ಬಾಗಲಕೋಟೆ: ಮುಧೋಳ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ದಿಢೀರ್ ಭೂ ಕುಸಿತ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸುಮಾರು 20 ಅಡಿ ಆಳ 10 ಅಡಿ ಅಗಲ ಭೂಮಿ ಕುಸಿದಿದೆ. ಭೂಮಿ ದಿಢೀರ್ ಬಾಯಿ ತೆರೆದಿರುವ ದೃಶ್ಯ ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಭೂ ಕುಸಿತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಏಕೈಕ ಡಿಸಿಎಂ – ಸಿದ್ದರಾಮಯ್ಯ ಪಟ್ಟಿಗೆ ಮಣಿದ ಹೈಕಮಾಂಡ್
ಭೂ ವಿಜ್ಞಾನಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಭೂ ಕುಸಿತದ ಹಿಂದಿನ ಕಾರಣವನ್ನು ಪತ್ತೆಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಇಂದು ಡಿಕೆಶಿ ಪ್ರಮಾಣವಚನ – ಯಾರಿಗೆಲ್ಲಾ ಮಂತ್ರಿಸ್ಥಾನ?
