ಧೆ
ಸಾತನೂರು ಕ್ಷೇತ್ರದಿಂದ ಹೆಚ್. ಡಿ. ದೇವೇಗೌಡರ ವಿರುದ್ಧ ಸ್ಪರ್ಧೆ
1989 | ಮೊದಲ ಚುನಾವಣಾ ಗೆಲುವು
ಸಾತನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
1990-1992 | ಸಚಿವರು, ಕಾರಾಗೃಹ ಮತ್ತು ಗೃಹ ರಕ್ಷಕ ಇಲಾಖೆ
ಜೈಲುಗಳಲ್ಲಿ ಪುನರ್ವಸತಿ ಮತ್ತು ಕೌಶಲ್ಯಾಭಿವೃದ್ಧಿ ಸುಧಾರಣೆ
1999-2004 | ಸಚಿವರು, ನಗರಾಭಿವೃದ್ಧಿ
ನಗರ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

2014-2018 | ಸಚಿವರು, ಇಂಧನ
* ಕರ್ನಾಟಕದಲ್ಲಿ 6,000 ಮೆಗಾವ್ಯಾಟ್‌ಗಿಂತ ಹೆಚ್ಚಿನ ಸೌರಶಕ್ತಿ ಉತ್ಪಾದನೆಗೆ ಒತ್ತು
* ಪಾವಗಡ ಸೋಲಾರ್ ಪಾರ್ಕ್‌ನಿಂದ ಬಂಜರು ಭೂಮಿ ಅಭಿವೃದ್ಧಿ
* ಸೂರ್ಯ ರೈತ ಯೋಜನೆ ಮೂಲಕ ರೈತರ ಸಬಲೀಕರಣ
2018-2019 | ಸಚಿವರು, ಬೃಹತ್ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ
ಬರಗಾಲ ಮತ್ತು ಸಂಕಷ್ಟದ ಸಮಯದಲ್ಲಿ ನೀರಾವರಿ ಮತ್ತು ಆರೋಗ್ಯ ರಕ್ಷಣೆಗೆ ಒತ್ತು
2019 | ಪಕ್ಷ ನಿಷ್ಠೆಯ ಪರೀಕ್ಷೆ
ರಾಜಕೀಯ ಒತ್ತಡಗಳ ನಡುವೆಯೂ ಪಕ್ಷವನ್ನು ಉಳಿಸಲು ಜೈಲು ಶಿಕ್ಷೆಯನ್ನು ಅನುಭವಿಸಿದರು.
2020-ಪ್ರಸ್ತುತ | ಕೆಪಿಸಿಸಿ ಅಧ್ಯಕ್ಷ
ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಪಕ್ಷ ಸಂಘಟನೆ
ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟುಗಳ ನಿವಾರಣೆ

2023 | ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ
2023-ಪ್ರಸ್ತುತ | ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಮೂಲಸೌಕರ್ಯಗಳ ಸುಧಾರಣೆ, ನಗರ ಆಧುನೀಕರಣ ಮತ್ತು ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನಪರ ಆಡಳಿತದೊಂದಿಗೆ ಕರ್ನಾಟಕವನ್ನು ಮುನ್ನಡೆಸುತ್ತಿದ್ದಾರೆ.
ಪ್ರಸ್ತುತ ಹುದ್ದೆಗಳು
ಆಡಳಿತ | ಉಪ ಮುಖ್ಯಮಂತ್ರಿ
* 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಕರ್ನಾಟಕದ 7 ಕೋಟಿಗೂ ಹೆಚ್ಚು ಜನರಿಗೆ ಸ್ವಾಭಿಮಾನದ ಬದುಕು ನೀಡುವುದರ ಮೂಲಕ ಆರ್ಥಿಕ ಭದ್ರತೆ
* ಮೆಟ್ರೋ, ಎಕ್ಸ್‌ಪ್ರೆಸ್‌ವೇ, ಕಾರಿಡಾರ್ ಹಾಗೂ ನಗರ ವಿಸ್ತರಣೆ ಸೇರಿದಂತೆ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ 1.5 ಲಕ್ಷ ಕೋಟಿ ರೂ. ಅನುದಾನ ಹಂಚಿಕೆ
* ಎಲೆಕ್ಟ್ರಿಕ್ ವಾಹನಗಳು (EVs), ತಂತ್ರಜ್ಞಾನ ಪಾರ್ಕ್‌ಗಳು ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆಗೆ ಆದ್ಯತೆ
* ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಮೂಲಕ ಪಾರದರ್ಶಕ ಆಡಳಿತಕ್ಕೆ ಒತ್ತು
ಜಲಸಂಪನ್ಮೂಲ ಸಚಿವಾಲಯ
* ಕಾವೇರಿ 5ನೇ ಹಂತದ ಯೋಜನೆ ಜಾರಿಗೊಳಿಸಿ, ಬೆಂಗಳೂರಿನ 110 ಹಳ್ಳಿಗಳಿಗೆ 775 ಎಂಎಲ್‌ಡಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಇದರಿಂದ ಸುಮಾರು 50 ಲಕ್ಷ ಜನರಿಗೆ ಅನುಕೂಲವಾಗಲಿದೆ.
