ನವದೆಹಲಿ: ದೇಶಾದ್ಯಂತ ಅಕ್ರಮ ನುಸುಳುವಿಕೆ ಮತ್ತು ಇತರೆ ಕಾರಣಗಳಿಂದ ಉಂಟಾಗುತ್ತಿರುವ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಯನ್ನು (Unnatural Demographic Change) ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ.
ಎಕ್ಸ್‌ನಲ್ಲಿ ಈ ವಿಚಾರವನ್ನು ಪ್ರಕಟಿಸಿದ ಗೃಹ ಸಚಿವ ಅಮಿತ್ ಶಾ (Amit Shah), ಒಳನುಸುಳುವಿಕೆ ಮತ್ತು ಇತರ ಕಾರಣಗಳಿಂದಾಗಿ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಯು ಯಾವುದೇ ರಾಷ್ಟ್ರದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮಹತ್ವದ ಸವಾಲನ್ನು ಒಡ್ಡುತ್ತದೆ. ಈ ಸವಾಲನ್ನು ಎದುರಿಸಲು 2025ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ (PM Narendra Modi) ಅವರು ‘ಜನಸಂಖ್ಯಾ ಬದಲಾವಣೆಯ ಉನ್ನತ ಮಟ್ಟದ ಸಮಿತಿ’ ರಚನೆಯನ್ನು ಪ್ರಕಟಿಸಿದ್ದರು. ಈ ಭಾಷಣದ ಮುಂದುವರಿದ ಭಾಗವಾಗಿ ಸರ್ಕಾರ ಈಗ ಈ ಸಮಿತಿಯನ್ನು ರಚಿಸಿದೆ ಎಂದು ನಿಮಗೆ ತಿಳಿಸಲು ನನಗೆ ಹರ್ಷವಾಗುತ್ತಿದೆ ಎಂದು ಎಂದು ತಿಳಿಸಿದ್ದಾರೆ.
ಸಮಿತಿಯಲ್ಲಿ ಯಾರಿದ್ದಾರೆ?
ಕೇಂದ್ರ ಸರ್ಕಾರವು ಈ ವಿಶೇಷ ಸಮಿತಿಗೆ ಅತ್ಯಂತ ತಜ್ಞರನ್ನು ನೇಮಕ ಮಾಡಿದೆ. ಸುಪ್ರೀಂ ಕೋರ್ಟ್‌ನ (Supreme Court) ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವಲೇಕರ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಸದಸ್ಯರಾಗಿ ಭಾರತದ ಜನಗಣತಿ ಆಯುಕ್ತರು, ನಿವೃತ್ತ ಐಎಎಸ್ ಅಧಿಕಾರಿ ದುರ್ಗಾ ಶಂಕರ್ ಮಿಶ್ರಾ, ನಿವೃತ್ತ ಐಪಿಎಸ್ ಅಧಿಕಾರಿ ಬಾಲಾಜಿ ಶ್ರೀವಾಸ್ತವ, ಖ್ಯಾತ ಅರ್ಥಶಾಸ್ತ್ರಜ್ಞೆ ಡಾ. ಶಮಿಕಾ ರವಿ, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ವಿದೇಶಿಗರ ವಿಭಾಗ) ಇರಲಿದ್ದಾರೆ.
घुसपैठ और अन्य कारणों से Unnatural Demographic Change किसी भी राष्ट्र के वर्तमान व भविष्य के लिए एक बहुत बड़ी चुनौती है।
इसी चुनौती से निपटने के लिए 15 अगस्त 2025 को प्रधानमंत्री @narendramodi जी ने ‘High-Level Committee on Demographic Change’ की घोषणा की थी। मुझे बताते हुए हर्ष…
— Amit Shah (@AmitShah) May 26, 2026
ಸಮಿತಿಗೆ ನೀಡಿರುವ ಜವಾಬ್ದಾರಿ ಏನು?
ದೇಶದ ಗಡಿ ಭಾಗಗಳಲ್ಲಿ ಮತ್ತು ವಿವಿಧ ಪ್ರದೇಶಗಳಲ್ಲಿ ಅಕ್ರಮ ವಲಸೆಯಿಂದ ಆಗುತ್ತಿರುವ ಜನಸಂಖ್ಯಾ ಏರುಪೇರುಗಳ ಬಗ್ಗೆ ಆಳವಾದ ಅಧ್ಯಯನ ಮಾಡುವುದು. ಧಾರ್ಮಿಕ ಮತ್ತು ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ ಕಂಡುಬರುತ್ತಿರುವ ಹಠಾತ್ ಹಾಗೂ ಅಸಹಜ ಜನಸಂಖ್ಯಾ ಪಲ್ಲಟಗಳ ಮಾದರಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವುದು. ಈ ಗಂಭೀರ ಸಮಸ್ಯೆಯನ್ನು ಎದುರಿಸಲು ಸರ್ಕಾರಕ್ಕೆ ನಿಶ್ಚಿತ ಕಾಲಮಿತಿಯೊಳಗೆ ರಚನಾತ್ಮಕ ಶಿಫಾರಸುಗಳು ಮತ್ತು ಕಟ್ಟುನಿಟ್ಟಿನ ಪರಿಹಾರಗಳನ್ನು ಒದಗಿಸುವುದು.
ಅಮಿತ್ ಶಾ ಹೇಳಿದ್ದೇನು?
ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಯು ಕೇವಲ ಅಂಕಿ-ಅಂಶಗಳ ವಿಷಯವಲ್ಲ. ಇದು ದೇಶದ ಸಾರ್ವಭೌಮತ್ವ, ರಾಷ್ಟ್ರೀಯ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ಮುಖ್ಯವಾಗಿ ಬುಡಕಟ್ಟು ಸಮಾಜಗಳ ಸಂರಕ್ಷಣೆಯೊಂದಿಗೆ ನೇರವಾಗಿ ನಂಟು ಹೊಂದಿದೆ. ಇದನ್ನೂ ಓದಿ: ಸುವೇಂದು ಖಡಕ್ ಆಕ್ಷನ್ ಬೆನ್ನಲ್ಲೇ ಸ್ವದೇಶಕ್ಕೆ ಓಡುತ್ತಿದ್ದಾರೆ ಅಕ್ರಮ ಬಾಂಗ್ಲಾ ಪ್ರಜೆಗಳು!
ದೇಶದ ಜನಸಂಖ್ಯೆಯನ್ನು ಕೃತಕವಾಗಿ ಬದಲಾಯಿಸಲು ನಡೆಯುತ್ತಿರುವ ಇಂತಹ ಯಾವುದೇ ಸಂಘಟಿತ ಪ್ರಯತ್ನಗಳಿಗೆ ಅಥವಾ ಪಿತೂರಿಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
