ನವದೆಹಲಿ: ಪ್ರಸಕ್ತ 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ (India) ಒಟ್ಟು ಆಂತರಿಕ ಉತ್ಪನ್ನ (GDP) ಬೆಳವಣಿಗೆಯು ಶೇ. 7.8 ರಷ್ಟು ದಾಖಲಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಂದಾಜನ್ನೂ ಮೀರಿ ಮುನ್ನುಗ್ಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಸೋಮವಾರ ಈ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಹಣಕಾಸು, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ (ಐಟಿ) ಹಾಗೂ ವೃತ್ತಿಪರ ಸೇವಾ ವಲಯಗಳ ಅತ್ಯುತ್ತಮ ಬೆಳವಣಿಗೆಯಿಂದ ಮೊದಲ ತ್ರೈಮಾಸಿಕದ ಈ ಆರ್ಥಿಕ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದಾಖಲಾದ ಶೇ. 7.8 ರ ಬೆಳವಣಿಗೆಯು, ಕಳೆದ ವರ್ಷದ ಇದೇ ಅವಧಿಯಲ್ಲಿದ್ದ ಶೇ. 6.9 ಕ್ಕಿಂತ ಹೆಚ್ಚಾಗಿದೆ. ಹಿಂದಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಇದು ಶೇ. 8.6 ರಷ್ಟಿತ್ತು.
ಅಮೆರಿಕ ಇರಾನ್ ಯುದ್ಧ ಇತ್ಯಾದಿ ಕಾರಣಗಳಿಂದ ಆರ್‌ಬಿಐ ಈ ತ್ರೈಮಾಸಿಕದಲ್ಲಿ ಶೇ. 7 ರಷ್ಟು ಆರ್ಥಿಕ ಬೆಳವಣಿಗೆಯಾಗಬಹುದು ಎಂದು ಅಂದಾಜಿಸಿತ್ತು. ಆದರೆ ಭಾರತದ ಆರ್ಥಿಕತೆಯು ಈ ಅಂದಾಜಿಗಿಂತ ಹೆಚ್ಚಿನ ಸಾಧನೆ ಮಾಡಿದೆ.
India’s exemplary GDP growth of 7.8% during Q1 of FY 2026-27 is a herculean feat.
The collective strength of our people ensured India delivered such growth despite oil price shocks and supply chain issues in the midst of global uncertainties.
Doomsayers were doomed and India…
— Narendra Modi (@narendramodi) August 31, 2026
ಸ್ಥಿರ ಬೆಲೆಗಳ ಆಧಾರದ ಮೇಲಿನ ನೈಜ ಜಿಡಿಪಿ ಮೌಲ್ಯವು ಕಳೆದ ವರ್ಷದ 75.46 ಲಕ್ಷ ಕೋಟಿ ರೂ.ನಿಂದ ಈ ಬಾರಿ 81.36 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಹಣದುಬ್ಬರವನ್ನು ಹೊರತುಪಡಿಸಿದ ನಾಮಮಾತ್ರ ಜಿಡಿಪಿಯು ಶೇ. 10.3 ರಷ್ಟು ಬೆಳವಣಿಗೆ ಕಂಡಿದ್ದು, 88.27 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಮೋದಿ ಶ್ಲಾಘನೆ:
ಈ ಬೆಳವಣಿಗೆಯನ್ನು ‘ಅದ್ಭುತ ಸಾಧನೆ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, 2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತವು ಶೇ. 7.8 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿರುವುದು ಅಪರೂಪದ ಸಾಧನೆ. ದೇಶದ ಜನರ ಸಾಮೂಹಿಕ ಶಕ್ತಿಯಿಂದಾಗಿ ಭಾರತ ಮತ್ತೆ ಪುಟಿದೆದ್ದು ಅರಳಿದೆ. ಅಶುಭ ನುಡಿಯುವವರು ಮೂಲೆಗುಂಪಾಗಿದ್ದಾರೆ ದಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Estimated growth of real GDP in Q1 of FY 2026–27 is 7.8%.
Nominal GDP in Q1 of FY 2026–27 is estimated to have grown by 10.3%, while Real GVA has recorded growth of 8.2%.
The credit for this strong performance goes to the people of India and their hard work.
Reforms undertaken…— Nirmala Sitharaman (@nsitharaman) August 31, 2026
ಪರಿಶ್ರಮಕ್ಕೆ ಸಿಕ್ಕ ಫಲ:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಈ ಬಲವಾದ ಆರ್ಥಿಕ ಸಾಧನೆಯ ಸಂಪೂರ್ಣ ಶ್ರೇಯಸ್ಸು ಭಾರತೀಯರ ಕಠಿಣ ಪರಿಶ್ರಮಕ್ಕೆ ಸಲ್ಲುತ್ತದೆ. ಎನ್‌ಡಿಎ ಸರ್ಕಾರ ಜಾರಿಗೆ ತಂದ ಸುಧಾರಣೆಗಳು ಹಾಗೂ ಸಮರ್ಥ ಆರ್ಥಿಕ ನಿರ್ವಹಣೆಯು ಫಲ ನೀಡುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಅವಕಾಶಗಳನ್ನು ವಿಸ್ತರಿಸಲು ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.
