ಮುಂಬೈ: ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರನ್ನು ಗೋಲ್ಡ್ ಡಿಗ್ಗರ್ (Gold Digger) ಎಂದು ಟ್ರೋಲ್ ಮಾಡಿದವರಿಗೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಖಡಕ್ ಉತ್ತರ ನೀಡಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾವಿಬ್ಬರು ಡೇಟಿಂಗ್ ಮಾಡುತ್ತಿದ್ದಾಗ ಸುಶ್ಮಿತಾ ಎಲ್ಲದಕ್ಕೂ ಹಣ ಪಾವತಿಸುತ್ತಿದ್ದಳು, ನಾನೊಬ್ಬ ಬಾಯ್‌ಫ್ರೆಂಡ್ ತರ ಆಕೆಯ ಖರ್ಚಿನಲ್ಲಿ ಬದುಕುತ್ತಿದ್ದೆ. ಸುಶ್ಮಿತಾ ಗೋಲ್ಡ್ ಡಿಗ್ಗರ್ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 1.10 ಕೋಟಿ ಹೂಡಿಕೆಗೆ ಸಿಕ್ಕಿದ್ದು 34.97 ಕೋಟಿ – 3.10 ಕೋಟಿ ಬಾಚಿಕೊಂಡ ಸೂರ್ಯವಂಶಿ!

ಜನರು ಆಕೆಯನ್ನು ಗೋಲ್ಡ್ ಡಿಗ್ಗರ್ ಎಂದು ಕರೆದಾಗ ನನಗೆ ತುಂಬಾ ಬೇಸರವಾಗಿತ್ತು. ನಮ್ಮಿಬ್ಬರ ನಡುವಿನ ಸಂಬಂಧ ತುಂಬಾ ವಿಶೇಷವಾಗಿತ್ತು. ಆದರೆ ಅದು ಹಣದಾಸೆಗೆ ಆಗಿರಲಿಲ್ಲ. ಸುಶ್ಮಿತಾ ತುಂಬಾ ಸುಂದರಿ, ಶ್ರೀಮಂತ ಮಹಿಳೆ. ನನಗೆ ತಿಳಿದಿರುವಂತೆ ಅವಳ ಬಳಿ ಹೆಚ್ಚು ವಜ್ರಗಳಿವೆ. ಎಲ್ಲವನ್ನೂ ಸ್ವತಃ ದುಡಿದು ಮಾಡಿಸಿಕೊಂಡಿದ್ದಾಳೆ. ನಾವು ಒಟ್ಟಿಗೆ ಇದ್ದಾಗ ಪ್ರತಿಯೊಂದು ಖರ್ಚುಗಳನ್ನೂ ಸುಶ್ಮಿತಾ ನೋಡಿಕೊಳ್ಳುತ್ತಿದ್ದಳು. ಹೋಟೆಲ್ ಬಿಲ್‌ನಿಂದ ಹಿಡಿದು ಪ್ರವಾಸದ ಖರ್ಚಿನವರೆಗೆ ಎಲ್ಲವನ್ನೂ ಪಾವತಿಸುತ್ತಿದ್ದಳು. ನಾನು ಯಾವುದಕ್ಕೂ ಹಣ ನೀಡಬೇಕಾಗಿರಲಿಲ್ಲ. ಕೇವಲ ಆಕೆಯ ಜೊತೆಗೆ ಬಾಯ್‌ಫ್ರೆಂಡ್ ಥರ ಇದ್ದೆ ಅಷ್ಟೇ ಎಂದಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಾವು ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ ನೆಟ್ಟಿಗರು ಲಲಿತ್ ಮೋದಿ ಅವರ ಆಸ್ತಿಯನ್ನು ನೋಡಿ ಸುಶ್ಮಿತಾ ಪ್ರೀತಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು.ಇದನ್ನೂ ಓದಿ: ತ್ವಿಶಾ ಶರ್ಮಾ ಕೇಸ್ | ಸಾಕ್ಷಿಯ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ – ವಿಡಿಯೋ ವೈರಲ್
View this post on Instagram
ಆಗ ಸುಶ್ಮಿತಾ ಸೇನ್, ನನಗೆ ಚಿನ್ನದ ಮೇಲಲ್ಲ, ವಜ್ರದ ಮೇಲೆ ಆಸೆ. ಅದನ್ನು ನಾನೇ ಸ್ವತಃ ಖರೀದಿಸಬಲ್ಲೆ ಎಂದು ಟ್ರೋಲರ್ಸ್‌ಗಳಿಗೆ ತಕ್ಕ ಉತ್ತರ ನೀಡಿದ್ದರು. ಇದೀಗ ಲಲಿತ್ ಮೋದಿ ಅವರೇ ಈ ವಿಷಯವನ್ನು ಸ್ಪಷ್ಟಪಡಿಸುವ ಮೂಲಕ ಸುಶ್ಮಿತಾ ಬೆಂಬಲಕ್ಕೆ ನಿಂತಿದ್ದಾರೆ.

2022ರ ಜುಲೈನಲ್ಲಿ ಡೇಟಿಂಗ್ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದ ಜೋಡಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಬಳಿಕ ಅದೇ ವರ್ಷ ಅಕ್ಟೋಬರ್ ಹೊತ್ತಿಗೆ ಲಲಿತ್ ಮೋದಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬಯೋ ಮತ್ತು ಫೋಟೋವನ್ನು ಬದಲಾಯಿಸುವ ಮೂಲಕ ತಾವು ಬೇರೆಯಾಗಿರುವುದರ ಮುನ್ಸೂಚನೆ ನೀಡಿದ್ದರು. ಸದ್ಯ ಸುಶ್ಮಿತಾ ಸೇನ್ ತಮ್ಮ ಹಳೆಯ ಸ್ನೇಹಿತ ರೋಹ್ಮನ್ ಶಾಲ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳು ಸಿಗಲ್ಲ! – ತಜ್ಞರು ನೀಡಿದ ಆಘಾತಕಾರಿ ಎಚ್ಚರಿಕೆ ಏನು?
ಏನಿದು ಗೋಲ್ಡ್ ಡಿಗ್ಗರ್?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಪ್ರೀತಿಸುವ ಅಥವಾ ಅವರೊಂದಿಗೆ ಸಂಬಂಧ ಹೊಂದುವ ನೆಪದಲ್ಲಿ ಅವರ ಹಣ, ಆಸ್ತಿ ಹಾಗೂ ಐಷಾರಾಮಿ ಜೀವನದ ಲಾಭ ಪಡೆಯುವುದನ್ನು ಗೋಲ್ಡ್ ಡಿಗ್ಗರ್ ಎನ್ನುತ್ತಾರೆ. ಅದರಂತೆ ಸುಶ್ಮಿತಾ ಸೇನ್ ಕೂಡ ಲಲಿತ್ ಮೋದಿ ಅವರ ಆಸ್ತಿಯನ್ನು ನೋಡಿ ಪ್ರೀತಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ, ಗೋಲ್ಡ್ ಡಿಗ್ಗರ್ ಎಂದಿದ್ದರು.
