– ಮೊರೆಬೆಟ್ಟದ ತಪ್ಪಲಿನಲ್ಲಿ 20 ಕ್ಕೂ ಹೆಚ್ಚು ಡಾಲ್ಮೆನ್ ಪತ್ತೆ
ಮಡಿಕೇರಿ: ಹಸಿರು ಪ್ರಕೃತಿಯ ಮಡಿಲಾಗಿ ಕಂಗೊಳಿಸುವ ದಕ್ಷಿಣ ಕಾಶ್ಮೀರ ಖ್ಯಾತಿಯ ಕೊಡಗು, ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯ ಹೆಜ್ಜೆ ಗುರುತುಗಳನ್ನು ಇನ್ನೂ ತನ್ನೊಳಗೆ ಅಡಗಿಸಿಕೊಂಡಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮೊರೆಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ದೊಡ್ಡಮೊಳತೆ ಮತ್ತು ಸುಲಿಮೊಳತೆ ಗ್ರಾಮದಲ್ಲಿ ಕಬ್ಬಿಣಯುಗದ ಕುರುಹುಗಳು ಪತ್ತೆಯಾಗಿವೆ.
In Karnataka’s Kodagu (Coorg) district, the Iron Age burial sites at the villages of Doddamolathe and Sulimolathe preserve a remarkable legacy of the region’s megalithic tradition.
Located on Morebetta hill, the Doddamolathe site, spread across 1.26 acres, contains over twenty… pic.twitter.com/hOQsXTnMy2
— Archaeological Survey of India (@ASIGoI) July 4, 2026
ಕಬ್ಬಿಣ ಯುಗದ ಮಾನವನ ಬದುಕು, ನಂಬಿಕೆ ಮತ್ತು ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿಟ್ಟಿರುವ ಪುರಾತನ ನೆನಪುಗಳ ತಾಣಗಳಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ – ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ಜೋಗ್‌ಫಾಲ್ಸ್‌ಗೆ ಜೀವಕಳೆ

ದೊಡ್ಡ ಮೊಳತೆ ಸಮಾಧಿ ತಾಣದಲ್ಲಿ, ಕಲ್ಲಿನ ವೃತ್ತಗಳಿಂದ ಆವೃತವಾಗಿರುವ 20ಕ್ಕೂ ಹೆಚ್ಚು ಡಾಲ್ಮೆನ್‌ಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಮೌನವಾಗಿ ಹೇಳುತ್ತಿವೆ. ಪ್ರತಿ ಡಾಲ್ಮೆನ್‌ನ ಪ್ರವೇಶದ್ವಾರದಲ್ಲಿ ಜೋಡಿಯಾಗಿ ನಿಂತಿರುವ ಬಾಗಿದ ಕಲ್ಲಿನ ಚಪ್ಪಡಿಗಳು ಕಮಾನುಗಳಂತೆ ಕಾಣುತ್ತವೆ. ಕೆಲವೊಮ್ಮೆ ಅವು ಮಾನವಾಕೃತಿಯ ಭಾವವನ್ನೂ ಮೂಡಿಸುತ್ತವೆ. ಆ ಕಾಲದ ಜನರ ಕಲಾತ್ಮಕತೆ ಮತ್ತು ವಾಸ್ತುಶಿಲ್ಪದ ಕೌಶಲ್ಯಕ್ಕೆ ಇವು ಸಾಕ್ಷಿಯಾಗಿವೆ. ಇದನ್ನೂ ಓದಿ: ರಾಮನ ಹೆಸರಿನಲ್ಲಿ 20 ಸಾವಿರ ಕೋಟಿ ಲೂಟಿ ಆಗಿದೆ ಅನ್ನೋ ಮಾಹಿತಿ ಇದೆ: ಮಲ್ಲಿಕಾರ್ಜುನ ಖರ್ಗೆ ಆತಂಕ

ಇಲ್ಲಿ ನಡೆದ ಉತ್ಖನನಗಳಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು, ಕಪ್ಪು-ಕೆಂಪು ಬಣ್ಣದ ಮಣ್ಣಿನ ಪಾತ್ರೆಗಳು, ಕೆತ್ತಿದ ಕಾರ್ನೆಲಿಯನ್ ಮಣಿಗಳು, ಚಿನ್ನದ ಲೇಪಿತ ತಾಮ್ರದ ತಟ್ಟೆ ಹಾಗೂ ಅಕ್ಕಿ ಹೊಟ್ಟುಗಳು… ಕಬ್ಬಿಣಯುಗದ ಜನರ ಜೀವನಶೈಲಿ, ಕೃಷಿ, ಸಂಸ್ಕೃತಿ ಮತ್ತು ಅಂತ್ಯಸಂಸ್ಕಾರದ ಆಚರಣೆಗಳ ಕುರಿತು ಅಮೂಲ್ಯ ಮಾಹಿತಿಯನ್ನ ನೀಡುತ್ತವೆ. ಇದಕ್ಕೆ ಸಮೀಪದಲ್ಲೇ ಇರುವ ಸುಲಿಮೊಳತೆ ಸಮಾಧಿ ತಾಣವೂ ಇದೇ ಮೆಗಾಲಿಥಿಕ್ ಸಂಪ್ರದಾಯದ ಮತ್ತೊಂದು ಅಪರೂಪದ ಅಧ್ಯಾಯವಾಗಿದೆ.

ಇಲ್ಲಿ ಕಂಡುಬರುವ ಡಾಲ್ಮೆನ್‌ಗಳು ಪೂರ್ವ ದಿಕ್ಕಿನ ಆರ್ಥೋಸ್ಟಾಟ್‌ಗಳ ಮೇಲೆ ನಿರ್ಮಿಸಲಾದ ವೃತ್ತಾಕಾರದ ಪೋರ್ಟ್ಹೋಲ್‌ಗಳು ಮತ್ತು ಅವುಗಳನ್ನು ಸುತ್ತುವರಿದ ನಿಂತ ಕಲ್ಲಿನ ಚಪ್ಪಡಿಗಳ ಮೂಲಕ ವಿಶಿಷ್ಟ ವಾಸ್ತುಶಿಲ್ಪವನ್ನು ಅನಾವರಣಗೊಳಿಸುತ್ತವೆ. ಇದನ್ನೂ ಓದಿ: ದಸರಾ ಅಂಬಾರಿ ಆನೆ ಅಭಿಮನ್ಯು ದಂತ ಭಗ್ನ

