ರಾಮನಗರ: ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ (D.K Shivakumar) ಅವರ ಮನೆ ದೇವರಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಕೆಂಕೆರಮ್ಮ ದೇವಿಗೆ ಅಭಿಷೇಕ ನೆರವೇರುತ್ತಿದೆ. ಡಿಕೆಶಿಗೆ ಒಳಿತಾಗಲಿ, ರಾಜ್ಯದ ಮುಖ್ಯಮಂತ್ರಿ ಆಗಿ ಉತ್ತಮ ರೀತಿಯ ಆಡಳಿತ ನೀಡಲಿ ಎಂದು ದೇವಾಲಯದ ಸಮಿತಿಯಿಂದ ಪ್ರಾರ್ಥಿಸಲಾಗಿದೆ. ಇದನ್ನೂ ಓದಿ: ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ
ಕೆಂಕೆರಮ್ಮಗೆ ವಿಶೇಷ ಪೂಜೆ ವೇಳೆ ಬಲಗಡೆ ಹೂ ಪ್ರಸಾದವಾಗಿದೆ. ಪೂಜೆ ಬಳಿಕ ಡಿಕೆಶಿ ಅಭಿಮಾನಿಗಳಿಂದ ಪ್ರಸಾದ ವಿತರಣೆ ನಡೆಯಿತು. ಇದನ್ನೂ ಓದಿ: ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಏಕೈಕ ಡಿಸಿಎಂ – ಸಿದ್ದರಾಮಯ್ಯ ಪಟ್ಟಿಗೆ ಮಣಿದ ಹೈಕಮಾಂಡ್
