– ವೀಡಿಯೋ ಕಾಲ್ ಮಾಡಿ ಅಭಿಮಾನಿಗೆ ಧೈರ್ಯ ಹೇಳಿದ ಕೆಜಿಎಫ್ ಸ್ಟಾರ್
ಶಿವಮೊಗ್ಗ: ರೆಕ್ಟಲ್ ಕ್ಯಾನ್ಸರ್‌ನಿಂದ (Rectal Cancer) ಬಳಲುತ್ತಿದ್ದ ಅಭಿಮಾನಿಯ ಆರೋಗ್ಯವನ್ನು ಕೆಜಿಎಫ್ ಸ್ಟಾರ್ ಯಶ್ (Actor Yash) ವಿಚಾರಿಸಿದ್ದಾರೆ.
ಶಿವಮೊಗ್ಗ ಯಶ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೀಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿ, ಅಭಿಮಾನಿಗೆ ಯಶ್ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: IPL ಗೆಲುವಿನ ಬೆನ್ನಲ್ಲೇ ವೃಂದಾವನಕ್ಕೆ ಭೇಟಿ ನೀಡಿದ ವಿರುಷ್ಕಾ
ಸುನಿಲ್ ಕುಮಾರ್ ಕಳೆದ 4-5 ತಿಂಗಳಿಂದ ರೆಕ್ಟಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಭಗವಂತನಿಗೆ ಪ್ರಾರ್ಥಿಸೋಣ, ಧೈರ್ಯ ಕಳೆದುಕೊಳ್ಳುವುದು ಬೇಡ ಎಂದು ಯಶ್ ಮಾತನಾಡಿದ್ದಾರೆ.
ವಿಷಯ ಇವತ್ತು ಗೊತ್ತಾಯಿತು. ತಕ್ಷಣ ಮಾತಾಡುತ್ತಿದ್ದೇನೆ. ಹೋಪ್ ಕಳೆದುಕೊಳ್ಳುವುದು ಬೇಡ, ಧೈರ್ಯವಾಗಿರಿ ಎಂದು ಹಾಸಿಗೆ ಹಿಡಿದಿರುವ ಅಭಿಮಾನಿಗೆ ಯಶ್ ಧೈರ್ಯದ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ರವೀನಾ ಟಂಡನ್ ತಾಯಿಯ 25 ಲಕ್ಷ ಮೌಲ್ಯದ ಆಭರಣ ಕಳವು – ಸಹಾಯದ ನೆಪದಲ್ಲಿ ಬಂದವಳಿಂದಲೇ ಕನ್ನ
