ಚಿತ್ರದುರ್ಗ: ಆಷಾಢ ಮತ್ತು ಶ್ರಾವಣ ಮಾಸದ ಆಗಮನವಾಗುತ್ತಿದ್ದಂತೆ ಗ್ರಾಮೀಣ ಹಾಗೂ ಕಾಡಂಚಿನ ಜನರಲ್ಲಿ ಒಂದು ವಿಶೇಷ ಉತ್ಸಾಹ ಮೇಳೈಸಲಿದೆ. ಕೊಂಚ ಹದ ಮಳೆಯಾದರೆ ಸಾಕು, ಮುಂಜಾನೆ ಕೋಳಿ ಕೂಗುವ ಮುನ್ನವೇ ಎದ್ದು, ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ ಅರಣ್ಯ ಪ್ರದೇಶ ಹಾಗೂ ಜಮೀನುಗಳತ್ತ ಹೆಜ್ಜೆಹಾಕುತ್ತಾ ಜನರು ಅಣಬೆ (Mushroom) ಬೇಟೆಗೆ ಮುಂದಾಗುತ್ತಾರೆ.
ಹೌದು, ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಹಿರಿಯೂರು ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಳೆಗಾಲ ಬಂತೆಂದರೆ ಕಾಡಿನಲ್ಲಿ ನೈಸರ್ಗಿಕವಾಗಿ ದೊರೆಯುವ ಕವಳೆ ಹಣ್ಣು ಮತ್ತು ಕಾರೆ ಹಣ್ಣುಗಳು ನಿಸರ್ಗಪ್ರಿಯರನ್ನು ಕೈಬೀಸಿ ಕರೆಯುವುದರ ಜೊತೆಗೆ, ಪೌಷ್ಟಿಕತೆಯ ಆಗರವಾಗಿರುವ ಅಣಬೆ ಖಾದ್ಯಪ್ರಿಯರ ನಾಲಿಗೆಯನ್ನು ಸೆಳೆಯಲು ಸಜ್ಜಾಗಿರುತ್ತದೆ. ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 13 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ
ಬಯಲು ಸೀಮೆಯ ಜಮೀನುಗಳ ಬದುಗಳು, ತಂಗಡಿ ಗಿಡದ ಗುಂಪುಗಳು ಹಾಗೂ ಹುಲ್ಲುಗಾವಲು ಪ್ರದೇಶಗಳು ಅಣಬೆಗಳ ಆಗರವಾಗಿವೆ. ಕಾಯಂ ಅಣಬೆ ಬೇಟೆಗಾರರು ಮಳೆ ಬಂದ ಕೂಡಲೇ ನಿರ್ದಿಷ್ಟ ಜಾಗಗಳನ್ನು ಮೊದಲೇ ಗುರುತು ಮಾಡಿಕೊಂಡಿರುತ್ತಾರೆ. ಇನ್ನೂ ಜನಜನಿತ ಮಾತಿನಂತೆ, ಅಣಬೆಗಳು ಕೆಲವೊಮ್ಮೆ ಎಲ್ಲರಿಗೂ ಸುಲಭವಾಗಿ ಕಾಣಿಸುವುದಿಲ್ಲ, ಅವು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ (ಅವರನ್ನು ‘ರಾಹುಗಣ್ಣಿನವರು’ ಎಂದು ಕರೆಯಲಾಗುತ್ತದೆ) ಗೋಚರಿಸುತ್ತವೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಇದನ್ನೂ ಓದಿ: FIR ಹಿಂಪಡೆಯದಿದ್ದರೆ ಮತ್ತೆ ದೇಶವ್ಯಾಪಿ ಪ್ರತಿಭಟನೆ: CJP ಹೊಸ ವಾರ್ನಿಂಗ್
