– ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್, ಪ್ರಕಾಶ್ ಬರಾಕ್‌ಗೆ ಬಜೆಪಿ ಟಿಕೆಟ್
ನವದೆಹಲಿ: ಒಂದು ತಿಂಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್ (TMC)ಗೆ ರಾಜೀನಾಮೆ ನೀಡಿದ್ದ ಸುಖೇಂದು ಶೇಖರ್ ರಾಯ್ (Sukhendu Sekhar Roy), ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಶುಕ್ರವಾರ (ಇಂದು) ಪಶ್ಚಿಮ ಬಂಗಾಳದಿಂದ ಬಿಜೆಪಿ ಅಭ್ಯರ್ಥಿಗಳಾಗಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂವರು ಸಂಸದರು ಬಿಜೆಪಿಯಿಂದ (BJP) ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾ ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಟಿಎಂಸಿ ಯಿಂದ ಹೊರಬಂದ ಬಳಿಕ ಈ ಮೂವರು ನಾಯಕರು ಜುಲೈ 9 ರಂದು ಕೋಲ್ಕತ್ತಾದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು. ಪಕ್ಷ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಅವರನ್ನ ಬಂಗಾಳದಿಂದ (West Bengal) ಬಿಜೆಪಿಯ ರಾಜ್ಯಸಭೆ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು.
ಈ ವರ್ಷ ನಡೆದ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಟಿಎಂಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
