ಬಾಲಿವುಡ್ ಸ್ಟಾರ್ ಶಾಹೀದ್ ಕಪೂರ್, ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ `ಕಾಕ್‌ಟೇಲ್ 2′ ಬಾಕ್ಸ್ ಆಫೀಸ್‌ನಲ್ಲಿ 75 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಜೂ.19ರಂದು ತೆರೆಕಂಡ `ಕಾಕ್‌ಟೇಲ್ 2′ (Cocktail-2) ಕೇವಲ ಮೂರೇ ದಿನಗಳಲ್ಲಿ 75 ಕೋಟಿ ರೂ. ಕಲೆಹಾಕಿ, 100 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಇದನ್ನೂ ಓ ದಿ:ಕಾಕ್‌ಟೇಲ್ 2ನಲ್ಲಿ ರಶ್ಮಿಕಾ ಮೂಲೆಗುಂಪು – ರೊಚ್ಚಿಗೆದ್ರು ಫ್ಯಾನ್ಸ್

ಹೋಮಿ ಅದಾಜಾನಿಯಾ (Homi Adajania) ನಿರ್ದೇಶನದ ಈ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಧೂಳೆಬ್ಬಿಸುತ್ತಿದೆ. ಮೊದಲ ದಿನ 13.5 ಕೋಟಿ ರೂ. ಗಳಿಸುವ ಮೂಲಕ ಸಾಧಾರಣ ಆರಂಭ ಪಡೆದಿದ್ದ ಈ ಚಿತ್ರ, ವೀಕೆಂಡ್‌ನಲ್ಲಿ ಧಮಾಕಾ ಮಾಡಿ, ಶನಿವಾರ (ಜೂ.20) 16.25 ಕೋಟಿ ರೂ. ಬಾಚಿಕೊಂಡಿತ್ತು. ವರದಿಯ ಪ್ರಕಾರ, ಮೂರು ದಿನಗಳಲ್ಲಿ ಬರೋಬ್ಬರಿ 76.25 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಥಿಯೇಟರ್‌ಗಳಲ್ಲಿ `ಕಾಕ್‌ಟೇಲ್ 2′ ಚಿತ್ರಕ್ಕೆ ಭರ್ಜರಿ ಕಾಂಪಿಟೇಷನ್ ಎದುರಾಗಿದೆ. ಬಾಬಿ ಡಿಯೋಲ್ ನಟನೆಯ `ಬಂದರ್’, ಹಾಲಿವುಡ್‌ನ ಹಾರರ್ ಸಿನಿಮಾ `ಅಬ್ಸೆಷನ್’ ಚಿತ್ರಗಳ ಪೈಪೋಟಿಯ ನಡುವೆಯೂ ಶಾಹೀದ್ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದೆ.

14 ವರ್ಷಗಳ ಹಿಂದೆ ಬಂದ `ಕಾಕ್‌ಟೇಲ್’ ಸಿನಿಮಾ, ವಿಭಿನ್ನ ಸ್ವಭಾವದ ಇಬ್ಬರು ಮಹಿಳೆಯರು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಕಮಿಟ್‌ಮೆಂಟ್ ಇಷ್ಟಪಡದ ಪಡ್ಡೆಹುಡುಗನ ಕಥೆಯನ್ನು ಹೊಂದಿತ್ತು. ಆದರೆ ಈ ಸೀಕ್ವೆಲ್ ಸಂಪೂರ್ಣ ವಿಭಿನ್ನ ದಿಕ್ಕಿನಲ್ಲಿ ಸಾಗಲಿದ್ದು, ಮೂರು ಪ್ರಮುಖ ಪಾತ್ರಗಳ ನಡುವಿನ ಕಥೆ ಹೇಳುತ್ತದೆ. 2012ರಲ್ಲಿ ಬಿಡುಗಡೆಯಾಗಿದ್ದ `ಕಾಕ್‌ಟೇಲ್’ ಚಿತ್ರದಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಮುಖ್ಯ ಪಾತ್ರದಲ್ಲಿದ್ದರು. ಈಗ ಬಂದಿರುವ ಸೀಕ್ವೆಲ್‌ನಲ್ಲಿ ಶಾಹೀದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಭೀಕರ ಹಲ್ಲೆ
