ಮಂಗಳೂರು: ಮಂಗಳೂರು-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಫಲ್ಗುಣಿ ನದಿಯ ಸೇತುವೆ ಕುಸಿದು ಬಿದ್ದಿದ್ದು, ಇದೀಗ ಮೂರು ತಿಂಗಳ ಹಿಂದೆ ಸ್ಥಳೀಯರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.
ಫಲ್ಗುಣಿ ನದಿಗೆ ಕಟ್ಟಲಾಗಿದ್ದ ಸೇತುವೆ ಸೋಮವಾರ ಸಂಜೆ ಕುಸಿದು ಬಿದ್ದಿದೆ. ಈ ಸೇತುವೆಯು ಬಂಟ್ವಾಳ-ಕುಪ್ಪೆಪದವು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತಿತ್ತು. ನಿತ್ಯ ಅನೇಕ ವಾಹನಗಳು ಸಂಚರಿಸುತ್ತಿದ್ದವು. ಪವಾಡ ಸದೃಶ ಎಂಬಂತೆ ಸೇತುವೆ ಯಾರಿಗೂ ತೊಂದರೆ ಕೊಡದೆ ಕುಸಿದು ಬಿದ್ದಿದೆ. ನೀರು ಕಡಿಮೆಯಾದಾಗ ಅಕ್ರಮವಾಗಿ ಮರುಳುಗಾರಿಕೆ ಮಾಡಿದ್ದರ ಬಗ್ಗೆ ಸ್ಥಳೀಯರು ಮೂರು ತಿಂಗಳ ಹಿಂದೆ ಮಾತನಾಡಿಕೊಂಡಿದ್ದ ವಿಡಿಯೋ ಈಗ ವೈರಲ್ ಆಗಿದೆ.
Advertisement
Advertisement
ವಿಡಿಯೋದಲ್ಲೇನಿದೆ:
ಸೇತುವೆಯ ಮಧ್ಯದಲ್ಲಿ ಬಿರುಕು ಬಿಟ್ಟಿದ್ದನ್ನು ತೋರಿಸಿ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಸಿ ಸ್ಥಳೀಯ ನಾಗರಿಕ ಹಮೀದ್ ಮಲ್ಲರಪಟ್ನ ಎಂಬವರು ತರಾಟೆಗೆ ತೆಗೆದುಕೊಂಡಿದ್ದರು.
Advertisement
`ನೋಡಿ ಈ ಸೇತುವೆ ವಿಚಾರ ನಿಮಗೆ ಗೊತ್ತಾ, ನೀವು ದಿನನಿತ್ಯ ಓಡಾಡುತ್ತೀರಿ ಆದರೆ ಇದರಲ್ಲಿನ ಬಿರುಕುಗಳನ್ನು ಎಂದಾದರೂ ಗಮನಿಸಿದ್ದೀರಾ?. ಈ ಸೇತುವೆ ಬಿರುಕು ಬಿಟ್ಟಿದ ವಿಚಾರ ನನಗೆ ಯಾವಾಗಲೋ ಗೊತ್ತು, ನೀವು ವಿಡಿಯೋ ಮಾಡಿದರೆ, ಮಾಡಿ ನನಗೆನು ಭಯವಿಲ್ಲ ಇಲ್ಲಿರುವುದನ್ನೇ ನಾನು ತೋರಿಸುತ್ತಿರುವುದು, ನೋಡಿ ಈ ಭಾಗದಲ್ಲಿ ಗ್ಯಾಪ್ ಎಷ್ಟಿದೆ ಅಲ್ಲಿ ಮತ್ತೊಂದು ಭಾಗದಲ್ಲಿ ಹೇಗೆ ಒಂದಕ್ಕೊಂದು ಜೋಡಣೆಯಾಗಿದೆ. ಬಿರುಕು ಬಿಡುವುದಕ್ಕೆ ಕಾರಣ ಏನು? ನಿಮಗೇನಾದರೂ ಗೊತ್ತಾ? ಇಲ್ಲಿ ಅವ್ಯಾಹತವಾಗಿ ಮರಳು ತೆಗೆಯುತ್ತಿದ್ದರಿಂದ ಈ ಬಿರುಕು ಮೂಡಿದೆ ಮುಂದಿನ ದಿನಗಳಲ್ಲಿ ಸಂಪೂರ್ಣ ಕುಸಿದರೆ ಯಾರು ಹೊಣೆ ಎಂದು ಸ್ಥಳೀಯ ಭಾಷೆಯಲ್ಲಿಯೇ ಜನಪ್ರತಿನಿಧಿ ವಿರುದ್ಧ ಹಮೀದ್ ಕೆಂಡಾಮಂಡಲರಾಗಿದ್ದರು.
Advertisement
ಇದಾಗಿ ಮೂರು ತಿಂಗಳಲ್ಲಿ ಅಂದ್ರೆ ಸೋಮವಾರವೇ ಸೇತುವೆ ಬಿದ್ದಿದೆ. ಹಮೀದ್ ಮೂರು ತಿಂಗಳ ಹಿಂದೆ ಜನಪ್ರತಿನಿಧಿಗಳನ್ನು ತರಾಟೆಗೆತ್ತಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಫಲ್ಗುಣಿ ನದಿ ಸೇತುವೆ ಕುಸಿತ – ತಪ್ಪಿತು ಭಾರೀ ಅನಾಹುತ
https://www.youtube.com/watch?v=nQLKGQKij7k