ಸ್ಯಾಂಡಲ್‌ವುಡ್‌ನ(Sandalwood) ಸುರಧ್ರೂಪಿ ನಾಯಕ ನಟ ಚಂದನ್ ಕುಮಾರ್ (Chandan Kumar) ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದ ಚಿತ್ರ ‘ಫ್ಲರ್ಟ್’ (Flirt) ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಹಾಗೂ ಉತ್ತಮ ವಿಮರ್ಶೆ ಸಹ ಪಡೆದುಕೊಂಡಿತ್ತು. ಆ ಸಮಯದಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾದ ಕಾರಣ, ನಮ್ಮ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಬೇಕು ಎಂದು ಎಲ್ಲಾ ಚಿತ್ರಮಂದಿರಗಳಿಂದ ಸಿನಿಮಾವನ್ನು ಹಿಂಪಡೆಯಲಾಗಿತ್ತು. ನಂತರ ಚಿತ್ರದ ಕೆಲ ದೃಶ್ಯಗಳನ್ನು ಟ್ರಿಮ್ ಮಾಡಿದಾಗ ‘ಫ್ಲರ್ಟ್’ ಹೊಸದೊಂದು ರೂಪ ಪಡೆದುಕೊಂಡಿತು. ಇದೀಗ ಚಿತ್ರವನ್ನು ರೀ-ರಿಲೀಸ್ ಮಾಡಲು ಚಂದನ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಚಂದನ್ ಅವರೇ ಚಿತ್ರದ ನಾಯಕನಾಗಿ ನಟಿಸಿದ್ದಲ್ಲದೆ ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣ ಕೂಡ ಮಾಡಿದ್ದರು. ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಇರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಫ್ರೆಂಡ್‌ಶಿಪ್ ಕುರಿತಾದ ಹಾಡೊಂದನ್ನು ಹಾಡಿದ್ದರು. ಆರಂಭದಿಂದಲೂ ಚಂದನ್ ನಮ್ಮನೆ ಹುಡುಗ ಅಂತಲೇ ಸಪೋರ್ಟ್ ಮಾಡುತ್ತಾ ಬಂದಿರುವ ಕಿಚ್ಚ ಸುದೀಪ್ ಅವರೇ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಸುದೀಪ್ ಹಾಡಿದ್ದ ‘ನೀ ನನ್ನ ಜೀವ …’ ಎಂಬ ಫ್ರೆಂಡ್‌ಶಿಪ್ ಹಾಡು ಅತಿ ಹೆಚ್ಚು ವೀಕ್ಷಣೆಯಾಗಿ ಟ್ರೆಂಡಿಂಗ್‌ನಲ್ಲಿದೆ.
ಚಿತ್ರದ ಬಗ್ಗೆ ಮಾತನಾಡಿದ ಚಂದನ್, ಇದೊಂದು ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ಆದರೂ ಫ್ರೆಂಡ್‌ಶಿಪ್, ಲವ್ ಹೀಗೆ ಎಲ್ಲಾ ಥರದ ಮನರಂಜನೆ ಒಳಗೊಂಡಿದೆ. ‘ಫ್ಲರ್ಟ್’ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ. ಎಲ್ಲರ ಡವ್ನಲ್ಲೂ ಒಂದೊಂದು ಲವ್ ಇರುತ್ತದೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ವ್ಯಾಲ್ಯೂ ಇದೆ. ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ನೀವೆಲ್ಲ ಚಿತ್ರ ನೋಡಿ ಹರಸುತ್ತೀರೆಂಬ ನಂಬಿಕೆಯಿಂದ ರೀ-ರಿಲೀಸ್ ಮಾಡುತ್ತಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ರಂಗಗೀತೆ ಪರಂಪರೆಗೆ ಹೊಸಲೇಪನ – ನಟಿ, ನಿರ್ದೇಶಕಿ ಸುಷ್ಮಾ ವೀರ್ ಹೊಸ ಸಾಹಸ
ಈ ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ಅಭಿನಯಿಸಿದ್ದು, ಜಡ್ಜ್ ಪಾತ್ರದಲ್ಲಿ ಹಿರಿಯ ನಟ ಅವಿನಾಶ್, ಸ್ನೇಹಿತನಾಗಿ ಗಿರೀಶ್ ಶಿವಣ್ಣ, ಹಿರಿಯ ನಟಿ ಶೃತಿ, ಸಾಧು ಕೋಕಿಲ, ವಿನಯ್ ಗೌಡ ನಟಿಸಿದ್ದಾರೆ. ಸುದೀಪ್ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದು, ಜಸ್ಸಿ ಗಿಫ್ಟ್ ಉಳಿದ 3 ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಹೆಚ್.ಸಿ. ವೇಣು ಅವರ ಛಾಯಾಗ್ರಹಣ ಚಿತ್ರಕ್ಕಿದೆ.ಇದನ್ನೂ ಓದಿ: 3 ದಿನದಲ್ಲಿ 75 ಕೋಟಿ ದಾಟಿದ ‘ಕಾಕ್‌ಟೇಲ್ 2’; 100 ಕೋಟಿ ಕ್ಲಬ್‌ನತ್ತ ಶಾಹೀದ್-ಕೃತಿ-ರಶ್ಮಿಕಾ ಚಿತ್ರ