ಇದು ಅಣಬೆ ಬೇಟೆಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೃತಕ ಅಣಬೆಗಿಂತ, ಮಳೆಗಾಲದಲ್ಲಿ ಮಣ್ಣಿನ ತೇವಾಂಶದಿಂದ ನೈಸರ್ಗಿಕವಾಗಿ ಹುಟ್ಟಿಕೊಳ್ಳುವ ಈ ಕಾಡಿನ ಅಣಬೆಗಳ ರುಚಿಯೇ ಬೇರೆ. ಇದರ ಜೊತೆಗೆ ಇವುಗಳಲ್ಲಿ ಅಪಾರ ಪ್ರಮಾಣದ ಪೌಷ್ಟಿಕಾಂಶಗಳಿದ್ದು, ನೈಸರ್ಗಿಕ ಅಣಬೆ ಅತ್ಯುತ್ತಮ ಪೋಷಕಾಂಶಗಳ ಗಣಿಯಾಗಿದೆ. ಇದನ್ನೂ ಓದಿ: ಮೀಸಲಾತಿ ವಿರುದ್ಧ ಧ್ವನಿ ಎತ್ತಬೇಕಾಗಿದೆ: ಜೈನಗುರು ಪ್ರಮುಖ್ ಸಾಗರ್ ಮಹಾರಾಜ್
ಅಣಬೆಯನ್ನು ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ತೂಕ ನಿಯಂತ್ರಣಕ್ಕೆ ಬರುತ್ತದೆ ಮತ್ತು ಹೃದಯದ ಆರೋಗ್ಯ ಸುಧಾರಿಸುತ್ತದೆ. ಈ ವರ್ಷ ಮಳೆಯ ಅಭಾವವಿದ್ದರೂ ಕಾಲಕಾಲಕ್ಕೆ ಸರಿಯಾಗಿ ಪ್ರಕೃತಿ ತನ್ನ ಕೆಲಸ ಮಾಡುವುದನ್ನು ಬಿಡುವುದಿಲ್ಲ ಎಂಬುದಕ್ಕೆ ಇಂತಹ ನಿಸರ್ಗದ ವಿಸ್ಮಯಗಳೇ ಸಾಕ್ಷಿ. ಇದನ್ನೂ ಓದಿ: ಕೆಪಿಎಸ್‌ಸಿ ಅಕ್ರಮ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ
ಮಳೆಗಾಲದ ಈ ಸುಂದರ ವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ ಸಾಗಿ ಅಣಬೆಗಳನ್ನು ಹುಡುಕುವುದೇ ಒಂದು ಅನನ್ಯ ಮಜಾ. ಇದು ಕೇವಲ ಆಹಾರ ಸಂಗ್ರಹಣೆಯಲ್ಲ, ಬದಲಿಗೆ ಬಯಲು ಸೀಮೆಯ ಸಂಸ್ಕೃತಿ ಮತ್ತು ನಿಸರ್ಗದೊಂದಿಗೆ ಬೆರೆತಿರುವ ಗ್ರಾಮೀಣ ಬದುಕಿನ ಒಂದು ಸುಂದರ ಅಭಿವ್ಯಕ್ತಿ. ಇದನ್ನೂ ಓದಿ: ಪ್ರತ್ಯೇಕ ಬೆಡ್ & ಬ್ರೇಕ್‌ಫಾಸ್ಟ್ ವ್ಯವಸ್ಥೆ ಪರಿಚಯಿಸಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಮಳೆಗಾಲದ ಅಭಾವದಿಂದ ಅಣಬೆ ತುಂಬಾ ವಿರಳವಾಗಿದೆ. ಆದರೂ ತಿಥಿಗೆ ಸರಿಯಾಗಿ ಹುಟ್ಟುತ್ತವೆ. ಹಾಗಾಗಿ ಮುಂಜಾನೆ ಐದು ಗಂಟೆಗೆ ಸ್ನೇಹಿತರೊಂದಿಗೆ ಕಾಡು, ಹೊಲದ ಬದುವುಗಳಲ್ಲಿ ಹುಡುಕುತ್ತೇವೆ. ಹೆಚ್ಚು ಅಣಬೆ ದೊರೆಯಲು ಒಮ್ಮೆ ಹದ ಮಳೆಯಾಗಬೇಕು ಇಲ್ಲವೇ ಗುಡುಗಬೇಕು ಅನ್ನೋದು ಅಣಬೆ ಶಿಕಾರಿ ನಡೆಸುವವರ ಅಭಿಪ್ರಾಯ. ಇದನ್ನೂ ಓದಿ: ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ಪ್ರಕಾಶ್ ಅಂಚನ್ ಆಕ್ಷೇಪ
