– ಫಸ್ಟ್ ಟೈಮ್ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್‌ಗೆ ನಾರ್ವೆ ಲಗ್ಗೆ
ನ್ಯೂಯಾರ್ಕ್: 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು (Brazil Team) 2026ರ ಫಿಫಾ ವಿಶ್ವಕಪ್ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ವೆ ವಿರುದ್ಧ 1-2 ಗೋಲುಗಳ ಅಂತರದಿಂದ ಆಘಾತಕಾರಿ ಸೋಲು ಕಂಡಿದೆ. ಇದರ ಬೆನ್ನಲ್ಲೇ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಮರ್ (34) (Neymar) ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
The Moment #Neymar Broke Down in Tears 😭 After Brazil’s 🇧🇷
Elimination From
The World Cup at The Hands of
Norway, 🇳🇴 Which Will
Be Neymar’s Last
World Cup Appearance pic.twitter.com/5EXFxUAZHG— The 13th ١٣📜🪶Warrior (@strange16892330) July 5, 2026
ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ ನಾರ್ವೆಯ ಯುವ ತಾರೆ ಎರ್ಲಿಂಗ್ ಹಾಲೆಂಡ್, ಬ್ರೆಜಿಲ್ ತಂಡದ ವಿಶ್ವಕಪ್ ಕನಸನ್ನು ಭಗ್ನಗೊಳಿದ್ರು. ಇದರೊಂದಿಗೆ ನಾರ್ವೆ ಫಸ್ಟ್ ಟೈಮ್ ಫಿಫಾ ವಿಶ್ವಕಪ್ (FIFA World Cup) ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ನಾರ್ವೆ. 1990ರ ಬಳಿಕ ಬ್ರೆಜಿಲ್ ತಂಡವು ಟೂರ್ನಿಯಿಂದ ಇಷ್ಟು ಬೇಗ ಹೊರಬಿದ್ದಿರುವುದು ಇದೇ ಮೊದಲಾಗಿದೆ.
ಬ್ರೆಜಿಲ್ ಪರ ಅತಿ ಹೆಚ್ಚು ಗೋಲು ದಾಖಲೆ; ಕಣ್ಣೀರ ವಿದಾಯ
ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲುಗಳನ್ನುಗಳಿಸಿದ ದಾಖಲೆಯೊಂದಿಗೆ ನೇಮರ್ ವಿದಾಯ ಘೋಷಿಸಿದ್ದಾರೆ. ಪಂದ್ಯದ ಸೋಲಿನ ಬೆನ್ನಲ್ಲೇ ಭಾವುಕರಾದ ನೇಮರ್, ತಮ್ಮ 16 ವರ್ಷಗಳ ಸುದೀರ್ಘ ಅಂತಾರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು.

ನಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಎಲ್ಲಿಂದ ವೃತ್ತಿಜೀವನ ಆರಂಭಿಸಿದ್ದೆನೋ ಇಂದಿಗೆ ಇಲ್ಲೇ ಮುಗಿಸುತ್ತಿದ್ದೇನೆ ಎಂದು ಕಣ್ಣೀರಿಡುತ್ತಲೇ ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಪಂದ್ಯದ ಅಂತಿಮ ಕ್ಷಣದಲ್ಲಿ ನೇಮರ್ ಬ್ರೆಜಿಲ್ ಪರ ಏಕೈಕ ಗೋಲು ಗಳಿಸಿದರು. ಈ ಗೋಲು ಪಂದ್ಯದ ದ್ವಿತಿಯಾರ್ಧದ ಇಂಜುರಿ ಟೈಮ್‌ನಲ್ಲಿ (90+ 10ನೇ ನಿಮಿಷ) ದಾಖಲಾಯಿತು.
ಈ ಗೋಲಿನೊಂದಿಗೆ ನೇಮರ್, ಬ್ರೆಜಿಲ್ ಪರ ಒಟ್ಟು 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿ, ಮಾಜಿ ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿ ದೇಶದ ಸಾರ್ವಕಾಲಿಕ ಶ್ರೇಷ್ಠ ಗೋಲು ಸ್ಕೋರರ್ ಎಂಬ ದಾಖಲೆ ನಿರ್ಮಿಸಿದರು.
