Bengaluru CityDistrictsKarnatakaLatestMain Post

ಶಂಕಿತ ಉಗ್ರರನ್ನು ಬಂಧಿಸಿದ್ದ ಶಿವಮೊಗ್ಗ SP ಸೇರಿ ನಾಲ್ವರು IPS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ನಾಲ್ವರು ಐಪಿಎಸ್ (IPS) ಅಧಿಕಾರಿಗಳ ವರ್ಗಾವಣೆ ಮಾಡಿ ಎಂದು ರಾಜ್ಯ ಸರ್ಕಾರ (State Government) ಆದೇಶ ನೀಡಿದೆ.

ಸಿಐಡಿ ಎಸ್‌ಪಿ ಹುದ್ದೆಯಲ್ಲಿದ್ದ 2016ರ ಬ್ಯಾಚ್‌ನ ಜಿಕೆ ಮಿಥುನ್ ಕುಮಾರ್ ಅವರನ್ನು ಶಿವಮೊಗ್ಗದ (Shivamogga) ಎಸ್‌ಪಿಯಾಗಿ (SP), ಬಳ್ಳಾರಿಯ ಎಸ್‌ಪಿಯಾಗಿದ್ದ ಸೈದುಲು ಅದಾವತ್ ಅವರನ್ನು ಬೆಂಗಳೂರಿನ (Bengaluru) ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನೆ ನಿಗ್ರಹ ಘಟಕದ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನೆ ನಿಗ್ರಹ ಘಟಕದ ಎಸ್‌ಪಿಯಾಗಿದ್ದ ರಂಜಿತ್ ಕುಮಾರ್ ಬಳ್ಳಾರಿಯ (Ballary) ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ವೇಣುಗೋಪಾಲ್‌ ಫುಲ್‌ ಕ್ಲಾಸ್‌ – ಪಾದಯಾತ್ರೆ ಮುಗಿಯುವ ಮೊದಲೇ ಕಾಲ್ಕಿತ್ತ ಜಮೀರ್‌

ಶಿವಮೊಗ್ಗ ಎಸ್‌ಪಿಯಾಗಿದ್ದ ಬಿ.ಎಂ. ಲಕ್ಷ್ಮಿಪ್ರಸಾದ್ ಅವರನ್ನು ವರ್ಗಾವಣೆ ಮಾಡಿದ್ದು, ಯಾವುದೇ ಹುದ್ದೆಯನ್ನು ನೀಡಿಲ್ಲ. ಅವರು ಕಳೆದ ವರ್ಷ ಏಪ್ರಿಲ್ 2ರಂದು ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇತ್ತೀಚೆಗೆ ಶಂಕಿತ ಉಗ್ರರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ನಗರದಲ್ಲಿ ಸಂಭವಿಸಿದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳನ್ನು ಅದೇ ದಿನ ರಾತ್ರಿಯೇ ಬಂಧಿಸುವಲ್ಲಿ ಯಶಸ್ಸು ಕಂಡಿದ್ದರು. ಇದನ್ನೂ ಓದಿ: PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

Live Tv

Leave a Reply

Your email address will not be published. Required fields are marked *

Back to top button