ಬೀದರ್: ಎಲ್ಲರೂ ಮದುವೆಗೆ ಹೋಗಿದ್ದಾಗ ಮನೆಯ ಬೀಗ ಮುರಿದು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳು, 1.50 ಲಕ್ಷ ನಗದು ದೋಚಿ (House Theft) ಕಳ್ಳರು ಪರಾರಿಯಾದ ಘಟನೆ ಬೀದರ್ (Bidar) ತಾಲೂಕಿನ ಚಿದ್ರಿ (Chidri) ಗ್ರಾಮದಲ್ಲಿ ನಡೆದಿದೆ.
150 ಗ್ರಾಂ ಚಿನ್ನದ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಮತ್ತು 1.50 ಲಕ್ಷ ನಗದು ದೋಚಿ ಖದೀಮರು ಪರಾರಿಯಾಗಿದ್ದಾರೆ. ಮನೆಯವರು ಎಲ್ಲರೂ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿದ್ದಾಗ ರಾಜಕುಮಾರ ಬಿರಾದರ್ ಚಿದ್ರಿ ಎಂಬವರ ಮನೆಯ ಬೀಗ ಮತ್ತು ಅಲಮರಿ ಬೀಗ ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಮಧ್ಯಾಹ್ನ ಮದುವೆ ಸಮಾರಂಭಕ್ಕೆ ಹೋಗಿ ರಾತ್ರಿ ಮನೆಗೆ ಬಂದಾಗ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಟ್ರಂಪ್ ಧಮಕಿಗೆ ಇರಾನ್ ಕೆಂಡ: ಶಾಂತಿ ಮಾತುಕತೆ ವೇದಿಕೆಯಿಂದ ಇರಾನ್ ಹೊರ ನಡೆದಿದ್ದು ಯಾಕೆ?
ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಗಾಂಧಿಗಂಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಆರಂಭದಲ್ಲೇ ಮಾವಿನ ಹಣ್ಣಿನ ದರ ಕುಸಿತ – ಬೆಂಬಲ ಬೆಲೆಗೆ ಆಗ್ರಹಿಸಿ ಇಂದು ಕೋಲಾರ ಬಂದ್
