ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ಕೊಟ್ಟಿದೆ. ಮೆಟ್ರೋ ಜಾಲ ವಿಸ್ತರಣೆಯ ಭಾಗವಾಗಿ ಮತ್ತೊಂದು ಬಹುನಿರೀಕ್ಷಿತ ಮಾರ್ಗ ಸಾರ್ವಜನಿಕ ಸೇವೆಗೆ ಸಜ್ಜಾಗುತ್ತಿದೆ. ನಗರದ ಪ್ರಮುಖ ಐಟಿ ಕಾರಿಡಾರ್ ಅನ್ನು ಸಂಪರ್ಕಿಸುವ ಬ್ಲೂ ಲೈನ್ (Blue Line Metro) ಮಾರ್ಗದ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈ ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕರಿಗಾಗಿ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಆರಂಭಿಸಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂವರೆಗೆ ಸುಮಾರು 19 ಕಿಲೋಮೀಟರ್ ಉದ್ದದ ಬ್ಲೂ ಲೈನ್ ಮಾರ್ಗ ನಿರ್ಮಾಣವಾಗಿದ್ದು, ಇದು ನಗರದ ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳಿಗೆ ಮಹತ್ವದ ಸಂಪರ್ಕ ಒದಗಿಸಲಿದೆ. ಇದನ್ನೂ ಓದಿ: ವಚನಾನಂದ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ – ಇಂದು ಹೈಕೋರ್ಟ್‌ನಿಂದ ಜಾಮೀನು ಭವಿಷ್ಯ ನಿರ್ಧಾರ
ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಈ ಮಾರ್ಗದಲ್ಲಿ ಅಕ್ಟೋಬರ್ ತಿಂಗಳಿನಿಂದ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಆರಂಭಿಸುವ ಸಾಧ್ಯತೆ ಇದೆ. ಸುರಕ್ಷತಾ ಪರಿಶೀಲನೆಗಳು ಮತ್ತು ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಸಂಚಾರಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ – ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ
ಈ ಮಾರ್ಗದಲ್ಲಿ ಒಟ್ಟು 13 ಮೆಟ್ರೋ ನಿಲ್ದಾಣಗಳು ಇರಲಿದ್ದು, ಪ್ರಮುಖವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಹೆಚ್‌ಎಸ್‌ಆರ್ ಲೇಔಟ್, ಅಗಸರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕದಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ ಹಾಗೂ ಕೆ.ಆರ್.ಪುರಂ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. ಇದನ್ನೂ ಓದಿ: ತ್ರಿಪುರ ಮಾಜಿ ಸಿಎಂ ಜೊತೆ ‘ಟಗರು’ ಖ್ಯಾತಿಯ ನಟಿ ತ್ರಿವೇಣಿ ರಾವ್ ಮದುವೆ
ಬ್ಲೂ ಲೈನ್ ಕಾರ್ಯಾರಂಭವಾದ ಬಳಿಕ ಔಟರ್ ರಿಂಗ್ ರೋಡ್ ಹಾಗೂ ಐಟಿ ಹಬ್ ಪ್ರದೇಶಗಳಲ್ಲಿ ಪ್ರತಿದಿನ ಎದುರಾಗುವ ಟ್ರಾಫಿಕ್ ಸಮಸ್ಯೆಗೆ ಸಾಕಷ್ಟು ಮಟ್ಟಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ವಿಶೇಷವಾಗಿ ಐಟಿ ಉದ್ಯೋಗಿಗಳು ಹಾಗೂ ದೈನಂದಿನ ಪ್ರಯಾಣಿಕರಿಗೆ ವೇಗವಾದ ಮತ್ತು ಸುಗಮ ಸಂಚಾರ ಸೌಲಭ್ಯ ಲಭ್ಯವಾಗಲಿದೆ. ಇದನ್ನೂ ಓದಿ: ಖಾದರ್ ಕಳೆದ ಬಾರಿಯೇ ಮಂತ್ರಿ ಆಗ್ಬೇಕಿತ್ತು, ಆದ್ರೆ ತ್ಯಾಗ ಮಾಡಿದ್ರು: ಸಿಎಂ ಡಿಕೆ ಶಿವಕುಮಾರ್
ಬಿಎಂಆರ್‌ಸಿಎಲ್ ಅಧಿಕಾರಿಗಳ ಅಂದಾಜಿನಂತೆ, ಅಗತ್ಯ ಪರೀಕ್ಷೆಗಳು ಮತ್ತು ಅನುಮೋದನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯದ 200 ಪೊಲೀಸರಿಗೆ ಡಿಜಿ & ಐಜಿಪಿ ಕಮಾಂಡೇಷನ್ ಡಿಸ್ಕ್ ಪ್ರಶಸ್ತಿ