* ಕಾವೇರಿ 6ನೇ ಹಂತ, ಎತ್ತಿನಹೊಳೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ವಿಸ್ತರಣಾ ಯೋಜನೆಗಳ ಮೂಲಕ ದೀರ್ಘಾವಧಿಯ ನೀರಿನ ಭದ್ರತೆ ಒದಗಿಸುವ ಗುರಿ
* ನೀರಿನ ಅಭಾವ ಎದುರಿಸುವ ಜಿಲ್ಲೆಗಳ 76 ಲಕ್ಷ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ಅನುಷ್ಠಾನ
* ರೈತರ ನೀರಾವರಿ ಅಗತ್ಯತೆಗಳನ್ನು ಪೂರೈಸಲು ಹಾಗೂ ಜಲಾಶಯದ ಸುರಕ್ಷತೆಯನ್ನು ಬಲಪಡಿಸಲು ತುಂಗಭದ್ರಾ ಅಣೆಕಟ್ಟಿಗೆ 33 ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ

ಬೆಂಗಳೂರು ನಗರಾಭಿವೃದ್ಧಿ ಸಚಿವಾಲಯ
* ಇ-ಖಾತಾ ಮೂಲಕ 25 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಂಬಿಕೆ ನಕ್ಷೆ ಮೂಲಕ ಅನುಮೋದನೆ ಪ್ರಕ್ರಿಯೆ
* ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡಲು ಸುರಂಗ ರಸ್ತೆ ಯೋಜನೆ ರೂಪಿಸಲಾಗುತ್ತಿದೆ
* BWSSB ಸ್ಮಾರ್ಟ್ ಆಡಳಿತ ಕ್ರಮಗಳ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ
* ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಒಳಚರಂಡಿಗಳ ಆಧುನೀಕರಣದ ಮೂಲಕ ಮೂಲಸೌಕರ್ಯ ಉತ್ತೇಜನಕ್ಕೆ ಆದ್ಯತೆ
* ಬೆಂಗಳೂರಿನಲ್ಲಿ 4,400ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್‌ಗಳಿದ್ದು, ಈ ಮೂಲಕ ಬೆಂಗಳೂರನ್ನು ಭಾರತದ ಇವಿ ರಾಜಧಾನಿಯಾಗಿಸುವ ಗುರಿ
ಪಕ್ಷ | ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
* ರಾಜ್ಯಾದ್ಯಂತ ಸಂಚರಿಸಿ ಪಕ್ಷದಲ್ಲಿರುವ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ, ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಪಕ್ಷ ಸಂಘಟಿಸಿದರು
* 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ
* ಜನರ ಆರ್ಥಿಕ ಸ್ಥಿತಿ ಬದಲಾಯಿಸಲು ನುಡಿದಂತೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ
* ಡಿ.ಕೆ ಶಿವಕುಮಾರ್ ಅವರ ಸಾರಥ್ಯದಲ್ಲಿ ಸುರಪುರ, ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ 6 ಉಪಚುನಾವಣೆಗಳಲ್ಲೂ ಗೆಲುವು
* ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಪ್ರಮುಖ ಪಾತ್ರ ನಿರ್ವಹಣೆ
* ಪ್ರಮುಖ ಚುನಾವಣೆಗಳ ಸಮಯದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೇರಳ, ಅಸ್ಸಾಂ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಪ್ರಚಾರ
* ತಳಮಟ್ಟದ ನಾಯಕತ್ವದ ಮೂಲಕ ಪಕ್ಷ ಸಂಘಟನೆಗೆ ಒತ್ತು

