– ಪೊಲೀಸರ ಎದುರು ಹೇಳಿಕೆ ದಾಖಲಿಸಿದ ನಟಿ
ಬೆಂಗಳೂರು: ನಟಿ ಕೃಷಿ ತಾಪಂಡ(Krishi Thapanda) ಅವರ ಮನೆಯಲ್ಲಿ ಉದ್ಯಮಿ, ಸ್ನೇಹಿತ ವೈಶಾಕ್(Vaishak Suicide) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿ ವೈಶಾಕ್ ಆರ್ಥಿಕ ಸಂಕಷ್ಟದಲ್ಲಿದ್ದು, ಆಗಾಗ ತಾನೇ ಹಣ ನೀಡುತ್ತಿದ್ದೆ ಎಂದು ನಟಿ ಪೊಲೀಸರ(Police Investigation) ಎದುರು ಹೇಳಿಕೆ ದಾಖಲಿಸಿದ್ದಾರೆ.
ತನಿಖೆ ವೇಳೆ ವೈಶಾಕ್ ಕಳೆದ ಕೆಲವು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು. ಇದೇ ಕಾರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪೊಲೀಸ್ ವಿಚಾರಣೆ ವೇಳೆ ನಟಿ ಕೃಷಿ ತಾಪಂಡ, ಸ್ನೇಹಿತನಿಗೆ ಆಗಾಗ ಆರ್ಥಿಕ ಸಹಾಯ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ. 40 ರಿಂದ 50 ಸಾವಿರ ರೂ.ವರೆಗೆ ಹಲವು ಬಾರಿ ಹಣ ವರ್ಗಾವಣೆ ಮಾಡಿದ್ದ ದಾಖಲೆಗಳನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ.ಇದನ್ನೂ ಓದಿ: ರಾಮನ ದೇಣಿಗೆ ಹಣದಲ್ಲಿ ಹೈಯಾಸಿ ಜೀವನ – ಗರ್ಲ್ಫ್ರೆಂಡ್‌ಗೆ ದುಬಾರಿ ಗಿಫ್ಟ್ ಕೊಟ್ಟಿದ್ದ ಅವಿನಾಶ್ ಶುಕ್ಲಾ
ಸಾವಿಗೆ ಕೆಲ ದಿನಗಳ ಮುಂಚೆಯಿಂದಲೇ ವೈಶಾಕ್ ನಟಿ ಕೃಷಿ ತಾಪಂಡ ಅವರ ಫ್ಲ್ಯಾಟ್‌ನಲ್ಲೇ ವಾಸವಾಗಿದ್ದರು. ಸದ್ಯ ಪ್ರಕರಣದ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನಿದು ಕೇಸ್?
ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ ಮನೆಯಲ್ಲಿ ಗೆಳೆಯ ಹಾಗೂ ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿತ್ತು. ವೈಶಾಖ್‌ಗೆ ಮದುವೆಯಾಗಿದ್ದರೂ, ಅವರು ಪತ್ನಿಯಿಂದ ದೂರವಾಗಿದ್ದರು. ಬಳಿಕ ಸ್ನೇಹಿತೆ ಕೃಷಿ ತಾಪಂಡ ಅವರ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ವೈಶಾಖ್ ಅವರ ಪತ್ನಿ, ಯಾರ ಮೇಲೂ ಅನುಮಾನವಿಲ್ಲ. ಆದರೆ ಆತ್ಮಹತ್ಯೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕೃಷಿ ತಾಪಂಡ ಕೂಡ ತನಿಖೆಯಲ್ಲಿ ಸಹಕರಿಸುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಗಾಗಿ ದೇವರ ಮೊರೆ ಹೋದ ರೈತರು – ಗ್ರಾಮದೇವರಿಗೆ 101 ತಂಬಿಗೆ ಜಲಾಭಿಷೇಕ
