ನವದೆಹಲಿ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ಭಕ್ತರು ದೇಣಿಗೆಯಾಗಿ ನೀಡಿದ್ದ ಬಂಗಾರದ ಆಭರಣಗಳ ಕಳ್ಳತನ (Donation Row) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಹೊಸ ಅನುಮಾನವೊಂದು ಮೂಡಿದೆ. ಕಳುವಾಗಿರುವ ಚಿನ್ನವನ್ನು ರೈಲಿನಲ್ಲಿ ಕರ್ನಾಟಕಕ್ಕೆ ಸಾಗಿಸಿ, ಇಲ್ಲಿ ಕರಗಿಸಿ ಚಿನ್ನದ ಬಿಸ್ಕೆಟ್‌ಗಳಾಗಿ ಪರಿವರ್ತಿಸಿರಬಹುದೆಂಬ ಶಂಕೆ ಎಸ್‌ಐಟಿಗೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಭಕ್ತರು ರಾಮಮಂದಿರಕ್ಕೆ 26-27 ಕೆಜಿ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡುತ್ತಿದ್ದರು. ಆದರೆ, ದೇಣಿಗೆ ದಾಖಲೆಗಳಲ್ಲಿ ತೂಕವನ್ನು ಕಡಿಮೆ ನಮೂದಿಸಿ ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಉದಾಹರಣೆಗೆ, 26 ಕೆಜಿ ಆಭರಣ ಬಂದಿದ್ದರೆ, ದಾಖಲೆಯಲ್ಲಿ 25 ಕೆಜಿ ಎಂದು ದಾಖಲಿಸಿ ಉಳಿದ 1 ಕೆಜಿ ಚಿನ್ನವನ್ನು ಕಳವು ಮಾಡಲಾಗುತ್ತಿತ್ತು ಎಂಬ ಶಂಕೆ ತನಿಖೆಯಲ್ಲಿ ವ್ಯಕ್ತವಾಗಿದೆ. ಇದನ್ನೂ ಓದಿ: ಕೈ ಕೊಟ್ಟ ಮಳೆ – ಮೈಸೂರು, ಬೆಂಗ್ಳೂರು ಮಹಾರಾಷ್ಟ್ರದತ್ತ ಗುಳೆ ಹೊರಟ ವಿಜಯನಗರ ಜಿಲ್ಲೆಯ ಜನ
ಹೀಗೆ ವಿವಿಧ ದೇಣಿಗೆಗಳಿಂದ ಕಳವು ಮಾಡಿರುವ ಚಿನ್ನವನ್ನು ರೈಲಿನ ಮೂಲಕ ಕರ್ನಾಟಕಕ್ಕೆ ಸಾಗಿಸಿ, ಬಳಿಕ ಆರೋಪಿಗಳು ವಿಮಾನದ ಮೂಲಕ ರಾಜ್ಯಕ್ಕೆ ಬಂದು ಆ ಚಿನ್ನವನ್ನು ಕರಗಿಸಿ ಬಿಸ್ಕೆಟ್‌ಗಳಾಗಿ ಪರಿವರ್ತಿಸಿರಬಹುದು ಎಂದು ತನಿಖಾ ತಂಡ ಶಂಕಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನವವಿವಾಹಿತೆ ಅನುಮಾನಾಸ್ಪದ ಸಾವು ಕೇಸ್ – ಸಾವಿಗೂ ಮುನ್ನ ಸಹೋದ್ಯೋಗಿಗಳಿಗೆ ಪಾರ್ಟಿ ಕೊಟ್ಟಿದ್ದ ಆಕೃತಿ
ಆದರೆ, ಈ ಮಾಹಿತಿ ಕುರಿತು ತನಿಖಾ ಸಂಸ್ಥೆಗಳು ಇನ್ನೂ ಅಧಿಕೃತವಾಗಿ ಯಾವುದೇ ದೃಢೀಕರಣ ನೀಡಿಲ್ಲ. ಸದ್ಯ ಇದು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿರುವ ಒಂದು ಶಂಕೆಯಾಗಿದ್ದು, ಪ್ರಕರಣದ ಕುರಿತು ಎಸ್‌ಐಟಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: ಹಾಸನ ಜಿಲ್ಲೆಯ ವಿವಿಧೆ ಭಾರೀ ಗಾಳಿ ಸಹಿತ ಮಳೆ – ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ
