ನವದೆಹಲಿ: ರಾಜಸ್ಥಾನ ರಾಯಲ್ಸ್ (RR) ತಂಡದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) 2026ರ ಐಪಿಎಲ್ (IPL) ಟೂರ್ನಿಯಲ್ಲಿ ತಮ್ಮ ಐತಿಹಾಸಿಕ ಮತ್ತು ಸ್ಫೋಟಕ ಪ್ರದರ್ಶನದ ಮೂಲಕ ಒಟ್ಟು 3.10 ಕೋಟಿ ರೂ. ಗಳಿಸಿದ್ದಾರೆ.
2025 ರ ಹರಾಜಿನಲ್ಲಿ 1.10 ಕೋಟಿ ರೂ.ಗೆ ಹರಾಜಿ ತಂಡದಲ್ಲಿ ರಿಟೇನ್ ಆಗಿದ್ದ ಸೂರ್ಯವಂಶಿ, ಟೂರ್ನಿಯುದ್ದಕ್ಕೂ ರನ್ ಮಳೆ ಹರಿಸಿ ಪಡೆದ ನಗದು ಬಹುಮಾನಗಳು, ಮ್ಯಾಚ್ ಫೀ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳಿಂದಾಗಿ ಅವರ ಒಟ್ಟು ಗಳಿಕೆ 3.10 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಯಾವುದಕ್ಕೆ ಎಷ್ಟು ನಗದು?
ಆರೆಂಜ್ ಕ್ಯಾಪ್: ಟೂರ್ನಿಯಲ್ಲಿ ಅತ್ಯಧಿಕ 776 ರನ್ ಗಳಿಕೆ – 10 ಲಕ್ಷ ರೂ.
ಟೂರ್ನಿಯ ಶ್ರೇಷ್ಠ ಆಟಗಾರ (Most Valuable Player): ಒಟ್ಟು 436.5 ಪಾಯಿಂಟ್ಸ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಗೌರವ – 15 ಲಕ್ಷ ರೂ.
ಸೂಪರ್ ಸ್ಟ್ರೈಕರ್: ಇಡೀ ಟೂರ್ನಿಯಲ್ಲಿ 237.3 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಚಚ್ಚಿದ ಹಿರಿಮೆ – ಟಾಟಾ ಸಿಯೆರಾ ಕಾರು
ಸೂಪರ್ ಸಿಕ್ಸರ್: ಪ್ರಸಕ್ತ ಸರಣಿಯಲ್ಲಿ ಬರೋಬ್ಬರಿ 75 ಸಿಕ್ಸರ್‌ಗಳನ್ನು ಸಿಡಿಸಿ ಈ ಪ್ರಶಸ್ತಿ ಜಯಿಸಿದ್ದಾರೆ – 10 ಲಕ್ಷ ರೂ.
ಉದಯೋನ್ಮುಖ ಆಟಗಾರ (Emerging Player of the Season): ಟೂರ್ನಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ಇವರ ಪಾಲಾಗಿದ್ದು 10 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಇದನ್ನೂ ಓದಿ: 15 ವರ್ಷಕ್ಕೆ 5 ಪ್ರಶಸ್ತಿ – 45 ಲಕ್ಷ ಕ್ಯಾಶ್ ಜೊತೆ ಸೂರ್ಯವಂಶಿಗೆ ಸಿಕ್ತು ಸಿಯೆರಾ ಕಾರು!

1.10 ಕೋಟಿ ರೂ. ಅಲ್ಲದೇ ರಾಜಸ್ಥಾನ ತಂಡ ಪ್ರತಿ ಪಂದ್ಯ ಆಡಿದ್ದಕ್ಕೆ 7.5 ಲಕ್ಷ ರೂ. ಹಣದ ಜೊತೆ ಪ್ಲೇ ಆಫ್ ಆಡಿದ್ದಕ್ಕೆ ಹೆಚ್ಚುವರಿ ನಗದು ನೀಡುತ್ತದೆ. ಹೀಗಾಗಿ ಒಟ್ಟು 16 ಪಂದ್ಯಗಳಿಂದ 1.20 ಕೋಟಿ ರೂ. ನಗದನ್ನು ಸೂರ್ಯವಂಶಿ ಪಡೆದಿದ್ದಾರೆ. ಇಷ್ಟೇ ಅಲ್ಲದೇ ವಿವಿಧ ಪಂದ್ಯಗಳಲ್ಲಿ ಗಳಿಸಿದ ‘ಪ್ಲೇಯರ್ ಆಫ್ ದಿ ಮ್ಯಾಚ್’ ಮತ್ತು ಇತರ ದೈನಂದಿನ ನಗದು ಬಹುಮಾನಗಳು ಸೇರಿ ಒಟ್ಟು ಮೊತ್ತ 3.10 ಕೋಟಿ ರೂ. ದಾಟಿದೆ.
ಕೇವಲ 15ನೇ ವಯಸ್ಸಿನಲ್ಲಿ 776 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ದಾಖಲೆ ಬರೆದ ಸೂರ್ಯವಂಶಿ ಪವರ್-ಪ್ಲೇ ಓವರ್‌ಗಳಲ್ಲೇ ಬರೋಬ್ಬರಿ 500ಕ್ಕೂ ಹೆಚ್ಚು ರನ್ ಚಚ್ಚಿದ ವಿಶ್ವದ ಮೊದಲ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಸೂರ್ಯವಂಶಿ ಬಗ್ಗೆ ಎಬಿಡಿ ಬಳಿ ಕೊಹ್ಲಿ ಹೇಳಿದ್ದೇನು?- ರಿವೀಲ್ ಮಾಡಿದ ಡಿವಿಲಿಯರ್ಸ್
ರಾಜಸ್ಥಾನ ರಾಯಲ್ಸ್ ಹೂಡಿಕೆ ಮಾಡಿದ 1.10 ಕೋಟಿ ರೂ.ಗೆ ಪ್ರತಿಯಾಗಿ ವೈಭವ್ ಸೂರ್ಯವಂಶಿ ಮೈದಾನದಲ್ಲಿ ನೀಡಿದ ಪ್ರದರ್ಶನದ ಮೌಲ್ಯ ಬರೋಬ್ಬರಿ 34.97 ಕೋಟಿ ರೂ. ಎಂದು ವಿಶ್ಲೇಷಿಸಲಾಗಿದೆ. ಇದರಿಂದಾಗಿ ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ‘ಮನಿ-ಮ್ಯಾಜಿಕ್’ ಹೂಡಿಕೆಯಾಗಿ ಹೊರಹೊಮ್ಮಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್‌ಗೆ ಐಸ್ ಕ್ಯೂಬ್ ಸುರಿದು ಸಂಭ್ರಮಿಸಿದ ಸಾಲ್ಟ್, ಡೇವಿಡ್