ಡಿ ಕೆ ಶಿವಕುಮಾರ್ ಅವರ ದೂರದೃಷ್ಟಿ ಮತ್ತು ಪ್ರಗತಿಯ ಹಾದಿ
ಪ್ರಗತಿಯ ಹಾದಿ | ಜನಪರ ಯೋಜನೆಗಳು
* ಬೆಂಗಳೂರು ಮೆಟ್ರೋ ವಿಸ್ತರಣೆ – ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಉತ್ತಮ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು ಆದ್ಯತೆ
* ಟನಲ್ ರಸ್ತೆ ಯೋಜನೆ – ಬೆಂಗಳೂರಿನ ವಾಹನ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡಲು ಸುರಂಗ ರಸ್ತೆ ಯೋಜನೆ ಜಾರಿಗೆ ನಿರ್ಧಾರ
* ಸ್ಕೈಡೆಕ್ – ಜಾಗತಿಕ ಹೆಗ್ಗುರುತು ಮತ್ತು ಬೆಂಗಳೂರಿನ ವೈಭವವನ್ನು ಕಣ್ಣುಂಬಿಕೊಳ್ಳಲು ಸ್ಕೈಡೆಕ್ ನಿರ್ಮಾಣದ ಗುರಿ
* ಜಲಸಮೃದ್ಧ ಕರ್ನಾಟಕ – ಎತ್ತಿನಹೊಳೆ, ಕಾವೇರಿ 5ನೇ ಹಂತ ಮತ್ತು ಕೆರೆಗಳನ್ನು ತುಂಬಿಸುವ ಯೋಜನೆಗಳ ಮೂಲಕ ಕುಡಿಯುವ ನೀರು ಮತ್ತು ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು
ಗುರಿ
* ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮೊದಲ ಆದ್ಯತೆ
* ಜಾಗತಿಕ ಮಟ್ಟದಲ್ಲಿ ರಾಜ್ಯದ ಅಭಿವೃದ್ಧಿಗೆ ಒತ್ತು
* ಸಾರ್ವಜನಿಕರಿಗೆ ಪಾರದರ್ಶಕ, ತಂತ್ರಜ್ಞಾನ-ಚಾಲಿತ ಆಡಳಿತ ವ್ಯವಸ್ಥೆ
* ನಗರ, ಹಳ್ಳಿ ಸೇರಿದಂತೆ ಎಲ್ಲ ಕಡೆಯೂ ವಾಸ ಯೋಗ್ಯ ಮೂಲಸೌಕರ್ಯ ಒದಗಿಸುವಿಕೆ
ನಾಯಕತ್ವದ ಗುಣಗಳು
* ಪ್ರಜೆಗಳೇ ಮೊದಲು – ಪ್ರಜೆಗಳ ಹಿತವನ್ನು ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿ ಯೋಜನೆಗಳ ರೂಪರೇಖೆ
* ಆಡಳಿತದಲ್ಲಿ ಹೊಸ ಆವಿಷ್ಕಾರಗಳು – ಡಿಜಿಟಲ್, ಸುಸ್ಥಿರ ಆಡಳಿತದ ಜೊತೆಗೆ ಕಾಲಕ್ಕೆ ತಕ್ಕ ವ್ಯವಸ್ಥೆಗಳು ಜಾರಿ
* ಸಮತೋಲನ ಅಭಿವೃದ್ಧಿ – ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿಗೆ ಆದ್ಯತೆ
* ದೂರದೃಷ್ಟಿಯ ಚಿಂತನೆ – ಚುನಾವಣೆ ದೃಷ್ಟಿಕೋನವನ್ನು ಇಟ್ಟುಕೊಳ್ಳದೇ ಮುಂದಿನ ಪೀಳಿಗೆಯವರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ
ಇತಿಹಾಸ ಸೃಷ್ಟಿಸುವ ಪಯಣದಲ್ಲಿ
ರೈತರಿಗೆ ನೇರವಾಗಿ ಸೌರಶಕ್ತಿಯನ್ನು ತಲುಪಿಸುವುದರಿಂದ ಹಿಡಿದು ಲಕ್ಷಾಂತರ ಜನರಿಗೆ ಕುಡಿಯುವ ನೀರನ್ನು ಒದಗಿಸುವವರೆಗೆ; ಸಾರ್ವಜನಿಕ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ಹಿಡಿದು ನಮ್ಮ ಬೆಂಗಳೂರಿನ ಭವಿಷ್ಯವನ್ನು ಮರುರೂಪಿಸುವವರೆಗೆ ಡಿ.ಕೆ. ಶಿವಕುಮಾರ್ ಅವರ ಗುರಿ ಸ್ಪಷ್ಟವಾಗಿದೆ. ಇಂದು ಪ್ರತಿಯೊಬ್ಬರಿಗೂ ಸಹಕಾರಿಯಾಗುವ ಹಾಗೂ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನೀಡುವ ಭವ್ಯ ಕರ್ನಾಟಕವನ್ನು ನಿರ್ಮಿಸುವುದೇ ಡಿ.ಕೆ. ಶಿವಕುಮಾರ್ ಅವರ ದೃಢ ಸಂಕಲ್ಪವಾಗಿದೆ.
