ಪ್ಯಾರಿಸ್: 7 ಬಾರಿ ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿದ್ದ ಖ್ಯಾತ ಫುಟ್‍ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.
Advertisement
ಫ್ರೆಂಚ್ ಕಪ್ ಪಂದ್ಯಾಟಕ್ಕಾಗಿ ಪ್ಯಾರಿಸ್ ಸೇಂಟ್- ಜರ್ಮೈನ್ ತಂಡದ ಜೊತೆಗಿದ್ದ ವೇಳೆ ಮೆಸ್ಸಿ ಸೇರಿ ತಂಡದ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪ್ಯಾರಿಸ್ ಸೇಂಟ್- ಜರ್ಮೈನ್ ತಂಡಕ್ಕೆ ನಾಳೆ ಪಂದ್ಯ ನಿಗದಿಯಾಗಿತ್ತು. ಇಂದು ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ವರದಿಯಾಗಿದೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ
Advertisement
Advertisement
ಪ್ಯಾರಿಸ್ ಸೇಂಟ್- ಜರ್ಮೈನ್ ಪರ ಅಭ್ಯಾಸ ಆರಂಭಿಸುವ ಮುನ್ನ ಕೊರೊನಾ ಪರೀಕ್ಷೆ ಒಳಪಡಿಸಿದಾಗ ಮೆಸ್ಸಿ ಸೇರಿ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆಟಗಾರರೊಂದಿಗೆ ಒಬ್ಬ ತರಬೇತಿದಾರರಿಗೂ ಕೊರೊನಾ ಸೋಂಕು ಇರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಮೆಸ್ಸಿ ಸೇರಿ ಉಳಿದ ನಾಲ್ವರು ಆಟಗಾರರನ್ನು ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪ್ಯಾರಿಸ್ ಸೇಂಟ್- ಜರ್ಮೈನ್ ತಂಡದ ವೈದ್ಯಕೀಯ ವಿಭಾಗ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು
Advertisement