ಚೆನ್ನೈ: ತಮಿಳುನಾಡು (Tamilnadu) ವಿಧಾನಸಭಾ ಚುನಾವಣೆಯಲ್ಲಿ (Assembly Election) ಡಿಎಂಕೆ ಹಿಂದಿಕ್ಕಿ ಮುಂಚುಣಿಯಲ್ಲಿರುವ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ (TVK Vijay) ಅವರ ಹಳೆ ವಿಡಿಯೋವೊಂದು ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.
ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರು ಚುನವಾಣೆಗೂ ಮುನ್ನ ನಡೆಸಿದ್ದ ರ‍್ಯಾಲಿಯೊಂದರಲ್ಲಿ ಮಾತನಾಡುತ್ತಾ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಖಡಕ್ ಸಂದೇಶವೊಂದನ್ನು ನೀಡಿದ್ದರು. ಕಾಡಿನಲ್ಲಿ ನರಿ ಸೇರಿದಂತೆ ಹಲವಾರು ಪ್ರಾಣಿಗಳಿವೆ. ಆದರೆ ಸಿಂಹ ಮಾತ್ರ ಹೆಚ್ಚಾಗಿ ಒಂಟಿಯಾಗಿರುತ್ತದೆ. ಅದು ಒಂಟಿಯಾಗಿದ್ದರೂ ಕೂಡ ಅದು ಕಾಡಿನ ರಾಜ ಎಂದು ಹೇಳಿದ್ದರು. ಹೀಗೆ ಮಾತನಾಡಿದ್ದ 16 ಸೆಕೆಂಡುಗಳ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗೆಲುವಿನ ಬಗ್ಗೆ ನನ್ನ ಮಗನಿಗೆ 1% ಅನುಮಾನ ಕೂಡ ಇರಲಿಲ್ಲ – ವಿಜಯ್ ಬಗ್ಗೆ ತಂದೆ ಚಂದ್ರಶೇಖರ್ ಮಾತು
234 ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಗದ್ದುಗೆ ಏರಲು 118 ಬಹುಮತಗಳ ಅವಶ್ಯಕತೆಯಿದೆ. ಸಂಜೆ 5ರ ವೇಳೆಗೆ ಟಿವಿಕೆ 109 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇನ್ನೂ 9 ಸ್ಥಾನಗಳ ಅವಶ್ಯಕತೆಯಿದೆ.
ಸದ್ಯ ವಿಜಯ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದರ ನಡುವೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ 2011ರಿಂದಲೂ ಗೆಲುವು ಸಾಧಿಸಿದ್ದ ಕೊಳತ್ತೂರಿನಲ್ಲಿ ಸೋಲನುಭವಿಸಿದ್ದಾರೆ.ಇದನ್ನೂ ಓದಿ: ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ಗೆ ಸೋಲು – ದಳಪತಿ ಅಬ್ಬರಕ್ಕೆ ಡಿಎಂಕೆ ಧೂಳಿಪಟ
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.
ಕಳೆದ ಚುನಾವಣೆಯಲ್ಲಿ 10 ವರ್ಷಗಳ ನಂತರ ಎಐಎಡಿಎಂಕೆ (AIADMK) ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು. ಡಿಎಂಕೆ ಮೈತ್ರಿಕೂಟ: 159 ಸ್ಥಾನಗಳು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು. ಎಐಎಡಿಎಂಕೆ ಮೈತ್ರಿಕೂಟ: 75 ಸ್ಥಾನ ಗೆದ್ದಿದ್ದವು.ಇದನ್ನೂ ಓದಿ: ವಿಜಯ್ ಕಾರು ಚಾಲಕನ ಪುತ್ರನಿಗೆ ಖುಲಾಯಿಸಿದ ಅದೃಷ್ಟ – ಗೆಲುವಿನ ಸನಿಹದತ್ತ ಶಬರಿನಾಥನ್












