ಚಿತ್ರದುರ್ಗ: ದಲಿತರ ಮಠಕ್ಕೆ (Math) ನುಗ್ಗಿ ಸ್ವಾಮೀಜಿ ಮೇಲೆ ಹಲ್ಲೆನಡೆಸಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ (Aimangala) ಗ್ರಾಮದಲ್ಲಿ ನಡೆದಿದೆ.
ಶಿವಶರಣ ಹರಳಯ್ಯ ಮಠದ ಪೀಠಾಧಿಪತಿ ಬಸವ ಹರಳಯ್ಯ ಶ್ರೀಗಳ (Haralayya Swamiji) ಮೇಲೆ ಮಠದ ಪಕ್ಕದ ಜಮೀನಿನ ಮಾಲೀಕ ಸಿದ್ದೇಶ್ವರ ಮತ್ತು ಇತರರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಮುಂಬೈನಲ್ಲಿ `ಮರಣ ಮಳೆ’ಗೆ 8 ಬಲಿ – ಕುಸಿದ ರಸ್ತೆ, ಅಪ್ಪಳಿಸಿದ ಪ್ರವಾಹ, ಮುಂಬೈ-ಪುಣೆ ಸಂಪರ್ಕ ಕಟ್
ಕಳೆದ ಒಂದು ವರ್ಷದ ಹಿಂದೆಯಷ್ಟೇ ಮಠದ ಪ್ರವೇಶ ದ್ವಾರದ ಜಾಗದ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದ್ದು, ಹರಳಯ್ಯ ಶ್ರೀ, ಸಿದ್ದೇಶ್ವರ ಕುಟುಂಬದ ಮಧ್ಯೆ ಇರುವ ಜಮೀನಿನ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಭಾನುವಾರ ರಾತ್ರಿ ಮಠಕ್ಕೆ ನುಗ್ಗಿ ಹರಳಯ್ಯ ಶ್ರೀ ಹಾಗೂ ಅವರ ಮಠದ ಶಾಲಾ ಬಸ್ ಚಾಲಕ ಭೀಮರಾಜ್ ಮೇಲೆ ಮೂಗು, ಬಾಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಲಾಗಿದೆ. ಇದನ್ನೂ ಓದಿ: 5 ಬಾರಿ ಚಾಂಪಿಯನ್ ಬ್ರೆಜಿಲ್‌ಗೆ ಆಘಾತಕಾರಿ ಸೋಲು – ಫುಟ್‌ಬಾಲ್ ವೃತ್ತಿ ಜೀವನಕ್ಕೆ ನೇಮರ್ ಗುಡ್‌ಬೈ
ಹಲ್ಲೆ ಬಳಿಕ ಹರಳಯ್ಯ ಶ್ರೀಗಳು ದೂರು ನೀಡಲು ಐಮಂಗಲ ಠಾಣೆಗೆ ತೆರಳಿದ್ದು, ಈ ವೇಳೆ ಠಾಣೆಗೂ ನುಗ್ಗಿರುವ ಸಿದ್ದೇಶ್ವರ ಸಹಚರರು, ಶ್ರೀಗಳು ಕುಳಿತಿದ್ದ ಕುರ್ಚಿ ಮುರಿಯುವಂತೆ ಒದ್ದು, ದರ್ಪ ತೋರಿದ್ದಾರೆಂದು ಶ್ರೀಗಳು ಆರೋಪಿಸಿದ್ದಾರೆ.
ಸದ್ಯ ಗಾಯಗೊಂಡಿರುವ ಹರಳಯ್ಯ ಶ್ರೀ ಹಾಗೂ ಚಾಲಕ ಭೀಮರಾಜ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿದ್ರು ನಮಗೆ ರಕ್ಷಣೆ ಸಿಗುತ್ತಿಲ್ಲ. ನನ್ನಂತಹ ಸ್ವಾಮೀಜಿ ಮೇಲೆ ಈರೀತಿ ದೌರ್ಜನ್ಯ ನಡೆದರೆ, ಜನಸಾಮನ್ಯರ ಗತಿಯೇನು ಎಂಬ ಆತಂಕವನ್ನು ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಭಾರೀ ಗಾಳಿ, ಮಳೆ – ಮೂಡಿಗೆರೆ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ
ಪೊಲೀಸ್ ಠಾಣೆಗೆ ತೆರಳಿದ್ರೂ ನಮಗೆ ರಕ್ಷಣೆ ಸಿಗುತ್ತಿಲ್ಲ. ಐಮಂಗಲ ಪಿಎಸ್‌ಐ ನಮಗೆ ಭದ್ರತೆ ನೀಡುತ್ತಿಲ್ಲ. ಇಂತಹವರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಠಾಣೆ ಸಿಪಿಐ ಗುಡ್ಡಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಮಗಾದ ಅನ್ಯಾಯ ಬೇರೆ ಯಾವ ಕುಟುಂಬಕ್ಕೂ ಆಗಬಾರದು – ಡಿಸಿಎಂ ಬಳಿ ಕಣ್ಣೀರಿಟ್ಟ ಭುವನಾ ಕುಟುಂಬಸ್ಥರು
ಈ ವೇಳೆ ಸ್ಥಳೀಯರು ಪೊಲೀಸರ ನಿರ್ಲಕ್ಷ್ಯ ಹಾಗೂ ಜಮೀನಿನ ಮಾಲೀಕನ ದೌರ್ಜನ್ಯದ ವಿರುದ್ಧ ಕಿಡಿಕಾರಿದರು. ಸದ್ಯ ಹಲ್ಲೆ ನಡೆಸಿದ ಸಿದ್ದೇಶ್ವರ ಹಾಗೂ ಸಹಚರರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಕ್ಷಿಣ ಕಾಶ್ಮೀರ ಕೊಡಗಿನಲ್ಲಿ ಸಾವಿರಾರು ವರ್ಷಗಳ ನಾಗರಿಕತೆಯ ಹೆಜ್ಜೆ – ಕಬ್ಬಿಣ ಯುಗದ ಕುರುಹುಗಳು ಪತ್ತೆ
