CinemaLatestMain PostNational

ಕತ್ರಿನಾ, ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಸೀಕ್ರೆಟ್‌ ಕೋಡ್‌- ಯಾರ‍್ಯಾರಿಗೆ ಆಹ್ವಾನ?

ನವದೆಹಲಿ: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಹಾಗೂ ನಟ ವಿಕ್ಕಿ ಕೌಶಲ್‌ ಜೋಡಿ ವಿವಾಹದ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದೆ. ಮದುವೆ ಎಲ್ಲಿ ನಡೆಯುತ್ತೆ, ಎಷ್ಟು ಖರ್ಚಾಗುತ್ತೆ, ಅತಿಥಿಗಳು ಯಾರ‍್ಯಾರು ಬರ್ತಾರೆ. ಹೀಗೆ ನಾನಾ ವಿಷಯಗಳು ಚರ್ಚೆಯಾಗ್ತಿವೆ.

ರಾಜಸ್ಥಾನದ ಸವಾಯ್‌ ಮಾಧೊಪುರ್‌ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಈ ಜೋಡಿಯ ವಿವಾಹ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು

ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ವಿವಾಹ ಸಮಾರಂಭಕ್ಕೆ ಬರುವವರು ಮೊಬೈಲ್‌ ಬಳಸುವಂತಿಲ್ಲ ಎಂದು ಷರತ್ತು ವಿಧಿಸಿರುವ ಸುದ್ದಿ ಬಹಳ ಸದ್ದು ಮಾಡಿತ್ತು. ಅಂತೆಯೇ ಅತಿಥಿಗಳ ವಿಚಾರವಾಗಿ ಮತ್ತೊಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ. ಈ ಜೋಡಿ ಮದುವೆಗೆ ಬರುವವರಿಗೆ ಸೀಕ್ರೆಟ್‌ ಕೋಡ್‌ ಇರುತ್ತಂತೆ. ಸೀಕ್ರೆಟ್‌ ಕೋಡ್‌ ಹೊಂದಿರುವವರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರ್ಹರು. ಕೋಡ್‌ ಇದ್ರೆ ಮಾತ್ರ ಅತಿಥಿಗಳಿಗೆ ಹೋಟೆಲ್‌ನಲ್ಲಿ ರೂಮ್‌ಗಳು ಸಿಗುತ್ತವೆ.

ಇನ್ನು ಕತ್ರಿನಾ ಹಾಗೂ ವಿಕ್ಕಿ ತಮ್ಮ ವಿವಾಹಕ್ಕೆ ಯಾರ‍್ಯಾರನ್ನು ಆಹ್ವಾನಿಸಬೇಕು ಎಂದು ಲಿಸ್ಟ್‌ ಕೂಡ ರೆಡಿ ಮಾಡಿದ್ದಾರಂತೆ. ಕೋವಿಡ್‌ ರೂಪಾಂತರಿ ಓಮಿಕ್ರಾನ್‌ ಭೀತಿ ಇರುವುದರಿಂದ ಕೆಲವೇ ಪ್ರಮುಖ ಅತಿಥಿಗಳನ್ನು ಆಹ್ವಾನಿಸಲು ಇಬ್ಬರೂ ನಿರ್ಧರಿಸಿದ್ದಾರೆ. ಕತ್ರಿನಾ ಅವರಿಗೆ ಬಹಳ ಹತ್ತಿರದವರಾದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಕುಟುಂಬದವರು ಗೆಸ್ಟ್‌ ಲಿಸ್ಟ್‌ನಲ್ಲಿದ್ದಾರೆ ಎನ್ನಲಾಗಿದೆ. ʼಕತ್ರಿನಾ ಇನ್‌ ನ್ಯೂಯಾರ್ಕ್‌ʼ ಸಿನಿಮಾ ನಿರ್ದೇಶಿಸಿರುವ ಕಬಿರ್ ಖಾನ್‌ ಅವರಿಗೂ ಆಹ್ವಾನ ನೀಡಲಾಗಿದೆಯಂತೆ. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

ಬಾಲಿವುಡ್‌ ನಟ ಶಾರೂಕ್‌ ಖಾನ್‌, ನಿರ್ದೇಶಕ ರೋಹಿತ್‌ ಶೆಟ್ಟಿ, ನಟಿಯರಾದ ಅನುಷ್ಕಾ ಶರ್ಮ ಹಾಗೂ ಆಲಿಯಾ ಭಟ್‌ ಅತಿಥಿಗಳ ಲಿಸ್ಟ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back to top button